ಸುಧಾಕರ ದೈವಜ್ಞ
ಲೋಕದರ್ಶನ ವರದಿ
ಶಿಗ್ಗಾವಿ09 : ಪಟ್ಟಣದ ಹಳೆ ತಹಶೀಲ್ದಾರ ಕಚೇರಿ ಎಂದು ಬಿಂಬಿತವಾದ 118 ವರ್ಷದ ಕಚೇರಿಯ ಎಲ್ಲ ಕೊಠಡಿಗಳು ನೆಲಸಮಗೊಂಡು ತಾಲೂಕಿನ ಸಾರ್ವಜನಿಕರಲ್ಲಿ ಚಚರ್ೆಯಾಗುತ್ತಿರುವ ತಾಜಾ ವಿಷಯವಿದು. ಏಕೆಂದರೆ ಪಟ್ಟಣದಲ್ಲಿ ಸುಮಾರು 5-6 ಕಟ್ಟಡಗಳನ್ನು ಬ್ರಿಟಿಷ ಸಾಮ್ರಾಜ್ಯದ ಆಡಳಿತದಿಂದ ಇದ್ದವು ಅವುಗಳೆಂದರೆ ಹಳೆ ಬಸ ನಿಲ್ದಾಣದ ಹತ್ತಿರವಿರುವ ಜನತಾ ಬಜಾರ(ಧರ್ಮಶಾಲ) ಸರಕಾರಿ ಆಸ್ಪತ್ರೆ, ಸರಕಾರಿ ಕನ್ನಡ ಮಕ್ಕಳ ಶಾಲೆ, ಪುರಸಭೆಯ ಈಗಿನ(ಛಾವಡಿ) ಆಡಳಿತ ಕಚೇರಿ ಅಲ್ಲದೇ ಸರಕಾರಿ ಹಳೆ ತಹಶೀಲ್ದಾರ ಕಚೇರಿ.
ಸುಮಾರು ನೂರಾರು ವರ್ಷಗಳ ಇತಿಹಾಸವಿರುವ ಈ ಕಟ್ಟಡಗಳು ಇನ್ನೂ 20-30 ವರ್ಷಗಳ ಕಾಲ ಸಹಿತ ಏನು ಆಗದ ಹಾಗೆ ಇದ್ದ ಕಟ್ಟಡಗಳು ಅಲ್ಲದೇ ಮುಂಬೈ ಕನರ್ಾಟಕ ರಾಜ್ಯವಾರು ಪ್ರಾಂತ್ಯವಿದ್ದಾಗ ಬಂಕಾಪೂರ ತಾಲೂಕ ಇದ್ದಾಗ ನೆಲಸಮ ಗೊಂಡ ಹಳೆ ತಹಶೀಲ್ದಾರ ಕಚೇರಿಯಲ್ಲಿ ಎಲ್ಲ ಆಡಳಿತ ವ್ಯವಸ್ಥೆ ನೆಡೆಯುತ್ತಿತ್ತು ಅದರ ಜೊತೆಗೆ 1952 ರಿಂದ 2019 ರವರೆಗೂ ವಿಧಾನಸಬಾ ಕ್ಷೇತ್ರದ ಎಲ್ಲ ಆಗು ಹೋಗುಗಳು ಮತ್ತು ಅನೇಕ ಸರಕಾರಿ ಇಲಾಖೆಗಳು ಕಾರ್ಯನಿರ್ವಹಿಸಿ ಅನೇಕ ಅಭಿವೃದ್ದಿ ಪರ ಕೆಲಸ ಕಾರ್ಯಗಳನ್ನು ಮಾಡಿದ ತಾಲೂಕಿನ ಏಕೈಕ ಕಟ್ಟಡ.
ಸುಮಾರು ನೂರು ವರ್ಷಗಳ ಇತಿಹಾಸದ ಪುಟವನ್ನು ತಿರುವಿದಾಗ ಸಾವಿರಾರು ಕುಟುಂಬಗಳ ಜೀವನ ನಿರ್ವಹಣೆ ಮಾಡಲು ಹಾಗೂ ಸಹಾಯ ಹಸ್ತಿ ಚಾಚಿ ಬಂದ ಕಡು ಬಡವ ಕುಟುಂಬಗಳಿಗೆ ನೇರವಾದ ಆಡಳಿತ ಕಚೇರಿ ನಿನ್ನೆ ಇಡಿ ಕಟ್ಟಡ ನೆಲಸಮಗೊಂಡ ಕಾರಣ ಪೇಟೆಯ ಕೆಲವು ಹಿರಿಯ ವಯೋವೃದ್ದರು ಹಾಗೂ ಸಾರ್ವಜನಿಕರು ಕಣ್ಣೀರು ಹಾಕುತ್ತಿದ್ದ ದೃಶ್ಯ ಎಲ್ಲರನ್ನು ರೋಮಾಂಚನ ಗೋಳಿಸಿತು.
