ಯಲ್ಲಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಉಪವಿಭಾಗ ಸಮಿತಿಯಲ್ಲಿ ತಿರಸ್ಕರಿಸಲ್ಪಟ್ಟ ಅತಿಕ್ರಮಣದಾರರು ಜಿಲ್ಲಾ ಅರಣ್ಯ ಹಕ್ಕು ಸಮಿತಿಗೆ ಮೇಲ್ಮನವಿ ಸಲ್ಲಿಸಿರುವ ಅಜರ್ಿಯನ್ನು ಅತಿಕ್ರಮಣದಾರರ ಮೇಲ್ಮನವಿಗೆ ಸಂಬಂಧಿಸಿ ವಾದವನ್ನು ಮಂಡಿಸಲು ಅವಕಾಶ ನೀಡದೇ, ಮೇಲ್ಮನವಿಯನ್ನು ಜಿಲ್ಲಾ ಸಮಿತಿಯು ಏಕಾಏಕಿಯಾಗಿ ಸುಮಾರು 3690 ಅಜರ್ಿಗಳನ್ನು ತಿರಸ್ಕರಿಸಿರುವ ಕ್ರಮವನ್ನು ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆಯು ಬಲವಾಗಿ ಖಂಡಿಸಿದ್ದಲ್ಲದೇ, ಸದ್ರಿ ಕಾನೂನು ಬಾಹೀರ ಕ್ರಮದಿಂದ ಅರಣ್ಯ ಅತಿಕ್ರಮಣದಾರರಿಗಾಗುವ ಅನ್ಯಾಯದ ವಿರುದ್ಧ ಉಚ್ಛ ನ್ಯಾಯಾಲಯಕ್ಕೆ ಅಜರ್ಿ ದಾಖಲಿಸಲಾಗುವುದೆಂದು ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಜಿಲ್ಲಾದ್ಯಂತ ಉಪ-ವಿಭಾಗ ಮಟ್ಟದಲ್ಲಿ ಅರಣ್ಯ ಹಕ್ಕಿಗೆ ಸಂಬಂಧಿಸಿದ ಅಜರ್ಿಗಳು ತಿರಸ್ಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಅಜರ್ಿದಾರರು ಜಿಲ್ಲಾ ಸಮಿತಿಗೆ ಮೇಲ್ಮನವಿ ಸಲ್ಲಿಸಲಾಗಿದ್ದು, ಸದ್ರಿ ಮೇಲ್ಮನವಿಯನ್ನು ಕಾನೂನಿಗೆ ವ್ಯತಿರಿಕ್ತವಾಗಿ ಹಾಗೂ ಬೇಕಾಯ್ದೆಶೀರ ಆಗಿ ಅಜರ್ಿ ತಿರಸ್ಕರಿಸಿರುವುದರಿಂದ ಅರಣ್ಯ ಹಕ್ಕಿನ ಮೇಲೆ ಅವಲಂಬಿತರಾಗಿರುವ ಅತಿಕ್ರಮಣದಾರರಿಗೆ ಅರಣ್ಯ ಹಕ್ಕು ಪಡೆಯಲು ಅನ್ಯಾಯವಾಗಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲಾ ಮಟ್ಟದ ಸಮಿತಿಯು ವಿಚಾರಣೆಗಾಗಿ ನಿದರ್ಿಷ್ಟ ದಿನಾಂಕವನ್ನು ನಿಗದಿಗೊಳಿಸತಕ್ಕದ್ದು ಮತ್ತು ವಿಚಾರಣೆಗಾಗಿ ನಿಗದಿಗೊಳಿಸಿದ ದಿನಾಂಕಕ್ಕಿಂತ ಕನಿಷ್ಠ 15 ದಿನಗಳ ಮುಂಚೆ ಮೇಲ್ಮನವಿದಾರನಿಗೆ ಮತ್ತು ಸಂಬಂಧಪಟ್ಟ ಉಪ ವಿಭಾಗೀಯ ಸಮಿತಿಗೆ ಲಿಖಿತವಾಗಿ ಹಾಗೂ ಗ್ರಾಮದಲ್ಲಿ ಅನುಕೂಲಕರವಾದ ಸಾರ್ವಜನಿಕ ಸ್ಥಳದಲ್ಲಿ ನೋಟೀಸು ಅಂಟಿಸುವ ಮೂಲಕ ತಿಳಿಸತಕ್ಕದ್ದು.
