ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಗೆ ಸೇನಾ ಪುರಸ್ಕಾರ..?

ನವದೆಹಲಿ  ಆಗಸ್ಟ್ 8    ಭಾರತೀಯ ವಾಯು ಪಡೆ ಯ   ಪೈಲಟ್  ವಿಂಗ್   ಕಮಾಂಡರ್ ಅಭಿನಂದನ್ ವರ್ಧಮಾನ್  ಅವರಿಗೆ    ಕೇಂದ್ರ ಸರ್ಕಾರ  ಉನ್ನತ  ಸೇನಾ  ಪುರಸ್ಕಾರ  ಪ್ರಧಾನ ಮಾಡುವ ಸಾಧ್ಯತೆಗಳಿವೆ.   ಪಾಕಿಸ್ತಾನದ  ಬಾಲಕೋಟ್ ನಲ್ಲಿರುವ  ಭಯೋತ್ಪಾದಕ ಶಿಬಿರಗಳ ಮೇಲೆ  ಭಾರತೀಯ ವಾಯುದಾಳಿ ನಡೆಸಿದ  ದಾಳಿಯ ನಂತರ,    ಪಾಕಿಸ್ತಾನ ನಡೆಸಿ  ದಾಳಿಯ ವೇಳೆ,  ಗಗನದಲ್ಲಿ ಪಾಕ್ ನ  ಎಫ್16  ಯುದ್ಧ ವಿಮಾನ ಹೊಡೆದುರುಳಿಸಿದ್ದ  ಭಾರತ ಮಾತೆಯ ಹೆಮ್ಮೆಯ ಪುತ್ರ ಅಭಿನಂದನ್,   ಇದಕ್ಕಾಗಿಯೇ ಅವರಿಗೆ "ವೀರ ಚಕ್ರ"   ಪುರಸ್ಕಾರ ನೀಡುವ ಸಾಧ್ಯತೆ ಇದೆ. ಪರಮವೀರ ಚಕ್ರ ಮತ್ತು ಮಹಾ ವೀರ ಚಕ್ರ ಪುರಸ್ಕಾರಗಳ  ನಂತರದ   ಅತ್ಯುನ್ನತ   ಸೇನಾ   ಪುರಸ್ಕಾರ ಇದಾಗಿದೆ. ಪಾಕಿಸ್ತಾನದ ಬಾಲಕೋಟ್ನಲ್ಲಿರುವ ಜೈಶ್  -ಎ -  ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಶಿಬಿರಗಳ ಮೇಲೆ  ಬಾಂಬ್ ಗಳನ್ನು ಸ್ಫೋಟಿಸಿದ ಐದು ಮಿರಾಜ್ 2000  ಯುದ್ಧ ವಿಮಾನಗಳ ಪೈಲಟ್ಗಳನ್ನು  ಸಹ ಕೇಂದ್ರ  ಸರ್ಕಾರ  ಗೌರವಿಸಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.  ವಾಯುಪಡೆಯ ಈ ಪೈಲೆಟ್ ಗಳ   ಸಾಹಸ  ಗುರುತಿಸಿ ವಾಯುಪಡೆ  ಪುರಸ್ಕಾರ  ನೀಡಲಿದೆ.  ತನ್ನ ಮಿಗ್ -21 ಬೈಸನ್ ವಿಮಾನ ಅಪಘಾತಕ್ಕೀಡಾದ ನಂತರ ಅಭಿನಂದನ್ ಪಾಕಿಸ್ತಾನದ ಭೂಪ್ರದೇಶಕ್ಕೆ ಬಿದ್ದಿದ್ದರು.    ಎರಡು ದಿನಗಳ ಕಾಲ ಪಾಕಿಸ್ತಾನ ತನ್ನ  ವಶದಲ್ಲಿರಿಸಿಕೊಂಡು   ಕೊನೆಗೂ ಭಾರತ ಸರ್ಕಾರದ ರಾಜತಾಂತ್ರಿಕ ಒತ್ತಡಕ್ಕೆ ಮಣಿದು  ಅವರನ್ನು  ಭಾರತಕ್ಕೆ ಒಪ್ಪಿಸಿದ್ದರು. ಫೆಬ್ರವರಿ 26 ರಂದು ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಬಾಲಕೋಟ್ನಲ್ಲಿ ವಾಯುದಾಳಿ ನಡೆಸಿತ್ತು