ಮಾರ್ಚ 22 ರಂದು ಅರವಿನ ಅಂಗಳ ಕಾರ್ಯಕ್ರಮ

Aravina Angala program on March 22nd

ಲೋಕದರ್ಶನ ವರದಿ 

ಮಾರ್ಚ 22 ರಂದು ಅರವಿನ ಅಂಗಳ ಕಾರ್ಯಕ್ರಮ 

ಕೊಪ್ಪಳ 20: ಬೆಳಕು ಚಾರಿಟ್ರೇಬಲ್ ಟ್ರಸ್ಟ್‌ ಬೆಂಗಳೂರು ಹಾಗೂ ಶ್ರೀಅರುಣೋದಯ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಚಿಲವಾಡಗಿ ಹಮ್ಮಿಕೊಳ್ಳಲಾಗುತ್ತಿರುವ ಅರಿವಿನ ಅಂಗಳ ಎಂಬ ತಿಂಗಳ ಕಾರ್ಯಕ್ರಮವನ್ನು ತಾಲೂಕಿನ ಬಹದ್ದೂರ ಬಂಡಿಯ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾ.22ರ ಶನಿವಾರ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. 

 ಈ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತರಾಜ್ ಇಲಾಖೆಯ ವಿಶೇಷ ಕಾರ್ಯದರ್ಶಿಗಳಾದ ಚಂದ್ರಶೇಖರ.ಎಂ.ಉದ್ಘಾಟಿಸುವರು. 

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೇಲು ಉಸ್ತುವಾರಿ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಕುರಿ ವಹಿಸುವರು. 

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಯೋಗಾನಂದ ಲೇಬಗೇರಿ,ನಾಟಕ ಅಕಾಡಮಿ ಸದಸ್ಯರಾದ ಚಾಂದಪಾಷಾ ಕಿಲ್ಲೇದಾರ,ಗ್ರಾ.ಪಂ.ಸದಸ್ಯರಾದ ದಾದಾಪೀರ ಮಂಡಲಗೇರಿ,ಮಹೆಬೂಬಿ ಹಿರೇಮಸೂತಿ,ಹುಸೇನಬೀ ಸಣ್ಣಮಸೂತಿ, ಪಾರ್ವತಮ್ಮ ಕುರಿ,ಮಂಜುನಾಥ ನಡಲಮನಿ,ಮಹಮ್ಮದ ರಫಿ,ಕೆಂಚಮ್ಮ ನಡಲಮನಿ, ಸಿ.ಆರ್‌.ಪಿ.ಹನುಮಂತಪ್ಪ ಕುರಿ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ​‍್ಪ ಅಂಡಗಿ ಚಿಲವಾಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.