ಪತ್ರಿಕಾರಂಗದ ದುರುಪಯೋಗ ತಡೆಯಲು ರಾಜ್ಯಪಾಲರಿಗೆ ಮನವಿ

ಲೋಕದರ್ಶನ ವರದಿ

ರಾಮದುರ್ಗ 19: ಕೆಲವರು ಪ್ರೆಸ್ ಎಂಬ ನಾಮಫಲಕ ಹಾಕಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅನಧಿಕೃತವಾಗಿರುವರ ಮೇಲೆ ಕಾನೂನು ಕ್ರಮ ತೆಗೆದುಕೊಂಡು ನೈಜ ಪತ್ರಕರ್ತರಿಗೆ ಸೂಕ್ತ ಬಧ್ರತೆ ಒದಗಿಸಬೇಕೆಂದು ಆಗ್ರಹಿಸಿ ರಾಮದುರ್ಗ ಪತ್ರಕರ್ತರು ಬುಧವಾರ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ರಾಮದುರ್ಗ ತಾಲೂಕಿನಾದ್ಯಂತ ಪ್ರೆಸ್ ಎಂಬ ನಾಮಫಲಕ ವಾಹನಕ್ಕೆ ಹಾಕಿ ದುರುಪಯೋಗಪಡಿಸಿಕೊಂಡು ಸರಕಾರಿ ಅಧಿಕಾರಿಗಳಿಗೆ ತಪ್ಪುದಾರಿಗೆ ಎಳೆಯಲು ಈ ವಾಹನಗಳನ್ನು ಬಳಕೆ ಮಾಡುತ್ತಿರುತ್ತಾರೆಂಬುದು ಕಂಡು ಬರುತ್ತಿದೆ. ಆದಕಾರಣ ಅಂತಹ ವಾಹನಗಳನ್ನು ಪರಿಶೀಲಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಬೇಕು.

ಬೇರೆಯಾವುದೋ ಒಂದು ಸಂಘಟನೆಯವರು ಪತ್ರಕರ್ತರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಪತ್ರಿಕಾ ಸ್ವಾತಂತ್ರಕ್ಕೆ ಚ್ಯುತಿ ಉಂಟು ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಬೆಳಗಾವಿ ರವರಿಗೆ ಪತ್ರಕರ್ತರ ಮೇಲೆ ಕ್ರಮ ಕೈಕೊಳ್ಳಬೇಕೆಂದು ಪತ್ರ ಬರೆದ ರಾಮದುರ್ಗದ ಸಾರ್ವಜನಿಕ ಹಿತರಕ್ಷಣಾ ಸಮೀತಿ ಜುನಿಪೇಠ ಅವರು ಅಜರ್ಿ ಸಲ್ಲಿಸಿದ್ದು, ರಾಜ್ಯಾದ್ಯಂತ ಪತ್ರಕರ್ತರನ್ನು ಕಡೆಗಣಿಸಿ ಪತ್ರಿಕಾ ಸ್ವಾತಂತ್ರ್ಯಕ್ಕೆ ದಕ್ಕೆ ತರುವಂತಹ ಕೆಲಸ ಮಾಡುತ್ತಿರುವ ರಾಮದುರ್ಗದ ಸಾರ್ವಜನಿಕ ಹಿತರಕ್ಷಣಾ ಸಮೀತಿ ಜುನಿಪೇಠ ಸಂಘಟನೆಯು ನೊಂದಾವಣೆಯಾಗಿದೆಯೋ? ಇಲ್ಲವೋ?ಅಥವಾ ನಕಲಿಯೋ ಎಂದು ತನಿಖೆಕೈಗೊಂಡು ನಕಲಿಯಾಗಿದ್ದಲ್ಲಿ ಅಜರ್ಿ ಸಲ್ಲಿಸಿದವರನ್ನು ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು.

ಬೆಳಗಾವಿ ಜಿಲ್ಲೆಯ ಖಾಸಗಿ ಚಾನಲ್ ವರದಿಗಾರನ ಮೇಲೆ ವ್ಯಕ್ತಿಯೋಬ್ಬ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕಿತ್ತೂರು ತಾಲೂಕಿನ ವೀರಾಪೂರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ವರದಿಗಾರ ಬಸವರಾಜ ಪಾಟೀಲ ಗಂಭೀರಗಾಯಗೊಂಡಿದ್ದು, ಅಪರಾಧ ವೆಸಗಿದ ವ್ಯಕ್ತಿಗಳನ್ನು ಕೂಡಲೆ ಬಂಧಿಸಿ ಪತ್ರಕರ್ತರಿಗಾಗುವ ಅನ್ಯಾಯವನು ಸರಿಪಡಿಸಿ ನ್ಯಾಯ ದೊರಕಿಸಿಕೊಡಬೇಕು.

ಪದೇ ಪದೇ ಪತ್ರಕರ್ತರ ಮೇಲೆ  ಹಲ್ಲೆ ಮಾಡುತ್ತಿರುವ ಘಟನೆಗಳು ನಡೆಯುತ್ತಿದ್ದು, ಪತ್ರಕರ್ತರಿಗೆ ಅನ್ಯಾಯವಾಗದಂತೆ ಮಾನ್ಯರಾಜ್ಯ ಸಕರ್ಾರಆದೇಶ ಹೊರಡಿಸಿ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವ ಕಾನೂನು ಜಾರಿಗೊಳಿಸಿ, ಪತ್ರಕರ್ತರ ಹಿತಕಾಪಾಡಲು ಮುಂದಾಗಬೇಕೆಂದು ಅವರು ಮನವಿ ಮೂಲಕ ಸರಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಎಂ. ಬಿ. ಗೊಂದಿ, ಆಯ್.ಬಿ. ಬುಡ್ಡಾಗೋಳ, ಚೆನ್ನಪ್ಪ ಮಾದರ , ವಾಯ್. ಹೆಚ್. ಮುನವಳ್ಳಿ, ಜಿ.ಬಿ. ಪಾಟೀಲ, ಎಸ್.ಆರ್.ಗುರಬಸನ್ನವರ, ಆರ್.ಎಲ್. ಕುಳ್ಳೂರ, ಕೆ.ಬಿ. ಕಮ್ಮಾರ, ಎಸ್. ಆರ್. ಮೋಹಿತೆವಿಜಯ ನಾಯಕ ಎಸ್.ಎ ಘೋಡಕೆ, ಗೋಪಾಲ ಮಾದರ, ಅಶೋಕ ಮಾದರ, ಶಿವಲಿಂಗಯ್ಯ ಹಿರೇಮಠ, ಸುರೇಶ ಗಿಂಜಾಳೆ ಸೇರಿದಂತೆ ಇತರರಿದ್ದರು.