ಉದ್ಯೋಗ ಆಧಾರಿತ ಪ್ರೋತ್ಸಾಹಧನ ಯೋಜನೆಗೆ ಅನುಮೋದನೆ: ಕೆ.ವಿ. ಪ್ರವೀಣ್
Approval for Employment Based Incentive Scheme: K.V. Praveen
ಬಳ್ಳಾರಿ 08: ಕೇಂದ್ರ ಸರ್ಕಾರದಕಾರ್ಮಿಕ ಮತ್ತುಉದ್ಯೋಗ ಸಚಿವಾಲಯವುಉದ್ಯೋಗಆಧಾರಿತ ಪ್ರೋತ್ಸಾಹಧನ (ಇಎಲ್‌ಐ) ಯೋಜನೆಗೆಅನುಮೋದನೆ ನೀಡಿದ್ದು, ಉದ್ಯೋಗ ಸೃಷ್ಠಿ ಮತ್ತುಎಲ್ಲಾಉತ್ಪಾದನಾ ವಲಯಗಳಲ್ಲಿ ಉದ್ಯೋಗಾವಕಾಶ ಮತ್ತು ಸಾಮಾಜಿಕ ಭದ್ರತೆ ಹೆಚ್ಚಿಸುವುದು ಈ ಯೋಜನೆಯಉದ್ದೇಶವಾಗಿದೆಎಂದುಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಓ) ಬಳ್ಳಾರಿ ಪ್ರಾದೇಶಿಕ ಕಚೇರಿಯಆಯುಕ್ತಕೆ.ವಿ.ಪ್ರವೀಣ್‌ಅವರು ಹೇಳಿದರು.
ಮಂಗಳವಾರ ನಗರದಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಓ) ಬಳ್ಳಾರಿ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಏರಿ್ಡಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರುಮಾತನಾಡಿದರು.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಓ) ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ಕೊಪ್ಪಳ ಸೇರಿ ನಾಲ್ಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುವ ಕೈಗಾರಿಕಾ ವಲಯ ಮತ್ತುಇತರೆ ವಲಯಗಳ ಹೊಸ ಉದ್ಯೋಗಿಗಳು ಹಾಗೂ ಉದ್ಯೋಗಿಗಳಿಗೆ ಕೆಲಸ ನೀಡಿದಉದ್ಯೋಗದಾತರುಇಬ್ಬರಿಗೂ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆಎಂದರು.
ಈ ಯೋಜನೆಯನ್ನು 2024ಹಿ25ರ ಕೇಂದ್ರ ಬಜೆಟ್‌ನಲ್ಲಿ ಪರಿಚಯಿಸಲಾಯಿತು.ಯುವಕರಿಗೆಉದ್ಯೋಗ, ಕೌಶಲ್ಯಅಭಿವೃದ್ಧಿ ಮತ್ತು ಉದ್ಯಮಶೀಲತೆಯನ್ನು ಬೆಂಬಲಿಸುವ ಸಲುವಾಗಿ ಜಾರಿಗೊಳಿಸಲಾಯಿತು. ಈ ಯೋಜನೆಯ ಪ್ರಯೋಜನವು 2025 ರಆಗಸ್ಟ್ 01ರಿಂದ2027 ರಜುಲೈ 31ರ ನಡುವೆ ಸೃಷ್ಟಿಯಾದ ಉದ್ಯೋಗಗಳಿಗೆ ಮಾತ್ರಅನ್ವಯವಾಗುತ್ತದೆಎಂದರು.
ಇಪಿಎಫ್‌ಓಕಚೇರಿ ವತಿಯಿಂದ ಈಗಾಗಲೇ ಪ್ರತಿ ತಿಂಗಳು ಆಯೋಜಿಸುತ್ತಿರುವ ‘ನಿಧಿ ಆಪ್ಕೆ ನಿಕಟ್’ ಕಾರ್ಯಕ್ರಮದಲ್ಲಿಯೋಜನೆಯಕುರಿತುಅರಿವು ಮೂಡಿಸಲಾಗುವುದು ಹಾಗೂ ತಾಲ್ಲೂಕು ಮಟ್ಟದಲ್ಲಿಜಾಗೃತಿ ಸಭೆ ನಡೆಸಲಾಗುವುದುಎಂದು ತಿಳಿಸಿದರು.
ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಓ) ಬಳ್ಳಾರಿ ಪ್ರಾದೇಶಿಕ ಕಚೇರಿಯಆರ್ಥಿಕ ನಿರ್ವಹಣಾಧಿಕಾರಿ ಕೆ.ಎಸ್.ವೇಣುಗೋಪಾಲ್‌ಅವರುಮಾತನಾಡಿ, ಈ ಯೋಜನೆಯಡಿಮೊದಲ ಬಾರಿಗೆಉದ್ಯೋಗಕ್ಕೆ ಸೇರುವವರಿಗೆ 2 ಕಂತುಗಳಲ್ಲಿ ರೂ.15,000 ವರೆಗಿನ 1 ತಿಂಗಳ ವೇತನ ನೀಡಲಾಗುವುದು. ಹೊಸಉದ್ಯೋಗಿಯ ಸೇರೆ್ಡಗಾಗಿಉದ್ಯೋಗದಾತರಿಗೆ 2 ವರ್ಷಗಳವರೆಗೆ ತಿಂಗಳಿಗೆ ಗರಿಷ್ಟ 3,000 ರೂ.ಗಳ ಪ್ರೋತ್ಸಾಹಧನ ನೀಡಲಾಗುವುದುಎಂದು ತಿಳಿಸಿದರು.
ಈ ಯೋಜನೆಯುಎರಡು ಭಾಗಗಳನ್ನು ಒಳಗೊಂಡಿದ್ದು, ?ಭಾಗ-ಎ' ಮೊದಲ ಬಾರಿಗೆ ಕೆಲಸ ಮಾಡುವವರ ಮೇಲೆ ಗಮನ ಕೇಂದ್ರೀಕರಿಸಿದರೆ ?ಭಾಗ-ಬಿ'ಉದ್ಯೋಗದಾತರ ಮೇಲೆ ಗಮನ ಕೇಂದ್ರೀಕರಿಸಿದೆ ಎಂದರು.
ಭಾಗ ಎ: ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರೋತ್ಸಾಹ: ಈ ಭಾಗವು?ಇಪಿಎಫ್‌ಒ’ ನಲ್ಲಿ ನೋಂದಾಯಿತರಾದ ಮೊದಲ ಬಾರಿಯ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡಿದ್ದು, ಈ ಯೋಜನೆಯ ಸಾಮಾಜಿಕ ಭದ್ರತೆಯ ಮೂಲಕ ಸುರಕ್ಷತಾಜಾಲವನ್ನುಒದಗಿಸುತ್ತದೆ ಮತ್ತುಓಪಚಾರಿಕಆರ್ಥಿಕತೆಗೆ ಸಂಯೋಜಿಸಲುಅವರಿಗೆ ಸಹಾಯ ಮಾಡುತ್ತದೆ.1 ಲಕ್ಷರೂ.ವರೆಗೆ ಮಾಸಿಕ ವೇತನ ಪಡೆಯುವ ಉದ್ಯೋಗಿಗಳು ಅರ್ಹರಾಗಿರುತ್ತಾರೆ.
ಭಾಗ ಬಿ: ಉದ್ಯೋಗದಾತರಿಗೆ ಬೆಂಬಲ: ಈ ಭಾಗವುಎಲ್ಲಾ ಕ್ಷೇತ್ರಗಳಲ್ಲಿ ಹೆಚ್ಚುವರಿಉದ್ಯೋಗ ಸೃಷ್ಟಿಯತ್ತ ಗಮನ ಹರಿಸುತ್ತದೆಯಾದರೂ, ಉತ್ಪಾದನಾ ವಲಯದ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುತ್ತದೆ. ಉತ್ಪಾದನಾ ವಲಯಕ್ಕೆ, ಪ್ರೋತ್ಸಾಹಕಗಳನ್ನು 3 ಮತ್ತು 4 ನೇ ವರ್ಷಗಳಿಗೂ ವಿಸ್ತರಿಸಲಾಗುವುದು.
