ಲೋಕದರ್ಶನ ವರದಿ
ಬೈಲಹೊಂಗಲ 14: ವಿವಿಧ ಬೇಡಿಕೆಗಳನ್ನು ಇಡೇರಿಸಲು ಆಗ್ರಹಿಸಿ ಕನರ್ಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ತಹಶೀಲ್ದಾರರಿಗೆ ಸೋಮವಾರ ಮನವಿ ಸಲ್ಲಿಸಿದರು.
ಲಾಕ್ಡೌನ್ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳನ್ನು ಹಂಚುವ ಸಂದರ್ಬದಲ್ಲಿ ಕಾರ್ಯಕತರ್ೆಯರ ಮೇಲೆ ಹಲ್ಲೆಗಳಾಗಿವೆ. ಅಂಗನವಾಡಿ ಕೇಂದ್ರಗಳಿಗೆ ಮತ್ತು ಅಂಗನವಾಡಿ ನೌಕರರಿಗೆ ಕರೋನಾ ಸಂರಕ್ಷಣೆಯನ್ನು ಒದಗಿಸಿ ಒಳ್ಳೆಯ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ, ಕಿಟ್ಗಳನ್ನು ಒದಗಿಸಬೇಕು. ಮಕ್ಕಳ ತಪಾಸನೆ ಮತ್ತು ತೂಕ ಮಾಡುವಾಗ ಅಂಗನವಾಡಿ ಕೇಂದ್ರಗಳನ್ನು ,ತೂಕದ ಯಂತ್ರಗಳನ್ನು ಸ್ಯಾನಿಟೈಸ್ ಮಾಡಿಸಬೇಕು. ಕರೋನಾ ಸಂದರ್ಭದಲ್ಲಿ ಕಾರ್ಯಕತರ್ೆಯರಿಗೆ 25 ಸಾವಿರ ರೂ. ಪ್ರೋತ್ಸಾಹಧನ, ಸ್ಥಳೀಯ ಬಸ್ ಪಾಸ್ ಊಟದ ವೆಚ್ಚ ಭರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಅಧ್ಯಕ್ಷೆ ವಿದ್ಯಾ ಕಮ್ಮಾರ, ಕಾರ್ಯದಶರ್ಿ ವಿಜಯಾ ಕಲಾದಗಿ, ಚನ್ನಮ್ಮ ಮತ್ತಿಕೊಪ್ಪ, ವಿದ್ಯಾ ಹಿರೇಮಠ, ಸುನೀತಾ ಅಂಟೀನ, ಮಲ್ಲಮ್ಮ ಮಠಪತಿ, ವಿಜಯಲಕ್ಷ್ಮೀ ದಾಬಿಮಠ, ,ಮೀನಾಕ್ಷಿ ರಜಪೂತ, ನೀಲಮ್ಮ ಮೆಳವಂಕಿ, ಇನ್ನಿತರರು ಇದ್ದರು.