ಬಾಗಲಕೋಟೆ24: ಕೃಷ್ಣಾ ನದಿಯ ಹಿನ್ನೀರಿನಲ್ಲಿರುವ ಹಳೆಯ ಬಾಗಲಕೋಟೆ ಸ್ಮಾರಕ ಸಂರಕ್ಷಣೆಗೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಅಣಿಯಾಗುತ್ತಿದ್ದಂತೆಯೇ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿದರ್ೇಶಕ ಡಿ.ಪಿ.ಧನಪಾಲ್, ಪುರಾತತ್ವ ಇಲಾಖೆಯ ಅಧಿಕಾರಿ ಅಜಯ ಜನಾರ್ಧನ ಹಾಗೂ ಸಹಾಯಕ ಅಧಿಕ್ಷಕರಾದ ಮುವೇಂದ್ರನ್ ಈ ಮೂವರ ತಂಡ ಸ್ಮಾರಕ ವಿರುವ ಸ್ಥಳಕ್ಕೆ ಭೇಟಿ ನೀಡಿ ಸಂರಕ್ಷಣೆಯ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸ್ಮಾರಕದ ಸುತ್ತಲಿನ ನೀರು ಕಡಿಮೆಯಾದ ನಂತರ ಈ ಸ್ಮಾರಕದ ಸ್ಥಿರತೆ, ಬುನಾದಿ ಹಾಗೂ ಉಳಿದ ಭಾಗಗಳನ್ನು ಯಾವ ರೀತಿಯಾಗಿ ಸಂರಕ್ಷಿಸಬಹುದೆಂದು ಚಚರ್ಿಸಲಾಯಿತು.
ಬುನಾದಿಯ ಸುತ್ತಲೂ ರಕ್ಷಣಾತ್ಮಕ ತಳಪಾಯ ನಿರ್ಮಾನಿಸುವ ಜೊತೆಗೆ ಮೇಲ್ಭಾಗದ ಕೆಲ ಅವಶೇಷಗಳನ್ನು ಸಹ ಅದೇ ಶೈಲಿಯಲ್ಲಿ ಪುನರ್ ನಿರ್ಮಾಣಗೊಳಿಸುವ ನಿಟ್ಟಿನಲ್ಲಿ ಜೀಣರ್ೋದ್ದಾರ ಮಾಡುವ ಕುರಿತು ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಪುರಾತತ್ವ ಇಲಾಖೆಯ ಸಂರಕ್ಷಣಾ ಪರಿಣಿತರನ್ನು ಕರೆಯಿಸಿ ಪರಿಶೀಲಿಸಲಾಗುವುದು. ಪುರಾತತ್ವ ಇಲಾಖೆಯು ನೀಡಿದ ವಿಸ್ತೃತ ವರದಿ ಅನುಸಾರವಾಗಿ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹಿನ್ನೀರಿನ ಪ್ರದೇಶದಲ್ಲಿ ಇರುವ ಸುಂದರ ಕೋಟೆಯಲ್ಲೇ ಬಾಗಲಕೋಟೆಯ ಇತಿಹಾಸ ಅಡಗಿದೆ. ಈ ಕೋಟೆ ಗೋಡೆ ಸ್ಮಾರಕ ಇರುವ ಸ್ಥಳವನ್ನು ಪಿಕ್ನಿಕ್ ಸ್ಪಾಟ್ನ್ನಾಗಿಸುವ ನಿಟ್ಟಿನಲ್ಲಿ ನಗರಸಭೆಯ ಪೌರಾಯುಕ್ತರ ಸಹಯೋಗದೊಂದಿಗೆ ಸ್ಮಾರಕದ ಸುತ್ತಮುತ್ತಲಿನ ಸ್ಥಳವನ್ನು ಸ್ವಚ್ಛಗೊಳಿಸುವ ಕಾರ್ಯಕೈಗೊಳ್ಳುವುದು. ಅಲ್ಲಿನ ಪರಿಸರ ಸ್ವಚ್ಛವಾಗಿರಿಸಲು ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈ ಜೋಡಿಸುವ ಅಗತ್ಯವಿದೆ. ಬಾಗಲಕೋಟೆ ಎಂದು ನಾಮಕರಣ ಹಾಗೂ ಬಾಗಲಕೋಟೆಗೆ ಪ್ರತೀಕವಾಗಿ ಉಳಿದಿರುವ ಸ್ಮಾರಕದ ಉಳಿವಿಗಾಗಿ ಜಿಲ್ಲಾಡಳಿತ ಸನ್ನದ್ದವಾಗಿದೆ.
