ಆರೆಮಲ್ಲಾಪುರ ಪ.ಪು ಕಾಲೇಜು : ವಿದ್ಯಾರ್ಥಿಗಳ ಬಿಳ್ಕೊಡುಗೆ
ರಾಣೇಬೆನ್ನೂರು 17: ತಾಲೂಕಿನ ಆರೇಮಲ್ಲಾಪುರ ಸರಕಾರಿ ಪ. ಪೂ ಕಾಲೇಜಿನಲ್ಲಿ, 2024-25ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ, ಸರಸ್ವತಿ ಪೂಜಾ ಸಮಾರಂಭ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ 2023-24ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರ. ಪ್ರಾ, ಕೆ ಎಚ್ ರಡ್ಡೆರ್, ನಿವೃತ್ತ ಉಪನ್ಯಾಸಕರಾದ ಎಸ್.ಎಂ. ಗೌಡರ, ಸಿ ಬಿ ಸಿ ಉಪಾಧ್ಯಕ್ಷ ಪರಶುರಾಮ್ ಮಿಳ್ಳಿ, ಶಿಕ್ಷಣ ಪ್ರೇಮಿ ಶಿವಾಜಿ ಸಣ್ಣಬೊಮ್ಮಾಜಿ, ಪ್ರಾ ಶಾ ಮು ಶಿ ಬಸನಗೌಡರು, ಉಪನ್ಯಾಸಕರಾದ ಎಸ್. ಬಿ. ಪೂಜಾರ, ಡಿ.ಡಿ. ರಜಪುತ, ಸುಜಾತಾ ವಾಲಿಕಾರ, ರೇಖಾ ಹಲಗೇರಿ, ರವಿಶಾಂತಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.