ಲೋಕದರ್ಶನ ವರದಿ
ಶಿಗ್ಗಾವಿ :ಕಳೆದ ಎರಡು ತಿಂಗಳ ಹಿಂದೆ ಕಳ್ಳತನವಾಗಿದ್ದ 6 ಲಕ್ಷ ಮೌಲ್ಯದ ನಾಲ್ಕು ಎತ್ತು, ಎರಡು ಎಮ್ಮೆಗಳನ್ನು ಭಾನುವಾರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಶಿಗ್ಗಾವಿ-ಬಂಕಾಪುರದ ಪೊಲೀಸ್ರು, ಕಳ್ಳತನಕ್ಕೆ ಬಳಿಸಿದ ಬುಲೋರಾ ಮ್ಯಾಕ್ಸಿ ಟ್ರಕ್ ಸಮೇತ ಮೂವುರು ಕಳ್ಳರನ್ನು ಬಂಕಾಪುರ ಬ್ರಿಡ್ಜ್ ಕೆಳಗಡೆ ವಶಕ್ಕೆ ಪಡೆದುಕೊಂಡಿದ್ದಾರೆ.
ಶಿಕಾರಿಪುರ ತಾಲೂಕಿನ ಸವಾಸಪುರ ಗ್ರಾಮದ ದಾದಾಪೀರ್ ರಾಜೇಸಾಬ ಕಡೇಮನಿ, ಅಬ್ದುಲ್ ಹುಸೇನಸಾಬ ಪತ್ತಾರ, ಹಾನಗಲ್ ತಾಲೂಕಿನ ಮುಳತಳ್ಳಿ ಗ್ರಾಮದ ಖಾದರಸಾಬ ರಾಜೇಸಾಬ ಜಾತಿಗೇರ ಎಂಬ ಕಳ್ಳರನ್ನು ಕಳ್ಳತನಕ್ಕೆ ಬಳಿಸಿದ ಮಹೇಂದ್ರ ಬುಲೇರಾ ಮ್ಯಾಕ್ಸಿ ಟ್ರಕ್ ಸಮೇತ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆ ಹಿನ್ನಲೆ :
14-9-2019 ರಂದು ತಾಲೂಕಿನ ಪಾಣಿಗಟ್ಟಿ ಗ್ರಾಮದ ರೈತ ಶಿವಪ್ಪ ಶೆರೇವಾಡ ಎಂಬವರಿಗೆ ಸೇರಿರುವ ಎರಡು ಎತ್ತು, ಎರಡು ಎಮ್ಮೆ ಹಾಗೂ ಹುಲಸೋಗಿ ಗ್ರಾಮದ ರೈತರಿಗೆ ಸೇರಿದ ಎರಡು ಎಮ್ಮೆ ಕಳುವು ಮಾಡಿದ ಕಳ್ಳರು, ಹಾನಗಲ್ಲ ತಾಲೂಕು ಮುಳತಳ್ಳಿ ಗ್ರಾಮದಲ್ಲಿ ಕೂಡಿಟ್ಟು, ಶನಿವಾರ ಹುಲಗೂರ ಅಥವಾ ರಾಣೆಬೆನ್ನೂರಿಗೆ ಮಾರಾಟ ಮಾಡಲು ಹೋಗಲು ಯೋಚಿಸುತ್ತ ಬಂಕಾಪುರ ಬ್ರಿಡ್ಜ್ ಕೆಳಗೆಡೆ ನಿಂತಿದ್ದರು.
ಖಚಿತ ಮೆರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ದೇವರಾಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾಜರ್ುನ ಬಾಲದಂಡೆ, ಡಿವೈಎಸ್ಪಿ ಓ.ಬಿ.ಕಲ್ಲೇಶಪ್ಪ, ಸಿಪಿಐ ಬಸವರಾಜ ಹಳಬಣ್ಣವರ ಮಾರ್ಗದರ್ಶನದಲ್ಲಿ ಬಂಕಾಪುರ,ಶಿಗ್ಗಾವಿ ಪಿಎಸ್ಐ ಗಳಾದ ಸಂತೋಷಕುಮಾರ ಪಾಟೀಲ, ಪಿ.ಎಂ.ಸಣ್ಣಮನಿ ನೇತೃತ್ವದಲ್ಲಿ ಸಿಬ್ಬಂದಿಗಳು ಈ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.