ಲಾಹೋರ್, ಸೆ 16 ಶ್ರೀಲಂಕಾ ಹಾಗೂ ಪಾಕಿಸ್ತಾನದ ನಡುವೆ ಸೆ. 27ರಿಂದ ಆರಂಭವಾಗುವ ತವರು ಸರಣಿ ನಿಮಿತ್ತಾ ಪಾಕ್ನಲ್ಲಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ ಬಳಿಕ ಪಂದ್ಯದ ಅಧಿಕಾರಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ನೇಮಿಸಲಿದೆ.
ತಟಸ್ಥ ಅಂಪೈರ್ಗಳನ್ನು ಮತ್ತು ಮ್ಯಾಚ್ ರೆಫರಿಗಳನ್ನು ನೇಮಿಸುವ ಮೊದಲು ಪಾಕಿಸ್ತಾನ ಸರ್ಕಾರವು ಜಾರಿಗೆ ತರಬೇಕಾದ ಭದ್ರತಾ ಯೋಜನೆಗಳನ್ನು ಐಸಿಸಿ ವಿಶ್ಲೇಷಿಸುತ್ತದೆ ಎಂದು ಪಾಕಿಸ್ತಾನದ ಉರ್ದು ದಿನಪತ್ರಿಕೆ "ಡೈಲಿ ಜಾಂಗ್" ವರದಿ ಮಾಡಿದೆ.
2015ರಲ್ಲಿ ಪಾಕ್ನಲ್ಲಿ ಜಿಂಬಾಬ್ವೆ ಹಾಗೂ ಪಾಕಿಸ್ತಾನದ ನಡುವೆ ಅಂತಾರಾಷ್ಟ್ರೀಯ ಸರಣಿ ನಡೆದಿತ್ತು. ಈ ಸರಣಿಗೆ ಐಸಿಸಿ ಯಾವುದೇ ಪಂದ್ಯದ ತಟಸ್ಥ ಅಧಿಕಾರಿಗಳನ್ನು ನೇಮಿಸಿರಲಿಲ್ಲ ಮತ್ತು ಕ್ರಿಕೆಟಿಂಗ್ ವಿಷಯಗಳ ಮೇಲ್ವಿಚಾರಣೆಯನ್ನು ಉಭಯ ದೇಶಗಳಿಗೆ ವಹಿಸಿತ್ತು.
ಪಾಕಿಸ್ತಾನದಲ್ಲಿ ನಡೆಯುವ ಅಂತಾರಾಷ್ಟ್ರೀಯ ಸರಣಿಗೆ ಪಂದ್ಯದ ಅಧಿಕಾರಿಗಳನ್ನು ನೇಮಿಸುವ ವಿಚಾರದಲ್ಲಿ ಐಸಿಸಿಯು ಹಿಂದಿನ ಉದಾಹರಣೆಯನ್ನು ಅನುಸರಿಸುತ್ತದೆಯೇ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಸಂಸ್ಥೆಗಳಿಗೆ ಬಿಟ್ಟುಕೊಡಲಿದೆಯೇ ಅಥವಾ ಭದ್ರತಾ ವ್ಯವಸ್ಥೆಗಳನ್ನು ಪರೋಕ್ಷವಾಗಿ ಅನುಮೋದಿಸಲು ಕೇಳುತ್ತದೆಯೇ ಎಂಬುದು ಕುತೂಹಲಕಾರಿಯಾಗಿದೆ.
ಮುಂಬರುವ ಪಾಕಿಸ್ತಾನ ಸರಣಿಗೆ ತೆರಳುವ ಶ್ರೀಲಂಕಾ ತಂಡಕ್ಕೆ ಭಯೋತ್ಪಾದಕರಿಂದ ಬೆದರಿಕೆ ಇದೆ ಎಂದು ಶ್ರೀಲಂಕಾ ಪ್ರಧಾನ ಮಂತ್ರಿಗಳ ಕಚೇರಿಯು ಲಂಕಾ ಕ್ರಿಕೆಟ್ ಮಂಡಳಿಗೆ ಈ ಹಿಂದೆ ಮುನ್ಸೂಚನೆ ನೀಡಿತ್ತು. ಮತ್ತೊಮ್ಮೆ ಪಾಕಿಸ್ತಾನದಲ್ಲಿ ಭದ್ರತೆಯನ್ನು ಪರಿಶೀಲಿಸುವಂತೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಧಾನ ಮಂತ್ರಿ ಕಚೇರಿಗೆ ಮನವಿ ಮಾಡಿಕೊಂಡಿತ್ತು.
ಇದಾದ ಬಳಿಕ ಸರಣಿಯನ್ನು ತಟಸ್ಥ ಸ್ಥಳಗಳಿಗೆ ವರ್ಗಾಹಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿತ್ತು. ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಹಾಗೂ ಮೂರು ಪಂದ್ಯಗಳ ಟಿ-20 ಸರಣಿ ಸೆ. 27 ರಿಂದ ಅ.9ರವರೆಗೆ ನಡೆಯಲಿದೆ.