ಪೌರರಕ್ಷಕಾ ದಳದವತಿಯಿಂದ ವಲಸೆ ಕಾರ್ಮಿಕರಿಗೆ ವ್ಯವಸ್ಥೆ

ಬಳ್ಳಾರಿ,ಮೇ 18: ಕೋವಿಡ್-19 ಲಾಕ್ ಡೌನ್ ನಿಮಿತ್ತ ಭಾರತ ದೇಶದ ಅನೇಕ ರಾಜ್ಯಗಳಿಂದ ವಲಸೆ ಕಾಮರ್ಿಕರು ತಮ್ಮ ಊರುಗಳಿಗೆ ತೆರಳುವ ವ್ಯವಸ್ಥೆಯನ್ನು ಬಳ್ಳಾರಿ ಜಿಲ್ಲಾಡಳಿತವು ಜಿಲ್ಲೆಯ ವಲಸೆ ಕಾರ್ಮಿಕರಿಗೆ ಮೇ 16 ಮತ್ತು 17 ರ ಎರಡು ದಿನಗಳ ಕಾಲ ಬಳ್ಳಾರಿ ರೈಲ್ವೆ ನಿಲ್ದಾಣದ ಮೂಲಕ ತೆರಳಲು ಸಕಲ ವ್ಯವಸ್ಥೆಯನ್ನು ಮಾಡಲಾಗಿತ್ತು.

ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ಜಿಲ್ಲಾ ಪೌರ ರಕ್ಷಣಾದಳ ಸದಸ್ಯರು ಅವರ ಅಗತ್ಯವಸ್ತುಗಳು ಹೊತ್ತಿ ಬೋಗಿಗೆ ಸೇರಿಸುವುದು, ಸಣ್ಣ ಮಕ್ಕಳಿಗೆ ಸಹಾಯ, ವಲಸೆ ಕಾಮರ್ಿಕ ಭಾರವಸ್ತುಗಳನ್ನು ಬೋಗಿಗಳಿಗೆ ತರಲು ಸಹಾಯಮಾಡುವುದು ಮತ್ತು ವೀಲ್ ಚೇರ್ನಲ್ಲಿ ವಯಸ್ಸು ಆದವರಿಗೆ ಬೋಗಿಗಳಿಗೆ ಸೇರಿಸುವುದರ ಮೂಲಕ ಸಹಾಯವನ್ನು ಮಾಡಿದರು.

ವಲಸೆ ಕಾರ್ಮಿಕರಿಗೆ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಕಾರ್ಮಿಕರ ಕುಟುಂಬದವರಿಗೆ ಉಚಿತವಾಗಿ ಊಟ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಪೌರರಕ್ಷಣಾ ದಳದ ಚೀಫ್ ವಾರ್ಡನ್ ಎಂ.ಎ.ಪಕೀಬ್, ಪೌರ ರಕ್ಷಣಾ ದಳದ ಸದಸ್ಯರಾದ ಬಿ.ಕೆ.ಬಸವಲಿಂಗ, ಸುದರ್ಶನ ಹೆಚ್.ಲಕ್ಷ್ಮೀನಾರಾಯಣ, ಇಬ್ರಾಹಿಂ, ಚಾಂದ್ ಬಾಷಾ ಸೇರಿದಂತೆ ಇತರರು ಇದ್ದರು.