ನವದೆಹಲಿ, ಜೂನ್ 6, ಚೀನಾ ಗಡಿನಿಯಂತ್ರಣ ರೇಖೆ ಬಳಿ ಏನು ಮಾಡುತ್ತಿದೆಯೋ ಅದೇ ರೀತಿ ಮಾಡಿ ತಕ್ಕ, ಸೂಕ್ತ ಉತ್ತರಕೊಡಲು ಭಾರತೀಯ ಸೇನಾ ಪಡೆಗಳು ಸಮರ್ಥವಾಗಿವೆ ಎಂದು ನಿವೃತ್ತ ಸೇನಾ ಪಡೆಯ ಮುಖ್ಯಸ್ಥ ಜನರಲ್ ವಿ.ಪಿ.ಮಲಿಕ್ ತಿರುಗೇಟು ನೀಡಿದ್ದಾರೆ . ಭಾರತೀಯ ಪಡೆಗಳಿಗೆ ಆದೇಶ ನೀಡಿದರೆ, ಅವರೂ ಸಹ ವಿವಾದಿತ ಪ್ರದೇಶದಲ್ಲಿ ಕಾರ್ಯತಂತ್ರ ರೂಪಿಸಬಹುದು ಎಂದು ಅವರು ಹೇಳಿದರು.ಈ ಕುರಿತು ಮಾತನಾಡಿದ ವಿ.ಪಿ.ಮಲಿಕ್, 'ಕಳೆದ ಕೆಲವು ವಾರಗಳಲ್ಲಿ, ಚೀನಾ ವಿವಾದಿತ ಪ್ರದೇಶದಲ್ಲಿ ಆಯಕಟ್ಟಿನ ಸ್ಥಳವನ್ನು ಆಕ್ರಮಿಸಿಕೊಂಡಿದ್ದರೆ ಅಥವಾ ಗಡಿ ರೆಖೆ ದಾಟಿದ್ದರೆ ನಮ್ಮ ಪಡೆಗಳಿಗೂ ಅದೇ ಸಾಮರ್ಥ್ಯವಿದೆ. ನಮಗೆ ಆದೇಶ ನೀಡಿದರೆ ಅಥವಾ ಅವಕಾಶ ಸಿಕ್ಕರೆ ನಾವೂ ಸಹ ಅದೇ ರೀತಿ ಮಾಡಬಹುದಾಗಿದೆ ಎಂದು ಅವರು ಹೇಳಿದರು.