ಗೋಕಾಕ: ನಗರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಸ್ಕ್ಯಾನಿಂಗ ವ್ಯವಸ್ಥೆ ಇಲ್ಲದೆ ಬಡ ರೋಗಿಗಳು ಪರದಾಡುವ ಸನ್ನಿವೇಶ ಉಂಟಾಗಿದ್ದು ಬೆಳಗಾವಿ ಸಿವಿಲ್ ಹಾಗೂ ಗೋಕಾಕ ನಗರದ ಖಾಸಗಿ ಸ್ಕ್ಯಾನಿಂಗ ಸೆಂಟರ್ ಗಳಿಗೆ ಶಿಫಾರಸ್ಸು ಮಾಡುತ್ತಿರುವುದು ಖಂಡನೀಯ ತಕ್ಷಣವೇ ಕ್ರಮ ಕೈಗೊಂಡು ಗಂಭೀರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಜೈ ಭಾರತ ಯುವಸೇನೆ ರಾಜ್ಯ ಉಪಾಧ್ಯಕ್ಷರಾದ ಶಿವಾನಂದ ಹಿರೇಮಠ ವೈದ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹಾದೇವ ಕೊಳಕಿ, ಶಶಿಕಲಾ ಹಿರೇಮಠ, ಶಾರಧಾ ಹಿರೇಮಠ, ಶಿವಾನಂದ ಯದ್ದಲಗುಡ್ಡ, ಶಂಕರ ಹೊರಟ್ಟಿ, ಅಮಿತ ಪಾಟೀಲ, ರಾಜು ಹಂಚಿನಾಳ, ಗುರುರಾಜ ಜೊಳ್ಳಿ, ನಾಗರಾಜ ಗೋಜಗಿ ಹಾಗೂ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.