ಧಾರವಾಡ ಜನತೆಗೆ ಅಪ್ಪು ಅಭಿನಂದನೆ

ಲೋಕ ದರ್ಶನ ವರದಿ 

ಧಾರವಾಡ 10: ಧಾರವಾಡ ಜನತೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ. ಯುವರತ್ನ ಚಿತ್ರದ ಶೂಟಿಂಗ್ ಗೆ ಸಹಕರಿಸಿದ ಧಾರವಾಡ ಜನತೆಗೆ ಪುನೀತ್ ಧನ್ಯವಾದ ಹೇಳಿದ್ದಾರೆ. 

  ಕಳೆದ ವಾರ ಕವಿವಿ ಹಾಗೂ ಕನರ್ಾಟಕ ಕಾಲೇಜು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಯುವರತ್ನ ಚಿತ್ರದ ಚಿತ್ರೀಕರಣ ನಡೆದಿತ್ತು.  ಯುವರತ್ನ ಸಿನಿಮಾ ಧಾರವಾಡದಲ್ಲಿ ಶೂಟ್ ಮಾಡಿದ್ವಿ, ಅಲ್ಲಿಗೆ ಬಂದಾಗ ಎಲ್ಲರೂ ತುಂಬಾ ಅವಕಾಶ ಕೊಟ್ಟರು. ಧಾರವಾಡದಲ್ಲಿ ಇದ್ದಾಗ ಉತ್ತರ ಕನರ್ಾಟಕ ಜನರ ಪ್ರೀತಿ ನನಗೆ ತುಂಬಾ ಸಂತೋಷ ಕೊಟ್ಟಿತು. ಕೆಲವರಿಗೆ ಫೋಟೋ ತೆಗೆಸಿಕೊಳ್ಳಲು ಸಿಗಲು ಆಗಿರಕ್ಕಿಲ್ಲ ಅದಕ್ಕೆ ಕ್ಷಮಿಸಿ ಧಾರವಾಡಿಗರು ಶೂಟಿಂಗ್ ಸಮಯದಲ್ಲಿ ತೋರಿದ ಪ್ರೀತಿ ನನ್ನ ಜೀವಮಾನದಲ್ಲಿ ಮರೆಯೋದಿಲ್ಲ ಎಂದ ಅಪ್ಪು ತಿಳಿಸಿದ್ದಾರೆ.