ಮುಂಬೈ: ಶ್ರೀಲಂಕಾ ಕ್ರಿಕೆಟ್ ದಂತ ಕತೆ ಅರ್ಜುನ್
ರಣತುಂಗ
ಭಾರತಕ್ಕೆ
ಬಂದಿದ್ದಾಗ
ತನಗೆ
ಲೈಂಗಿಕ
ಕಿರುಕುಳ
ಕೊಟ್ಟಿದ್ದರು
ಅಂತ
ಇಂಡಿಯನ್
ಏರ್ಲೈನ್ಸ್ ನ ಗಗನಸಖಿಯೊಬ್ಬಳು
ಗಂಭೀರ ಆರೋಪ ಮಾಡಿದ್ದಾಳೆ.
1996ರಲ್ಲಿ ಶ್ರೀಲಂಕಾಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟಿದ್ದು
ಅಜುರ್ನ್
ರಣತುಂಗ .
ಚಾಣಕ್ಷ
ನಾಯಕತ್ವ,
ನೇರ ಮಾತು , ಅದ್ಬುತ ಆಡಳಿತಗಾರನಾಗಿ
ಹೆಸರು ಮಾಡಿದವರು. ಅನ್ಯಾಯ ಕಂಡಾಗಲೆಲ್ಲ ಸಿಡಿದೇಳುತ್ತಿದ್ದ
ಅರ್ಜುನ್
ರಣತುಂಗ
ಮೇಲೆಯೇ
ಈಗ
ಇಂಡಿಯನ್
ಏರ್ಲೈನ್ಸ್ ನ ಗಗನಸಖಿಯೊಬ್ಬಳು
ಲೈಂಗಿಕ
ಆರೋಪ ಮಾಡಿದ್ದಾಳೆ.
ಗಗನ ಸಖಿ ಫೇಸ್ಬುಕ್ನಲ್ಲಿ ನನ್ನ ಸಹೋದ್ಯೋಗಿ ಆಟೋಗ್ರಾಫ್ಗಾಗಿ ಮುಂಬೈನ ಜುಹು ಸೆಂಚೂರ ಹೋಟೇಲ್ಗೆ ಹೋದಾಗ ಅರ್ಜುನ ರಣತುಂಗ ನನ್ನ ಸೊಂಟ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ರು. ನಾನು ತಕ್ಷಣ ರಿಸೆಪ್ಶನ್ ಬಳಿ ಹೋಗಿ ದೂರು ಕೊಟ್ಟೆ ಆದರೆ ರಿಸೆಪ್ಶನಿಸ್ಟ್ ಇದು ನಿಮ್ಮ ವೈಯಕ್ತಿಕ ವಿಷಯ ಎಂದು ಹೇಳಿ ಸಹಾಯ ಮಾಡಲಿಲ್ಲ ಎಂದು ದೂರಿದ್ದಾರೆ.