ಮೂರು ವರ್ಷದ ಅವಧಿಗೆ ಗೌರವ ಉಪಾಧ್ಯಕ್ಷರ ನೇಮಕ

ಮೂರು ವರ್ಷದ ಅವಧಿಗೆ ಗೌರವ ಉಪಾಧ್ಯಕ್ಷರ ನೇಮಕ Appointment of Honorary Vice President for a term of three years

ಧಾರವಾಡ 17: ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರಾ​‍್ಯಧ್ಯಕ್ಷ ಬಸವಪ್ರಭು ಹೊಸಕೇರಿ ಅವರ ಅಧ್ಯಕ್ಷತೆಯಲ್ಲಿ ದಿ: 12ರಂದು ಜರುಗಿದ ಕಾರ‌್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಆಯ್ಕೆಯಾದುದ್ದನ್ನು ಸಂಘದ ಅಧ್ಯಕ್ಷರಾದ ಚಂದ್ರಕಾಂತ ಬೆಲ್ಲದ ಅವರಿಂದ ಅನುಮೋದನೆಗೊಂಡು ಈ ಕೆಳಗಿನ 5 ಜನ ಮಹನೀಯರನ್ನು ಸಂಘದ ಘಟನಾವಳಿಯಂತೆ, ಸಾಮಾಜಿಕ ನ್ಯಾಯದಡಿಯಲ್ಲಿ ಕ.ವಿ.ವ. ಸಂಘದ ಗೌರವ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.  

1. ಶ್ರೀ ಕೆ. ಬಿ. ನಾವಲಗಿಮಠ, ಕಾನೂನು ತಜ್ಞರು, ಧಾರವಾಡ, 2. ಡಾ. ಪಾಂಡುರಂಗ ಪಾಟೀಲ, ಪ್ರಗತಿಪರ ಸಾಮಾಜಿಕ ಚಿಂತಕರು, ಹುಬ್ಬಳ್ಳಿ, 3. ಶ್ರೀ ಶ್ರೀನಿವಾಸ ವಾಡಪ್ಪಿ, ಹಿರಿಯ ವಾಗ್ಮಿಗಳು, ಧಾರವಾಡ, 4. ಡಾ. ಅಜಿತ್ ಪ್ರಸಾದ ಜೈನ, ಹಿರಿಯ ಶಿಕ್ಷಣ ತಜ್ಞರು, ಧಾರವಾಡ, 5. ಡಾ. ತಮಿಳ ಸೆಲ್ವಿ, ಕನ್ನಡ ಪ್ರಾಧ್ಯಾಪಕರು, ಚೆನ್ನೈ (ಹೊರನಾಡ ಕನ್ನಡಿಗರು) 

ಈ ಮೇಲಿನ ಮಹನೀಯರನ್ನು ಮೂರು ವರ್ಷದ ಅವಧಿಗೆ ಗೌರವ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.