ಬೆಳಗಾವಿ : ನಗರದ ಆನಂದ ಅಪ್ಪುಗೋಳ ಆಧಿನದ ಸಂಗೊಳಿ ರಾಯಣ್ಣ ಸೊಸೈಟಿಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂಗಳ ವಂಚನೆ ಪ್ರಕರಣದ ತನಿಖೆಯನ್ನು ಸಿಐಡಿ ಅಧಿಕಾರಿಗಳು ಆರಂಭಿಸಿದ್ದು, ಈ ಕುರಿತು ಅಧಿಕಾರಿಗಳ ತಂಡವು ಶೀಘ್ರವಾಗಿ ಬೆಳಗಾವಿಗೆ ಆಗಮಿಸಲಿದೆ ಎಂದು ಹೇಳಲಾಗಿದೆ.
ಸಿಐಡಿ ಡಿವೈಎಸ್ಪಿ ಪುರಷೋತ್ತಮ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಭೀಮಾಂಬಿಕ ಸಹಕಾರ ಸಂಘಗಳ 50ಕ್ಕೂ ಅಧಿಕ ಸೊಸೈಟಿಗಳಲ್ಲಿ ಸಾವಿರಾರು ಜನ ಗ್ರಾಹಕರು ನೂರಾರು ಕೋಟಿ ರೂ. ಠೇವಣಿ ಹಣ ಇಟ್ಟಿದ್ದರು. ಠೇವಣಿ ಅವಧಿ ಮುಗಿದರೂ ಸೊಸೈಟಿ ಅಧ್ಯಕ್ಷ ಹಾಗೂ ಚಿತ್ರ ನಿಮರ್ಾಪಕ ಆನಂದ ಅಪ್ಪುಗೋಳ ಹಣ ಮರಳಿಸದೇ ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ.
ಈ ಕುರಿತು ಗ್ರಾಹಕರು ಪ್ರತಿಭಟನೆ ನಡೆಸುತ್ತಲೇ ಇದ್ದು, ಕೆಲ ತಿಂಗಳ ಹಿಂದೆಯಷ್ಟೇ ಮಹಾನಗರ ಪೊಲೀಸರು ಈ ನೂರಾರು ಕೋಟಿ ವಂಚನೆಯ ತನಿಖೆಯನ್ನು ಸಿಒಡಿಗೆ ಹಸ್ತಾಂತರಿಸಿದ್ದರು. ಪ್ರಕರಣದ ತನಿಖೆ ಆರಂಭಿಸಿರುವ ಡಿವೈಎಸ್ಪಿ ಪುರಷೋತ್ತಮ ನೇತೃತ್ವದ ತಂಡ ಮುಂದಿನ ವಾರ ಬೆಳಗಾವಿಗೆ ಬರಲಿದೆ. ಸೊಸೈಟಿ ಅಧ್ಯಕ್ಷ ಆನಂದ ಅಪ್ಪುಗೋಳ ಹಾಗೂ ಸೊಸೈಟಿ ನಿದರ್ೆಶಕರನ್ನು ಈ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ.
ರಾಜ್ಯ ಸಕರ್ಾರ ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದು, ತಮ್ಮ ಠೇವಣಿ ಹಣ ಕೈ ಸೇರುವ ನಿರೀಕ್ಷೆಯಲ್ಲಿ ಗ್ರಾಹಕರಿದ್ದಾರೆ ಎಂದು ಹೇಳಲಾಗಿದೆ.