ಕಲೆ, ಸಂಸ್ಕೃತಿ ಭಾರತದ ಅಸ್ಮಿತೆ : ಡಾ. ಶಶಿಧರ ನರೇಂದ್ರ

Art, culture is the identity of India: Dr. Shasidhar Narendra

ದಾರವಾಢ 04 : ಭಾರತೀಯ ಕಲೆ ಮತ್ತು ಸಂಸ್ಕೃತಿಗಳು ಸಂಸ್ಕಾರದ ಬಲದಿಂದ ಜಗತ್ತಿನಲ್ಲಿಯೇ ಶ್ರೇಷ್ಠವಾಗಿವೆ. ತೊಟ್ಟಿಲಿನ ಜೋಗುಳದಿಂದ ಹಿಡಿದು ಚಟ್ಟದಲ್ಲಿ ಹೋಗುವಾಗ ಹಾಡುವ ಭಜನೆಯವರೆಗೆ ಹೀಗೆ ಕುಟುಂಬ ಪದ್ಧತಿಯಲ್ಲಿ ಹುಟ್ಟಿನಿಂದ ಸಾವಿನವರೆಗೆ ಅನೇಕ ಬಗೆಯ ಲಲಿತ ಕಲೆಗಳು ಹಾಸುಹೊಕ್ಕಾಗಿವೆ. ಆದರೆ ಸಾವಿರಾರು ವರ್ಷಗಳಿಂದ ವಿದೇಶಿ ಆಕ್ರಮಣಕಾರರು ಭಾರತೀಯ ಸಂಸ್ಕೃತಿಯನ್ನು ಪರಂಪರೆಯನ್ನು ನಾಶಮಾಡಲು ಪ್ರಯತ್ನಿಸುತ್ತಲೇ ಇದ್ದಾರೆ. ಹಾಗಾಗಿ ನಮ್ಮ ಶ್ರೇಷ್ಠ ಪರಂಪರೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಕಲವಿದರು ಕಲಾಪೋಶಕರ ಮೇಲಿದೆ ಎಂದು ಸಂಸ್ಕಾರ ಭಾರತೀಯ ಉತ್ತರ ಪ್ರಾಂತದ ಪ್ರಧಾನ ಕಾರ್ಯದರ್ಶಿ ಡಾ.ಶಶಿಧರ ನರೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು. 

ದಿನಾಂಕ: 30.11.2024ರಂದು ಸಂಸ್ಕಾರ ಭಾರತಿಯ ಧಾರವಾಡ ಮಹಾನಗರವು ನಗರದ ಆದರ್ಶ ಬಾಲಿಕಾ ಪ್ರೌಢಶಾಲೆಯ ಶಿಶುಮಂದಿರ ಸಭಾಂಗಣದಲ್ಲಿ ಏರಿ​‍್ಡಸಿದ್ದ ಸಂಸ್ಕಾರ ಭಾರತಿ ಧಾರವಾಡ ಮಹಾನಗರ ಪದಾಧಿಕಾರಿಗಳ ಪದಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕದ ಉತ್ತರ ಪ್ರಾಂತದ ಮಹಾಮಂತ್ರಿ ಡಾ.ಶಶಿಧರ ನರೇಂದ್ರ ಮಾತನಾಡುತ್ತ ಮೆಕಾಲೆ ಶಿಕ್ಷಣ ಪದ್ಧತಿಯು ಭಾರತೀಯ ವೇಷದಲ್ಲಿರುವ ವಿದೇಶಿ ಮನೋಭಾವವು ದೇಹದಲ್ಲಿರುವ ಕ್ಯಾನ್ಸರನಂತೆ ಒಳಗಿಂದೊಳೊಗೇನೇ ಹಾಳುಮಾಡುತ್ತಿದೆ, ಇದನ್ನು ತೊಡೆದು ಭಾರತೀಯ ಸಂಸ್ಕೃತಿ ಕಲೆ ಪರಂಪರೆಯನ್ನು ಕಾಪಾಡುವ ಜವಾಬ್ದಾರಿಯು ಈಗಿನ ಪೀಳಿಗೆಯ ಮೇಲಿದೆ ಎಂದರು. 

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಸೌಭಾಗ್ಯ ಕುಲಕರ್ಣಿ ಮಾತನಾಡುತ್ತ ನಮ್ಮ ಭಾರತೀಯ ಸಂಸ್ಕೃತಿ ಯಶಸ್ವಿ ಜೀವನಕ್ಕೆ ಅತ್ಯಗತ್ಯವಾಗಿದೆ. ಸಂಗೀತದ ಥೆರಪಿಯಿಂದ ನಮ್ಮ ಯಾವುದೇ ಕಾಯಿಲೆಯ ಗುಣಪಡಿಸುವ ಶಕ್ತಿ ಹೊಂದಿದೆ ಎಂದರು. ಆದರ್ಶ ಬಾಲಿಕಾ ಪ್ರೌಢಶಾಲೆಯ ಕಾರ್ಯದರ್ಶಿಗಳಾದ ಪ್ರೊ.ಗುಂಡಣ್ಣ ರಾಜವಂಶಿ ಮಾತನಾಡಿದರು.   

