ಹುಬ್ಬಳ್ಳಿ 27: ತಾಲೂಕಿನ ಮಲ್ಲಿಗವಾಡ ಗ್ರಾಮ ಯಾವಾಗಲೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ನವಲಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊನೆಯ ಬೂತ್, ಹಳ್ಳಿ ಇದ್ದಾಗಿದೆ. ಸ್ವಾತಂತ್ರ್ಯ ಚಳವಳಿಗಾಗಿ ಹೋರಾಟ ನಡೆಸಿದ ಹಾಗೇ ಗ್ರಾಮ ಅಭಿವೃದ್ಧಿಗಾಗಿ ಚಳುವಳಿ ನಡೆಸಬೇಕು. ಆ ರೀತಿ ಪರಿಸ್ಥಿತಿ ಸಮಸ್ಯೆ ತಂದಿಟ್ಟಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ವೀರೇಶ ಧೂಪದಮಠ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲಿಗವಾಡ-ಮಜ್ಜಿಗುಡ್ಡ 3 ಕಿ.ಮೀ ಸಂಪರ್ಕಿಸುವ ಗ್ರಾಮೀಣ ರಸ್ತೆ ಅಭಿವೃದ್ಧಿಪಡಿಸುವಂತೆ ಪಂಚಾಯತ ರಾಜ್ ಇಂಜನಿಯರಿಂಗ್ ಧಾರವಾಡ ವಿಭಾಗದ ಕಾರ್ಯನಿರ್ವಾಹಕ ಇಂಜನಿಯರರಿಗೆ ಅರ್ಜಿ ಸಲ್ಲಿಸಲಾಗಿತ್ತು. ಅದಕ್ಕೆ ಇಇ ಅಧಿಕಾರಿಗಳು ಪತ್ರಕ್ಕೆ ಸ್ಪಂದಿಸಿ, ಅಂದಾಜು ಪತ್ರಿಕೆ ತಯಾರಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಹುಬ್ಬಳ್ಳಿ ಉಪವಿಭಾಗದ ಪಂ.ರಾ.ಇಂ. ಸಹಾಯಕ ಕಾರ್ಯನಿರ್ವಾಹಕ ಇಂಜನಿಯರರಿಗೆ ಸೂಚಿಸುತ್ತಾರೆ. ಆದರೆ ಹುಬ್ಬಳ್ಳಿ ಎಇಇ ಯಿಂದ ಉತ್ತರ ಬಂದಿದ್ದು ರಣರೋಚಕ ರಸ್ತೆ ಅಭಿವೃದ್ಧಿಗಾಗಿ ಹಾಗೂ ಅನುದಾನ ಬಿಡುಗಡೆಗಾಗಿ ಮಾನ್ಯ ಶಾಸಕರಲ್ಲಿ ವಿನಂತಿಸಲು ತಿಳಿಸಲಾಗಿದೆ ಎಂದು ಇದು ಉತ್ತರ. ಎಲ್ಲದಕ್ಕೂ ಇದೇ ಉತ್ತರ ಶಾಸಕರನ್ನು ಕೇಳಿ ಶಾಸಕರನ್ನು ಕೇಳಿ. ಕಸ ಹೊಡೆಕೂ ಶಾಸಕರನ್ನು ಕೇಳಿ, ಚರಂಡಿ ದುರಸ್ಥಿ ಶಾಸಕರಿಂದ ಮಾಡಿಸಿಕೊಳ್ಳಿ ಎಲ್ಲದಕ್ಕೂ ಶಾಸಕನ ಕೇಳಿ ಅಂದಮೇಲೆ ಹುಬ್ಬಳ್ಳಿ ಎಇಇ ಯಾಕೆ ಬೇಕು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಒಬ್ಬ ಶಾಸಕನಿಗೆ ತನ್ನ ಬಳಿ ಸಾರ್ವಜನಿಕ ಮನವಿ ಪತ್ರ ಬಂದ್ರು ಸಹ ಆ ಮನವಿ ಪತ್ರ ಸಂಬಂಧಿಸಿದ ತಾಲ್ಲೂಕು ಅಧಿಕಾರಿಗಳಿಗೆ ರವಾನಿಯಾಗುವುದು ಅಷ್ಟು ಕಾಮನೆನ್ಸ್ ಆ ಎಇಇ ಅಧಿಕಾರಿಗೆ ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಇಲ್ವಾ?. ಹುಬ್ಬಳ್ಳಿ ಉಪವಿಭಾಗದ ಪಂಚಾಯತ ರಾಜ್ ಇಎಎ ಸೇರಿದಂತೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಕೂಡಲೇ ಸರ್ಕಾರ ವರ್ಗಾವಣೆ ಮಾಡಬೇಕು ಇಂತಹ ಅಧಿಕಾರಿಗಳು ನಮಗೆ ಬೇಡ.