ಬಾಗಲಕೋಟೆಯಲ್ಲಿ ಇತ್ತೀಚೆಗೆ ನವನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏಳು ಜನ ಛಾಯಾಚಿತ್ರಗಾರರು ಹಮ್ಮಿಕೊಂಡ ಸೆವೆನ್ ಶೇಡ್ಸ್ ಛಾಯಾಚಿತ್ರ ಪ್ರದರ್ಶನದ ಉದ್ಘಾಟಕರಾಗಿ ಆಗಮಿಸಿದ್ದ ಜಿಲ್ಲಾಧಿಕಾರಿಗಳು ಬಾಗಲಕೋಟೆ ಸ್ಮಾರಕದ ಛಾಯಾಚಿತ್ರವನ್ನು ಕಂಡು ಅದರ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಥಳದಲ್ಲೆ ಇದ್ದ ಪ್ರವಾಸೋದ್ಯಮ ಇಲಾಖೆಯ ಉಪನಿದರ್ೇಶಕ ಡಿ.ಪಿ.ಧನಪಾಲ್ ಅವರಿಗೆ ಕೋಟೆಯ ರಕ್ಷಣೆ, ಪ್ರವಾಸಿ ತಾಣವಾಗಿ ಅಭಿವೃದ್ದಿ ಪಡಿಸಲು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿತ್ತು. ಈ ಹಿನ್ನಲೆಯಲ್ಲಿ ಸ್ಮಾರಕ ಸ್ಥಳಕ್ಕೆ ಪುರಾತತ್ವ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಹಿಂದಿನಿಂದಲೂ ಬಾಗಲಕೋಟೆಗೆ ಅಪರೂಪದ ಇತಿಹಾಸವಿದ್ದು, ವಿಜಯಪುರದ ಆದಿಲ್ಶಾಹಿಗಳು, ಮರಾಠ, ಪೇಶ್ವೆಬಾಜಿರಾಯರು, ವಿಜಯನಗರ ಸಾಮಾಜ್ಯದ ಆಡಳಿತಕ್ಕೆ ಒಳಪಟ್ಟಿ ಅನೇಕ ಕುರುಹುಗಳು ದೊರೆತಿವೆ.
1580 ಕಾಲಗಟ್ಟದಲ್ಲಿ ಸವನೂರಿನ ಅವಾಬ ಬಹಿಲಾಲ್ಖಾನನು ತಮ್ಮ ಮಗಳಾದ ಬಲೀಮ್ಶಾ ಬೀಬಿಗೆ ಬಳೆಗಳ ವೆಚ್ಚಕ್ಕಾಗಿ ಈ ನಗರದ ಕರವನ್ನು ಬಳಸಲಾಗುತ್ತಿರುವದರಿಂದ ಮೊದ ಮೊದಲು ಬಾಂಗಡಿಕೋಟಾ ಎಂದು ಕರೆಯಲ್ಪಟ್ಟು, ಕಾಲನಾಂತರದಿಂದ ಬಾಗಲಕೋಟೆ ಎಂದು ಬಳಕೆಗೆ ಬಂತು ಎಂದು ಹೇಳಲಾಗುತ್ತಿದೆ.
1800 ರಲ್ಲಿ ಈ ಪ್ರದೇಶವನ್ನು ಸರ್ ಸುಭಾ ಎಂಬುವರು ಪ್ರಾಂತ್ಯವನ್ನಾಗಿ ಪರಿವತರ್ಿಸಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದರು. ರಾಸ್ತಿಯಾ ಕುಟುಂಬಕ್ಕೆ ಸೇರಿದ ಆನಂದರಾವ ಬಿಕಾಜಿ ಎಂಬುವರು ಬಾಗಲಕೋಟೆಯಲ್ಲಿ ನೆಲೆಸಿ ಅಪರೂಪದ ಸುಂದರವಾದ ಅರಮನೆಯೊಂದನ್ನು ನಿಮರ್ಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ಸವಣೂರಿನ ನವಾಬರು ಈ ನಗರದ ಹಳೆಪೇಟೆ ನಿಮರ್ಾಣಗೊಳಿಸಿದ್ದರು. ಅದು ಇಂದು ಹಿನ್ನೀರಿನಲ್ಲಿ ಮುಳುಗಡೆ ಹೊಂದಿದೆ.
ಪೇಶ್ವೆಗಳ ಕಾಲದಲ್ಲಿ ಟಂಕಶಾಲೆಯೊಂದನ್ನು ಸ್ಥಾಪಿಸಲಾಗಿತ್ತು. ಅದು 1835 ವರೆಗೆ ಚಾಲ್ತಿಯಲ್ಲಿತ್ತು ಎಂದು ತಿಳಿದು ಬರುತ್ತದೆ. ಮರಾಠರ ಕಾಲದಲ್ಲಿಯ ಕೋಟೆ ಮತ್ತು ಸೈನಿಕ ಶಿಬಿರಗಳಿದ್ದ ಅವಶೇಷಗಳು ಬಾಗಲಕೋಟೆಯ ಸುತ್ತಮುತ್ತಲೂ ಕಂಡುಬಂದಿವೆ.