ಬೆಳಗಾವಿ, 27: ಭಾವಿ ಪತ್ನಿ ಜೊತೆ ಸುತ್ತಾಡುತ್ತಿದ್ದ ಓರ್ವ ಯುವಕನ ಮೇಲೆ ನಾಲ್ವರು ದಾಳಿ ನಡೆಯಿಸಿ 8 ಸಾವಿರ ನಗದು, 90 ಸಾವಿರ ಮೌಲ್ಯದ ಬಂಗಾರದ ಆಭರಣ ದೋಚಿದ್ದ ನಾಲ್ವರಲ್ಲಿ ಇಬ್ಬರನ್ನು ಕಾಕತಿ ಪೊಲೀಸರು ಬಂಧಿಸಿ ಅವರಿಂದ ನಗ-ನಾಣ್ಯ ವಶಪಡಿಸಿಕೊಂಡಿದ್ದಾರೆ.
ನ್ಯಾ ಗಾಂಧಿ ನಗರದ ಆಶೀಪ್ ಸಯ್ಯದ ಎಂಬುವವರು ತಮ್ಮ ಭಾವಿ ಪತ್ನಿ ಜೊತೆ ಭೂತರಾಮನಹಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಊಟಕ್ಕೆಂದು ಹೋಗಿ ಬರುತ್ತಿದ್ದಾಗ ನಾಲ್ವರು ಯುವಕರ ಗುಂಪು ದಾಳಿ ನಡೆಸಿ ಇಬ್ಬರ ಮೇಮೇಲಿರುವ ಬಂಗಾರ (90 ಸಾವಿರ ಮೌಲ್ಯದ) ಹಾಗೂ 8 ಸಾವಿರ ನಗದು ದೋಚಿದ್ದರು.
ಈ ಕುರಿತು ಕಾಕತಿ ಠಾಣೆಯಲ್ಲಿ ಪ್ರಕಟಣ ದಾಖಲಾಗಿದ್ದು ತೀವ್ರ ತನಿಖೆ ನಡೆಯಿಸಿದ್ದ ಪೊಲೀಸರು ಕೆಂಚಪ್ಪ ನಾಯಿಕ, ಲಗಮಪ್ಪ ನಾಯಿಕ ಎಂಬುವರನ್ನು ಬಂಧಿಸಿದ್ದಾರೆ. ಇನ್ನಿಬ್ಬರ ಅಪರಾಧಿಗಳ ಶೋಧ ನಡೆಯುತ್ತಿದೆ.
ಪೊಲೀಸ ಇನ್ಸ್ಪೆಕ್ಟರ್ ಎಸ್.ಎಸ್. ಕೌಜಲಗಿ ಇವರು ಪಿಎಸ್ಐ ಎಂ.ಜಿ. ಭಜಂತ್ರಿ ಹಾಗೂ ಸಿಬ್ಬಂದಿಯೊಂದಿಗೆ ದಾಳಿ ನಡೆಯಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಯುಕ್ತರಾದ ಬಿ.ಎಸ್. ಲೋಕೇಶಕುಮಾರ ಇವರು ತಂಡದ ಕಾರ್ಯ ವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.