ಎಲ್ಲದಕ್ಕೂ ಶಾಸಕನ ಕೇಳಿ ಅಂದ್ರೇ ಅಧಿಕಾರಿಗಳು ಯಾಕೆ ಬೇಕು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಮಲ್ಲಿಗವಾಡ-ಮಜ್ಜಿಗುಡ್ಡ 3 ಕಿ.ಮೀ ಗ್ರಾಮೀಣ ರಸ್ತೆಯಲ್ಲಿ, ಮಜ್ಜಿಗುಡ್ಡದಿಂದ 2 ಕಿ.ಮೀ ಚಕ್ಕಡಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಶಾಸಕರು ಚಕ್ಕಡಿ ರಸ್ತೆ ಹರಿಕಾರರು. ಮಲ್ಲಿಗವಾಡ ಗ್ರಾಮದ ಮೇಲೆ ಜನಪ್ರತಿನಿಧಿಗಳು, ಅಧಿಕಾರಿಗಳು ಸಿಟ್ಟು ಇರುವುದರಿಂದ 1 ಕಿ.ಮೀ ರಸ್ತೆ ಉಳಿಸಿ ಅರ್ಧ ಚಕ್ಕಡಿ ರಸ್ತೆ ಮಾಡಿ ಕೈ ತೊಳೆದುಕೊಂಡಿದ್ದಾರೆ. ನಮಗೆ ಅರ್ಧ ಚಕ್ಕಡಿ ರಸ್ತೆ ಹರಿಕಾರರು ಮಲ್ಲಿಗವಾಡ ಗ್ರಾಮದ ಅಭಿವೃದ್ಧಿ ಮಾಡುವುದು ಬೇಡ ನಾವೇನು ಯಾರು ದುಂಬಲು ಬೀಳುವುದಿಲ್ಲ, ಮಲ್ಲಿಗವಾಡ ಗ್ರಾಮಕ್ಕೆ 20 ವರ್ಷ ಬಸ್ ಇರ್ಲಿಲ್ಲ. 2020 ರಲ್ಲಿ ಸಾರಿಗೆ ಸಚಿವರಿಗೆ ಪತ್ರ ಬರೆದ ಮೇಲೆ ಬಸ್ ಬರಲಾರಂಭಿಸಿದವು. ಯಾವ ತಾಲೂಕು ಜನಪ್ರತಿನಿಧಿಗಳು, ಅಧಿಕಾರಿಗಳು ಬಿಟ್ಟಿಲ್ಲ. ಅದರಲ್ಲಿ ಒಂದು ಬಸ್ ಉಳಿದಿತ್ತು ಮಾಹಿತಿ ಹಕ್ಕು ಅರ್ಜಿ ಹಾಕಿದ ಮೇಲೆ ಆ ಬಸ್ ಸಂಚಾರಿಸಲು ಆರಂಭವಾಯಿತು. ಆದರೆ ಇತ್ತೀಚಿನ ಮೂರ್ನಾಲ್ಕು ಸರ್ಕಾರದ ಕೆಲಸ ನೋಡಿದ್ದರೇ. ಯಾವುದು ಕೆಲಸ ಆಗುತ್ತಿಲ್ಲ. ಹುಬ್ಬಳ್ಳಿ ತಾಲ್ಲೂಕಿನ ಎಲ್ಲ ತಾಲ್ಲೂಕು ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿ ಇಲ್ಲವೇ ತಾಲ್ಲೂಕು ಬಿಟ್ಟು ತೊಲಗಲಿ. ಸಾರ್ವಜನಿಕ ಸೇವೆ ಮಾಡಕ್ಕೆ ಬಂದವರು ಸುಳ್ಳು ಮಾಹಿತಿ, ಕಾಲಹರಣ ಮಾಡುವುದೇ ಒಂದೇ ಕಾಯಕವಾಗಿದೆ. ಯಾರು ಸಾರ್ವಜನಿಕ ಅರ್ಜಿ ವಿಲೇವಾರಿ ಮಾಡುವುದಿಲ್ಲಯೋ ಅಂಥ ಅಧಿಕಾರಿ ಸಂಬಳ ತಡೆಹಿಡಿಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.