ಸಶಸ್ತ್ರ ಪಡೆ ಧ್ವಜ ದಿನ : ಯೋಧರ ಸಾಹಸ ಕೊಂಡಾಡಿದ ಉಪರಾಷ್ಟ್ರಪತಿ, ಪ್ರಧಾನಿ

Vice President and Prime Minister

ನವದೆಹಲಿ, ಡಿಸೆಂಬರ್ 7 -ಸಶಸ್ತ್ರ ಪಡೆಗಳ ಯೋಧರು  ಮತ್ತು ಅವರ ಕುಟುಂಬ  ಸದಸ್ಯರ ತ್ಯಾಗ, ಬಲಿದಾನವನ್ನು  ಉಪಾರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು  ಕೊಂಡಾಡಿದ್ದಾರೆ. 

"ಸಶಸ್ತ್ರ ಪಡೆಗಳ ಧ್ವಜ ದಿನದಂದು, ದೇಶವನ್ನು ಕಾಪಾಡುವಲ್ಲಿ ನಮ್ಮ ಸೈನಿಕರ ಶೌರ್ಯ ಮತ್ತು ಧೈರ್ಯವನ್ನು ಅಭಿನಂದಿಸಿ, ಸಶಸ್ತ್ರ ಪಡೆ ಮತ್ತು ಅವರ ಕುಟುಂಬಗಳ ಕಲ್ಯಾಣಕ್ಕಾಗಿ ಜನತೆ ಸಹಕರಿಸಬೇಕೆಂದು ಜನತೆಗೆ  ಮನವಿ ಮಾಡಿದ್ದಾರೆ. 

ಈ ಕುರಿತು ಮೈಕ್ರೋ-ಬ್ಲಾಗಿಂಗ್ ನಲ್ಲಿ ಪ್ರಧಾನಿ  ಮೋದಿ ಅವರು, "ಸಶಸ್ತ್ರ ಪಡೆಗಳ ಧ್ವಜ ದಿನದಂದು ಸಿಬ್ಬಂದಿ  ಅವರ ಕುಟುಂಬಗಳ ಸದಸ್ಯರು ತೋರಿದ ಅದಮ್ಯ ಧೈರ್ಯ,  ಸಾಹಸಕ್ಕೆ ವಂದಿಸುವುದಾಗಿ,  ಪಡೆಗಳ ಕಲ್ಯಾಣಕ್ಕೆ ಜನರು ಸಹಕರಿಸಬೇಕೆಂದು ಆಗ್ರಹಿಸಿದರು. .

ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಸಶಸ್ತ್ರ ಪಡೆ ಸಿಬ್ಬಂದಿಗೆ  ಶುಭ ಕೋರಿದ್ದಾರೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಗೌರವಿಸುವ ದಿನ ಸಶಸ್ತ್ರ ಪಡೆಗಳ ಧ್ವಜ ದಿನ. ನಮ್ಮದೇಶ  ರಕ್ಷಣೆಯಲ್ಲಿ  ಅವರು ತೋರಿದ   ಬದ್ಧತೆಗೆ  ವಂದಿಸುವುದಾಗಿ, ಸಮವಸ್ತ್ರದಲ್ಲಿರುವ  ಪುರುಷರು ಮತ್ತು ಮಹಿಳಾ  ಕುಟುಂಬಗಳ ಕಲ್ಯಾಣಕ್ಕಾಗಿ ಕೊಡುಗೆ ನೀಡುವುದಾಗಿ ಪ್ರತಿಜ್ಞೆ ಮಾಡೋಣ, ' ಎಂದು ಅವರು ಹೇಳಿದ್ದಾರೆ.