ಅಲ್ಲದೇ ಮೇಲ್ಮನವಿದಾರರ ಅಜರ್ಿಯನ್ನು ಆತನ ಕ್ಲೇಮಿನ ಸಮರ್ಥನೆಗಾಗಿ ಸೂಕ್ತ ಅವಕಾಶ ನೀಡದ ಹೊರತು ಅಜರ್ಿಯನ್ನು ವಿಲೆ ಮಾಡತಕ್ಕದ್ದಲ್ಲ ಎಂಬ ಸ್ಪಷ್ಟವಾದ ಅಂಶ ಕಾನೂನಿನಲ್ಲಿ ಉಲ್ಲೇಖವಿದ್ದಾಗ್ಯೂ ಜಿಲ್ಲಾ ಸಮಿತಿಯು ಅತಿಕ್ರಮಣದಾರರಿಗೆ ಮೇಲ್ಮನವಿ ವಿಚಾರಣೆಯ ನೋಟೀಸು ಜಾರಿ ಮಾಡದೇ, ನೇರವಾಗಿ ವಾದ ಮಂಡಿಸಲು ಅವಕಾಶ ಕಲ್ಪಿಸದೇ ತಿರಸ್ಕರಿಸಿರುವ ಕ್ರಮ ಕಾನೂನಿಗೆ ವ್ಯತಿರಿಕ್ತವಾಗಿದೆ ಎಂದು ಹೇಳಿದ್ದಾರೆ.
ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿಗಳಲ್ಲಿ ತಿರಸ್ಕರಿಸಲ್ಪಟ್ಟ ಮೇಲ್ಮನವಿಗಳಲ್ಲಿ ಕುಮಟಾ 877, ಜೋಯಿಡಾ 530, ಭಟ್ಕಳ 493, ಮುಂಡಗೋಡ 404, ಹೊನ್ನಾವರ 398, ಶಿರಸಿ 322, ಹಳಿಯಾಳ 196, ಸಿದ್ದಾಪುರ 195, ಕಾರವಾರ 167, ಯಲ್ಲಾಪುರ 61, ಅಂಕೋಲಾ 47 ಇದ್ದು ಜಿಲ್ಲಾದ್ಯಂತ ಜಿಲ್ಲಾ ಅರಣ್ಯ ಹಕ್ಕು ಸಮಿತಿಯಿಂದ ಮೇಲ್ಮನವಿಗೆ ಸಂಬಂಧಿಸಿ ತಿರಸ್ಕರಿಸಲ್ಪಟ್ಟ ಒಟ್ಟೂ ಮೇಲ್ಮನವಿ 3690 ಆಗಿರುತ್ತದೆ.
ತಿರಸ್ಕರಿಸಲ್ಪಟ್ಟ ಆದೇಶ ತಲುಪಿಲ್ಲ:
ವಿವಿಧ ದಿನಾಂಕದಂದು ಜಿಲ್ಲಾ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ಮೇಲ್ಮನವಿ ಅಜರ್ಿಗಳು ತಿರಸ್ಕರಿಸಲ್ಪಟ್ಟಿದ್ದು 9 ತಿಂಗಳಾದರೂ ಮೇಲ್ಮನವಿದಾರನಿಗೆ ತಿರಸ್ಕೃತ ಮಾಹಿತಿಯಾಗಲೀ, ಆದೇಶದ ಪ್ರತಿಯಾಗಲೀ ತಲುಪಿದ್ದು ಇರುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯ ಸಮಿತಿಗೆ ದೂರು:
ಅರಣ್ಯ ಹಕ್ಕು ಮಾನ್ಯ ಮಾಡುವ ಮತ್ತು ನಿಹಿತಗೊಳಿಸುವ ಪ್ರಕ್ರಿಯೆಯನ್ನು ಉಸ್ತುವಾರಿ ನೋಡಿಕೊಳ್ಳುವ ರಾಜ್ಯ ಮಟ್ಟದ ಉಸ್ತುವಾರಿ ಅರಣ್ಯಹಕ್ಕು ಸಮಿತಿಗೆ ಜಿಲ್ಲಾ ಅರಣ್ಯ ಹಕ್ಕು ಸಮಿತಿಯು ಕಾನೂನುಬಾಹೀರ ಮತ್ತು ವ್ಯತಿರಿಕ್ತವಾಗಿ ಅಜರ್ಿಗಳನ್ನು ತಿರಸ್ಕರಿಸಿರುವುದಕ್ಕೆ ದೂರನ್ನು ದಾಖಲಿಸುವ ಜೊತೆಯಲ್ಲಿ, ತಿರಸ್ಕರಿಸಲ್ಪಟ್ಟ ಮೇಲ್ಮನವಿಯ ಪುನರ್ ಪರಿಶೀಲನೆಗೆ ಸೂಕ್ತ ಸೂಚನೆ ಜಿಲ್ಲಾ ಸಮಿತಿಗೆ ನೀಡುವಂತೆ ಕೋರಲಾಗುವುದೆಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ.