ಒಂದುವರೆ ತಿಂಗಳಲ್ಲಿ ಎಲ್ಲ ದೇವಾಲಯಗಳಿಗೆ ಆಡಳಿತಾಧಿಕಾರಿಗಳ ನೇಮಕ

ಹಾವೇರಿ26 : ಹಿಂದು ದೇವಾಲಯಗಳ ರಕ್ಷಣೆ ಹಾಗೂ ವ್ಯವಸ್ಥಿತ ನಿರ್ವಹಣೆಗಾಗಿ ಮುಂದಿನ ಒಂದೂವರೆ ತಿಂಗಳೊಳಗಾಗಿ ರಾಜ್ಯದ ಎಲ್ಲ ದೇವಾಲಯಗಳಿಗೂ ವಿವಿಧ ಹಂತದ ಅಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕಮಾಡಲಾಗುವುದು ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಧಾಮರ್ಿಕ ದತ್ತಿ ಕಾಯ್ದೆ ಅನುಸಾರ ಮುಜರಾಯಿ ಇಲಾಖೆಯಲ್ಲಿ ಎ,ಬಿ ಮತ್ತು ಸಿ ದಜರ್ೆಯ ದೇವಾಲಯಗಳಾಗಿ ವಗರ್ೀಕರಿಸಲಾಗಿದೆ. ರಾಜ್ಯದಲ್ಲಿ ಒಂದು ನೂರು ದೇವಾಲಯಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲು ಅಜರ್ಿ ಆಹ್ವಾನಿಸಲಾಗಿದೆ. ಬಿ ಮತ್ತು ಸಿ ದಜರ್ೆಯ ದೇವಾಲಯಗಳಿಗೂ ಆಡಳತಾಧಿಕಾರಿಗಳನ್ನು ನೇಮಕ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಿದರು.

   ರಾಜ್ಯದಲ್ಲಿ 34 ಸಾವಿರ ದೇವಾಲಯಗಳಿವೆ, ಈ ಪೈಕಿ ಒಂದು ನೂರು ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸಲು ಅಜರ್ಿ ಆಹ್ವಾನಿಸಲಾಗಿದೆ. ಜಿಲ್ಲಾಧಿಕಾರಿಗಳ ಮೂಲಕ ವಿವರ  ಸಲ್ಲಿಸಲಾಗಿದೆ. ರಾಜ್ಯದಲ್ಲಿ ಅಂದಾಜು ಒಂದು ಸಾವಿರ  ಎ ಮತ್ತು ಬಿ ದಜರ್ೆಯ ದೇವಾಲಯಗಳು, ಉಳಿದಂತೆ 33 ಸಾವಿರದಷ್ಟು ಸಿ ದಜರ್ೆಯ ದೇವಾಲಯಗಳಿವೆ.  ಎ ದಜರ್ೆಯ ದೇವಾಲಯಗಳಿಗೆ ಉಪ ವಿಭಾಗ ಮಟ್ಟದ ಅಧಿಕಾರಗಳನ್ನು, ಬಿ ದಜರ್ೆಯ ದೇವಾಲಯಗಳಿಗೆ ರೆವಿನ್ಯೂ ಇನ್ಸಪೆಕ್ಟರ್ ಹಾಗೂ ಸಿ ದಜರ್ೆಯ ದೇವಾಲಯಗಳಿಗೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಕಮಾಡುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

  ರಾಜ್ಯದ ಒಂದು ನೂರು ಎ ದಜರ್ೆಯ ದೇವಾಲಯಗಳಲ್ಲಿ ಗೋ ರಕ್ಷಣಾ ಕೇಂದ್ರವನ್ನು ತೆರೆಯಲಾಗುವುದು.  ಜಿಲ್ಲೆಯ ಜನಪ್ರತಿನಿಧಿಗಳ ಮನವಿಯ ಮೇರೆಗೆ  ಹಾವೇರಿ ಜಿಲ್ಲೆಯಲ್ಲಿಯೂ ಗೋ ರಕ್ಷಣಾ ಕೇಂದ್ರವನ್ನು ತೆರೆಯಲಾಗುವುದು. ಈ ಉದ್ದೇಶಕ್ಕಾಗಿ ಹತ್ತು ಎಕರೆ ಜಮೀನು ಗುರುತಿಸಲು ಜಿಲ್ಲಾಧಿಕಾರಿಗಳಿಗೆ  ನಿದರ್ೆಶನ ನೀಡಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ಎ ದಜರ್ೆ ದೇವಾಲಯಗಳು ಇಲ್ಲದಿದ್ದರೂ ಗೋ ರಕ್ಷಣಾ ಕೇಂದ್ರವನ್ನು ತೆರೆಲಾಗುವುದು ಎಂದು ತಿಳಿಸಿದರು.

 ಮಾಧ್ಯಮಗೋಷ್ಠಿಯಲ್ಲಿ ಹಾನಗಲ್ ಶಾಸಕರಾದ ಸಿ.ಎಂ.ಉದಾಸಿ, ಹಾವೇರಿ ಶಾಸಕರಾದ ನೆಹರು ಓಲೇಕಾರ, ಬ್ಯಾಡಗಿ ಶಾಸಕರದ ವಿರುಪಾಕ್ಷಪ್ಪ ಬಳ್ಳಾರಿ,  ಜಿಲ್ಲಾ ಪಂಚಾಯತ್ ಸದಸ್ಯರಾದ ಸಿದ್ಧರಾಜ ಕಲಕೋಟಿ, ವಿರುಪಾಕ್ಷಪ್ಪ ಕಡ್ಲಿ, ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಮುಖ್ಯ ಕಾರ್ಯ ನಿವರ್ಾಹಣಾಧಿಕಾರಿ ರಮೇಶ ದೇಸಾಯಿ ಉಪಸ್ಥಿತರಿದ್ದರು.