ನೂತನ ಪದಾಧಿಕಾರಿಗಳ ನೇಮಕ

ಲೋಕದರ್ಶನ ವರದಿ

ಶಿರಹಟ್ಟಿ: ಅಖಂಡ ಶಿರಹಟ್ಟಿ ತಾಲೂಕಿನಿಂದ ಬೇರ್ಪಟ್ಟ ಲಕ್ಷ್ಮೇಶ್ವರ ತಾಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣಕ್ಕೆ ಹೊಸದಾಗಿ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಯಿತು.

ಇತ್ತೀಚೆಗೆ ಲಕ್ಷ್ಮೇಶ್ವರ ಪ್ರವಾಸಿ ಮಂದಿರದಲ್ಲಿ ನಡೆದ ನೂತನ ತಾಲೂಕು ಸಭೆಯಲ್ಲಿ ಗದಗ ಜಿಲ್ಲಾಧ್ಯಕ್ಷ ದಾವಲಸಾಬ ಮುಳಗುಂದ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದಶರ್ಿಯಾಗಿ ಸೀನು ಬಂಡಾರಿ, ಖಜಾಂಚಿಯಾಗಿ ವೆಂಕಟೇಶ ಬೇಲೂರು, ಹಾವೇರಿ ಜಿಲ್ಲಾ ಕಾರ್ಯದಶರ್ಿಯಾಗಿ ನೂರಹ್ಮದ ಲಕ್ಷ್ಮೇಶ್ವರ ಇವರನ್ನು ಆಯ್ಕೆಯ ಮೂಲಕ ನೇಮಿಸಲಾಯಿತು. ಈ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕಾಧ್ಯಕ್ಷ ರಫೀಕ್ ಕೆರೆಮನಿ, ಲಕ್ಷ್ಮೇಶ್ವರ ತಾಲೂಕಾಧ್ಯಕ್ಷ ಇಲಿಯಾಸ್ ಮೀರಾ ಹಾಗೂ ಸರ್ವ ಪದಾಧಿಕಾರಿಗಳು ಹಾಜರಿದ್ದರು.