ಪಟ್ಟಣದ ಅಭಿವೃದ್ದಿ ನೆಪದಲ್ಲಿ ಈ ತರಹದ ಚೆನ್ನಾಗಿರುವ ಕಟ್ಟಡಗಳು ದುಸ್ಥಿತಿಗೆ ಹೋದರೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ ಬೇರೆ ಬೇರೆ ಇಲಾಖೆಗಳು ಈ ಕಟ್ಟಡದಲ್ಲಿ ಕಾರ್ಯನಿರ್ವಹಿಸಬಹುದಿತ್ತು ಅಥವಾ ಆ ಕಟ್ಟಡವನ್ನು ಕಡಿಮೆ ಮೊತ್ತದಲ್ಲಿ ಮಾರ್ಪಡಿಸಿ ಅಲ್ಲಿದ್ದ ಹಳೆ ಶಿಲಾ ಶಾಸನಗಳನ್ನು ಬೇರೆ ಕಡೆಗೆ ವಗರ್ಾಯಿಸಿದರೆ ಅನುಕೂಲವಾಗುತ್ತಿತ್ತು ಅದನ್ನು ಬಿಟ್ಟು ನೆಲಸಮ ಮಾಡಿ ಕಟ್ಟಡವನ್ನು ಕಟ್ಟುವುದು ಅವಶ್ಯವಿತ್ತೆ ಎಂದು ಸಾರ್ವಜನಿಕರ ವಾದ.
ಪಟ್ಟಣದ ಆಡಳಿತಾತ್ಮಕ ಕಚೇರಿಗಳು ಒಂದೇ ಸೂರಿನಡೆ( ಸರಕಾರಿ ಇಲಾಖೆಗಳ ಸಂಕೀರ್ಣ) ಎಲ್ಲ ಕಚೇರಿಗಳು ಬರಬೇಕು ಎಂಬ ಆಸೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಉದ್ದೇಶ ಒಳ್ಳೆಯದು ಆದರೆ ಅದಕೋಸ್ಕರ ಚೆನ್ನಾಗಿರುವ ಕಟ್ಟಡ ದುಸ್ಥಿತಿಯಲ್ಲಿದೆ ಎಂದು ವರದಿ ಮಾಡಿದ ಸರಕಾರಿ ಇಂಜೀನಿಯರಗಳ ಕಾರ್ಯಕ್ಷಮತೆಯನ್ನು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅನುಸರಣೆ ಮಾಡಿ ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಏಕೆಂದರೆ ನಿನ್ನೆಯವರೆಗೂ ಬೇರೆ ಬೇರೆ ಇಲಾಖೆಗಳು ಕಾರ್ಯನಿರ್ವಹಿಸಿದ್ದಾವೆ ಅಲ್ಲದೇ ಸರಕಾರದ ನಿರ್ವಹಣೆ ಚೆನ್ನಾಗಿರದೇ ಇರುವ ಕಾರಣ ಕಟ್ಟಡಗಳು ಕಟ್ಟುವುದು ಮತ್ತು ನೆಲಸಮಗೋಳಿಸುವುದು ಇದೆ ಕೆಲಸವಾಗುತ್ತದೆ ಎಂದು ಸಾರ್ವಜನಿಕರ ಆಕ್ರೋಶ. ಪಟ್ಟಣದಲ್ಲಿ ಅನೇಕ ಕಟ್ಟಡಗಳು ಉದ್ಘಾಟನೆಗೊಂಡು ಹಲವು ತಿಂಗಳಲ್ಲಿ ಕಟ್ಟಡದ ಸ್ವರೂಪವನ್ನು ಕಳೆದುಕೊಳ್ಳುತ್ತಿವೆ ಅಲ್ಲದೇ ಕಾಮಗಾರಿಗಳು ಸಹಿತ ತೃಪ್ತಿದಾಯಕವಾಗುತ್ತಿಲ್ಲ ಆದ್ದರಿಂದ ಸಾರ್ವಜನಿಕರು ಕೇಳುತ್ತಿದ್ದಾರೆ ಇದು ನಮ್ಮ ತೆರಿಗೆ ಹಣದಿಂದ ಕಟ್ಟುವ ಕಟ್ಟಡಗಳು ಸರಕಾರದ ಹಣವೆಂದರೆ ನಾವು ಕಟ್ಟುವ ತೆರಿಗೆ ವಂತಿಕೆಯ ಕಟ್ಟಡಗಳು ಈ ಹಣವು ಯಾವುದೇ ಕಾರಣಕ್ಕೂ ದುರಪಯೋಗವಾಗಬಾರದು ಎಂದು ಸಾರ್ವಜನಿಕರ ಅಭಿಪ್ರಾಯ.