ಬಿಹಾರದಲ್ಲಿ ವಿದ್ವಾಂಸ ಶಾರ್ಜೀಲ್ ಇಮಾಮ್ ಬಂಧನ

ಜೆಹಾನಾಬಾದ್, ಜ 28 :      ಜೆಎನ್‌ಯುನ ಮೋಸ್ಟ್ ವಾಂಟೆಡ್ ಸಂಶೋಧನಾ ವಿದ್ವಾಂಸ  ಶಾರ್ಜೀಲ್ ಇಮಾಮ್ ಅವರನ್ನು  ಭದ್ರತಾ ಸಿಬ್ಬಂದಿ ಬಿಹಾರದಲ್ಲಿ ಬಂಧಿಸಿದೆ.

ಶಾರ್ಜೀಲ್ ಇಮಾಮ್ ದೆಹಲಿಯ ಶಹೀನ್ಬಾಗ್ ಆಂದೋಲನದ ಮಾಸ್ಟರ್ ಮೈಂಡ್ ಎನ್ನಲಾಗಿದೆ. 

ಜೆಹಾನಾಬಾದ್ ಜಿಲ್ಲೆಯ ಕಾಕೊದಲ್ಲಿರುವ ಹಳ್ಳಿಯಿಂದಲೇ  ಮತ್ತು ಕೋಮು ಉದ್ವೇಗ  ಉಂಟುಮಾಡಲು ಯತ್ನಿಸಿದ ಆರೋಪವನ್ನು  ಮೇಲೆ ಹೊರಿಸಲಾಗಿದೆ.  

ಜೆಹಾನಾಬಾದ್ ಪೊಲೀಸ್ ಅಧೀಕ್ಷಕ ಮನೀಶ್, ಇಮಾಮ್ ಅವರ ಬಂಧನವನ್ನು ದೃಢಪಡಿಸಿದ್ದಾರೆ  ದೆಹಲಿ ಪೊಲೀಸರ ಅಪರಾಧ ವಿಭಾಗದ ಪೊಲಿಸರು  ಶಾರ್ಜೀಲ್ ಇಮಾಮ್ ಅವರ ಸ್ಥಳೀಯ ನಿವಾಸದ ಮೇಲೆ ಬೆಳಗಿನ ಸಮಯದಲ್ಲಿ ದಾಳಿ ನಡೆಸಿ  ಆಪ್ತ ಸಂಬಂಧಿಕರ ಮನೆಯಿಂದ ಆತನನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು. 

ಕಾಕೋ ಪೊಲೀಸ್ ಠಾಣೆಯಲ್ಲಿ ಶಾರ್ಜೀಲ್ ಅವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮಕ್ಕಾಗಿ ದೆಹಲಿ ಪೊಲೀಸರು ದೆಹಲಿಗೆ ಕರೆದೊಯ್ಯಲಿದ್ದಾರೆ ಎಂದು ಮನೀಶ್ ಹೇಳಿದ್ದಾರೆ.   

ಶಾರ್ಜೀಲ್ ಇಮಾಮ್ ತನ್ನ ಗುರುತನ್ನು ಮರೆಮಾಚಲು  ನೋಟ, ಚಹರೆ  ಬದಲಾಯಿಸಿಕೊಂಡಿದ್ದು,  ಸ್ವಂತ ಮನೆಯ ಪಕ್ಕದ ತನ್ನ ಹತ್ತಿರದ ಸಂಬಂಧಿಯೊಬ್ಬರ ಮನೆಯಲ್ಲಿ ಅಡಗಿಕೊಂಡಿದ್ದ ಎಂದೂ ಅವರು ಹೇಳಿದರು.