ಸಂಸ್ಕಾರ ಭಾರತಿ ಧಾರವಾಡ ಮಹಾನಗರದ ಅಧ್ಯಕ್ಷೆ ಡಾ.ಸೌಭಾಗ್ಯ ಕುಲಕರ್ಣಿ, ಉಪಾಧ್ಯಕ್ಷರಾಗಿ ಡಾ.ಶ್ರೀಧರ ಕುಲಕರ್ಣಿ, ಡಾ.ವಿಜಯ ತ್ರಾಸದ, ಅಶೋಕ ಮೊಕಾಶಿ, ಕುಮಾರ ಮರಡೂರ, ಸಂಘಟನಾ ಕಾರ್ಯದರ್ಶಿ ಪ್ರಸಾದ ಮಡಿವಾಳರ, ಸಹಕಾರ್ಯದರ್ಶಿಯಾಗಿ ವೈಶಾಲಿ ರಸಾಳಕರ, ಶಿಲ್ಪಾ ಪಾಂಡೆ, ಪ್ರಕಾಶ ಬಾಳಿಕಾಯಿ, ಕೋಶ ಪ್ರಮುಖರಾಗಿ ವೈಭವ ಮುತಾಲಿಕ, ಪ್ರಚಾರ ಪ್ರಮುಖ ವಿಜಯ ಸುತಾರ, ಸಹ ಪ್ರಚಾರ ಪ್ರಮುಖ ಅಶೋಕ ಕೋರಿ, ಕಾರ್ಯಕಾರಿಣಿ ಸದಸ್ಯರಾಗಿ ರವಿ ರಸಾಳಕರ, ಶರಭೇಂದ್ರಸ್ವಾಮಿ, ಚೇತನ ಕಣವಿ, ಮಲ್ಲೇಶ ಹೂಗಾರ, ಪ್ರದರ್ಶನ ಕಲೆ ವೀರಣ್ಣ ಪತ್ತಾರ, ದೃಶ್ಯಕಲೆ ಶಶಿಧರ ಲೋಹಾರ, ಸಾಹಿತ್ಯ ಪ್ರಮುಖ ನಾಗೇಂದ್ರ ದೊಡ್ಡಮನಿ, ಲೋಕಕಲೆ ಸಂಯೋಜಕ ವಿನಾಯಕ ಭಟ್ಟ ಶೇಡಿಮನೆ, ಪ್ರಾಚ್ಯಕಲೆ ಪ್ರಮುಖರಾಗಿ ಎಸ್‌.ಕೆ.ಪತ್ತಾರ ಪದ ಸ್ವೀಕಾರ ಮಾಡಿದರು.   

ಪ್ರದರ್ಶನ ಕಲೆಯ ತಂಡದಲ್ಲಿ ರೋಹಿಣಿ ಇಮಾರತಿ, ಬಸು ಹಿರೇಮಠ, ವಿನೋದ ಪಾಟೀಲ, ಡಾ.ವೀಣಾ ಬಡಿಗೇರ, ಶೃತಿ ಕುಲಕರ್ಣಿ, ವಿಷಯ ಜೇವೂರ, ಅರ್ಚನಾ ಪತ್ತಾರ, ವಿಜೇತಾ ವೆರ್ಣೇಕರ, ಡಾ.ನವಮಿ ಉಪಾಧ್ಯೆ, ಆರತಿ ದೇವಶಿಖಾಮಣಿ, ದೃಶ್ಯಕಲೆ ತಂಡದಲ್ಲಿ ಸುಧೀರ ಫಡ್ನವೀಸ, ಮಲ್ಲಿಕಾ ಬಿ.ಎನ್‌., ಯಶವಂತ ಪತ್ತಾರ, ಹಣಮಂತಪ್ಪ ಬಿ. ಲೋಕಕಲೆಯ ತಂಡದಲ್ಲಿ ಮಂಜುನಾಥ ಹೆಗಡೆ, ಶಶಿಕಲಾ ಜೋಶಿ, ಸಾಹಿತ್ಯ ತಂಡದಲ್ಲಿ ಡಾ.ಶ್ರೀಶೈಲ ಮಾದಣ್ಣವರ, ಡಾ.ಕೃಷ್ಣ ಕಟ್ಟಿ, ಹಾಗೂ ಡಾ.ಬಸವರಾಜ ಕುರಿಯವರ ಅವರನ್ನೊಳಗೊಂಡ ಪ್ರಾಚ್ಯಕಲೆಯ ತಂಡವನ್ನು ರಚನೆ ಮಾಡಲಾಯಿತು.    

ಶಿಲ್ಪಾ ಪಾಂಡೆ ನಿರೂಪಿಸಿದರು, ಕಾರ್ಯದರ್ಶಿ ಪ್ರಸಾದ ಮಡಿವಾಳರ ಸ್ವಾಗತಿಸಿದರು. ವೀರಣ್ಣ ಪತ್ತಾರ ಅತಿಥಿಗಳನ್ನು ಪರಿಚಯಿಸಿದರು. ವೈಶಾಲಿ ರಸಾಳಕರ ಧ್ಯೇಯಗೀತೆ ಪ್ರಸ್ತುತ ಪಡಿಸಿದರು.  ಪ್ರಕಾಶ ಬಾಳಿಕಾಯಿ ವಂದಿಸಿದರು.  ಶ್ರೀನಿವಾಸ ಘೋಷ ವಂದೇ ಮಾತರಂ ಪ್ರಸ್ತುತ ಪಡಿಸಿದರು.