ಉದ್ಯೋಗದಾತರಿಗೆದೊರೆಯುವ ಪ್ರೋತ್ಸಾಹಧನವುನೇಮಕಗೊಂಡ ಪ್ರತಿ ಹೊಸ ಉದ್ಯೋಗಿಗೆಉದ್ಯೋಗದಾತರು ಮಾಸಿಕ ಪ್ರೋತ್ಸಾಹಧನವನ್ನು ಪಡೆಯುತ್ತಾರೆ.
10,000 ರೂ. ವರೆಗಿನ ಸಂಬಳಕ್ಕೆ 1,000 ರೂ.,10,001 ರೂ. ರಿಂದ 20,000 ರೂ. ವರೆಗಿನ ಸಂಬಳಕ್ಕೆ 2,000 ರೂ.,20,000 ರೂ. ಕ್ಕಿಂತ ಹೆಚ್ಚಿನ ಸಂಬಳಕ್ಕೆ 3,000 ರೂ. (ರೂ. 1 ಲಕ್ಷದವರೆಗೆ)ಉದ್ಯೋಗದಾತರು ಪ್ರೋತ್ಸಾಹಧನ ಪಡೆಯಲುಅರ್ಹತಾ ಮಾನಡಂಡಗಳನ್ನು ಹೊಂದಿರಬೇಕು.
ಯೋಜನೆಯ ಅನುಷ್ಠಾನ: ಉದ್ಯೋಗಆಧಾರಿತಪ್ರೋತ್ಸಾಹಧನಯೋಜನೆಯಡಿ ಎಲ್ಲಾ ವಿತರಣೆಗಳು ಪಾರದರ್ಶಕತೆ ಮತ್ತುದಕ್ಷತೆಗಾಗಿ ನೇರ ನಗದು ವರ್ಗಾವಣೆ (ಡಿಬಿಟಿ) ಮಾದರಿಅನುಸರಿಸುತ್ತದೆ. ಉದ್ಯೋಗಿಗಳಿಗೆ ಪಾವತಿಗಳನ್ನು (ಭಾಗ ಎ) ಆಧಾರ್‌ಸಂಯೋಜಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಮೂಲಕ ರವಾನಿಸಲಾಗುತ್ತದೆ.ಉದ್ಯೋಗಿ ಪ್ರೋತ್ಸಾಹಕಗಳನ್ನು (ಭಾಗ ಬಿ) ನೇರವಾಗಿಪಾನ್-ಸಂಬಂಧಿತ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.ಉದ್ಯೋಗದಾತ ಮತ್ತುಉದ್ಯೋಗಿ ಪ್ರಯೋಜನಗಳು ಎರಡೂ ನಿರಂತರತೆ ಮತ್ತುಅನುಸರಣೆಗೆ ಸಂಬಂಧಿಸಿರುವುದರಿಂದ, ಪ್ರೋತ್ಸಾಹಕ-ಸಂಬಂಧಿತ ಮಾದರಿಯು ನಿರಂತರಉದ್ಯೋಗವನ್ನು ಪ್ರೋತ್ಸಾಹಿಸುತ್ತದೆ ಮತ್ತುದುರುಪಯೋಗವನ್ನುಕಡಿಮೆ ಮಾಡುತ್ತದೆಎಂದು ವಿವರಿಸಿದರು.
ಈ ಸಂದರ್ಭದಲ್ಲಿಜಿಲ್ಲಾಕಾರ್ಮಿಕ ಭವಿಷ್ಯ ನಿಧಿ ಪ್ರಾದೇಶಿಕ ಕಚೇರಿಯ ಸಹಾಯಕಆಯುಕ್ತ ಟಿ.ನಂದನ್ ಸಿಂಗ್ ಸೇರಿದಂತೆಇತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 