ದೇವರಹಿಪ್ಪರಗಿ 02: ಪ್ರಸ್ತುತ ದಿನಗಳಲ್ಲಿ ಕಲೆ ಮತ್ತು ಕಲಾವಿದರಿಗೆ ಪ್ರೊತ್ಸಾಹ ನೀಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಸ್ಥಳೀಯ ಮಠದ ವೇದಮೂರ್ತಿ ರಾಜಶೇಖರಯ್ಯ ಹಿರೇಮಠ ಹೇಳಿದರು.ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿ ಭಾನುವಾರ ಏರಿ್ಡಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ದಿ. ಭೀಮರಾಯ ಬೋರಗಿ ಅವರ ದ್ವಿತೀಯ ಪುಣ್ಯ ಸ್ಮರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಮತ್ತು ಕಲಾವಿದರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು.ಕಲೆ, ಸಾಹಿತ್ಯ, ಸಂಗೀತ, ವಾಸ್ತುಶಿಲ್ಪಕ್ಕೆ ಹೆಸರಾಗಿರುವ ವಿಜಯಪುರದಂತಹ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಕಲಾವಿದರಿದ್ದಾರೆ. ಆದರೆ, ಇವರನ್ನು ಗುರುತಿಸಿ, ಪ್ರೊ?ತ್ಸಾಹಿಸುವ ಕೆಲಸ ನಡೆಯದೇ ಇರುವುದರಿಂದ ಅವರಲ್ಲಿರುವ ಪ್ರತಿಭೆ ಮರೆಯಾಗುತ್ತಿದೆ. ಹಾಗಾಗಿ, ಸಮಾಜದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಪ್ರೊತ್ಸಾಹದಿಂದ ಮಾತ್ರವೇ ಕಲೆ ಮತ್ತು ಕಲಾವಿದರು ಉಳಿಯಲು ಸಾಧ್ಯ. ಯಲಗೋಡ ಗ್ರಾಮದ ದಿ. ಭೀಮರಾಯ ಬೋರಗಿ ಅವರ ಬಯಲಾಟದ ಕಾರ್ಯಕ್ರಮಗಳು ಇನ್ನು ಕಣ್ಣು ಮುಂದೆ ಅಚ್ಚಳಿಯಾಗಿ ಉಳಿದಿವೆ ಬಯಲಾಟವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಸರ್ಕಾರ ಮಾಡಬೇಕು ಎಂದರು.ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಂಗೀತ ಕಲಾವಿದ ಶಿಕ್ಷಕ ಹಣಮಂತ ಬೋರಗಿ ಅವರು ಮಾತನಾಡಿ, ಜನಪದ ಸಂಸ್ಕೃತಿಯ ಪ್ರತೀಕ ಬಯಲಾಟ ಕಲೆಯ ಮೇಲೂ ಬರದ ಕರಿ ನೆರಳು ಬಿದ್ದಿದ್ದು, ಕಲಾವಿದರು ಸಂಕಷ್ಟದಲ್ಲೇ ದಿನ ದುಡುವಂತಾಗಿದೆ. ಈ ಭಾಗದ ಬಯಲಾಟ ಕಲೆ ಶತಮಾನಗಳಿಂದ ಈಗಲೂ ನಾಡಿನಾದ್ಯಂತ ಜೀವಂತವಿದೆ ಎನ್ನುವುದಕ್ಕೆ ನಮ್ಮ ತಂದೆಯವರಾದ ದಿ. ಭೀಮರಾಯ ಬೋರಗಿ ಅವರಿಗೆ 2018 ರಲ್ಲಿ ರಾಜ್ಯ ಸರ್ಕಾರ ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ಸಾಕ್ಷಿಯಾಗಿದೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಕುಟುಂಬ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ ಕಲೆ, ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸರ್ಕಾರಗಳು ಮಾಡಬೇಕಾಗಿದೆ. ಗ್ರಾಮದ ಪ್ರಮುಖರು, ಶ್ರೀಗಳು ಹಾಗೂ ಕಲಾವಿದರು ಮಾತನಾಡಿ ದಿ. ಭೀಮರಾಯ ಬೋರಗಿ ಅವರ ಕುರಿತು ಪ್ರಶಂಸನೀಯ ಮಾತುಗಳನ್ನು ಆಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಅಶೋಕ ಮಠ ವಹಿಸಿದ್ದರು.ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ರಾಜಶೇಖರ ಗೌಡ ಪಾಟೀಲ, ಮುರಳಿಧರ ಕುಲಕರ್ಣಿ, ಶರಣಪ್ಪ ಚಬನೂರ, ಬಾಬು ಕುಳಗೇರಿ, ನಿಂಗಪ್ಪ ಶಾಸ್ತ್ರಿ, ದೇವೇಂದ್ರ ಶರಣರು, ಚಿದಾನಂದ ಶಾಸ್ತ್ರಿ, ಬಾಬು ಖ್ಯಾತನಾಳ, ಹುಯೋಗಿ ತಳ್ಳೊಳ್ಳಿ, ಅಣ್ಣಪ್ಪ ತೋಟದ, ಬಾಬು ಬಾಗೆವಾಡಿ, ಮುರಿಗೆಪ್ಪ ದೊಡ್ಡಮನಿ,ಸೋಮಶೇಖರ ಹೊಸಮನಿ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಬಯಲಾಟದ ಕಲಾವಿದರು ಹಾಗೂ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿನಾಯಕ ಕುಲಕರ್ಣಿ ನಿರೂಪಿಸಿ ವಂದಿಸಿದರು.ಹಳ್ಳೆಪ್ಪ ಬೋರಗಿ ಸ್ವಾಗತಿಸಿದರು.