ಶಿಗ್ಗಾವಿ 02 : ಕರವೇ ಸ್ವಾಭಿಮಾನಿ ಸೇನೆ ಶಿಗ್ಗಾವಿ ತಾಲೂಕಿಗೆ ನೂತನ ತಾಲೂಕ ಅಧ್ಯಕ್ಷರಾಗಿ ಸುರೇಶ ವನಹಳ್ಳಿ ಅವರನ್ನು ನೂತನ ತಾಲೂಕ ಅಧ್ಯಕ್ಷರನ್ನಾಗಿ ಸಂಘಟನೆಯ ರಾಜ್ಯಾಧ್ಯಕ್ಷ ನಿಂಗರಾಜ್ ಗೌಡ್ರು ರವರು ಬೆಂಗಳೂರು ಗಾಂಧಿನಗರ ಕ್ಷೇತ್ರದಲ್ಲಿ ನಡೆದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನೇಮಿಸಿ ಆದೇಶ ಹೊರಡಿಸಿದ್ದಾರೆ,
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯಧ್ಯಕ್ಷ ಹಾಗೂ ಹಾವೇರಿ ಜಿಲ್ಲಾಧ್ಯಕ್ಷ ರಾಮು ತಳವಾರ, ಹಾವೇರಿ ಜಿಲ್ಲಾ ಮಹಿಳಾ ಸಮಿತಿ ಅಧ್ಯಕ್ಷ್ಯೆ ಸುಮಾ ಪುರದ, ಜಿಲ್ಲಾ ಮಹಿಳಾ ಸಮಿತಿ ಉಪಾಧ್ಯಕ್ಷ್ಯೆ ಪ್ರೇಮಾ ಮುದಿಗೌಡ್ರ, ಜಿಲ್ಲಾ ಉಸ್ತುವಾರಿ ಅಧ್ಯಕ್ಷ ಪ್ರವೀಣ ಕಾಗದ, ಜಿಲ್ಲಾ ವಕ್ತಾರ ಶಿವಪ್ಪ ಬಳಲ್ಕೊಪ್ಪ ಹಾನಗಲ್ಲ ತಾಲೂಕ ಅಧ್ಯಕ್ಷ ಉಮೇಶಗೌಡ್ರ ಮುದಿಗೌಡ್ರ, ಬ್ಯಾಡಗಿ ತಾಲೂಕ ಅಧ್ಯಕ್ಷ ಮಂಜುನಾಥ ಧಾನಪ್ಪನವರ, ಹಿರೆಕೆರೂರ ತಾಲೂಕ ಅಧ್ಯಕ್ಷ ವೀರೇಶ ಹಡಪದ, ರಾಣೆಬೆನ್ನೂರ ತಾಲೂಕ ಅಧ್ಯಕ್ಷ ನಾಗರಾಜ ಯರಬಾಳ, ಹಾವೇರಿ ನಗರ ಸಮಿತಿ ಅಧ್ಯಕ್ಷ್ಯೆ ರೇಣುಕಾ, ರಾಣೆಬೆನ್ನೂರ ತಾಲೂಕ ಮಹಿಳಾ ಅಧ್ಯಕ್ಷ್ಯೆ ಸುನಂದ ಎಂ ಕೂಡಲಕಟ್ಟಿ, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.