ಸಹಕಾರ ಕ್ಷೇತ್ರದ ಮೇಲೆ ವಿಧಿಸಿರುವ ಕಡಿತ ರದ್ದುಗೊಳಿಸುವಂತೆ ಸರಕಾರಕ್ಕೆ ಮನವಿ

ಲೋಕದರ್ಶನವರದಿ

ಹುನಗುಂದ: ದೇಶದ ಕೃಷಿಕ, ಮಧ್ಯಮ ವರ್ಗ ಹಾಗೂ ಕಡುಬಡವರ ಬದುಕಿಗೆ ಆದಾರ ಕೊಂಡಿಯಾಗಿ ಶತಮಾನದಿಂದಲೂ ಸೇವೆ ಸಲ್ಲಿಸುತ್ತಿರುವ ಅಂದಾಜು 52ಸಾವಿರಕ್ಕೂ ಹೆಚ್ಚು ಸಹಕಾರಿ ಸಂಸ್ಥೆಗಳಿಗೆ ಕೇಂದ್ರ ಸರಕಾರ ಆದಾಯ ತೆರಿಗೆ, ಟಿಡಿಎಸ್ ಮತ್ತು ಜಿಎಸ್ಟಿ ವಿಧಿಸಿರುವದನ್ನು ತಾಲೂಕಿನ ಸಹಕಾರಿ ಸಂಸ್ಥೆಗಳ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ಪ್ರತಿಭಟನೆ ನಡೆಸಿದರು.

   ಶುಕ್ರವಾರ ತಾಲೂಕಾ ತಹಶೀಲ್ದಾರ ಕಛೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಸವೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಹಿರಣ್ಣೆಪ್ಪ ಆಲೂರ ಮಾತನಾಡಿ ಕೇಂದ್ರ ಸರಕಾರ ಸಹಕಾರಿ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಜೊತೆಗೆ ಇತರೆ ಕಡಿತಗಳನ್ನು ಸಹಕಾರಿ ಸಂಘಗಳ ಮತ್ತು ಗ್ರಾಹಕರಿಗೆ ಅಭಿವೃದ್ಧಿ ಕುಂಠಿತವಾಗುತ್ತದೆ. ಈ ಹಿನ್ನೆಲೆಯಾಗಿ ಸಹಕಾರಿ ಕ್ಷೇತ್ರವನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಸಹಕಾರ ಕ್ಷೇತ್ರದ ಮೇಲೆ ವಿಧಿಸಿರುವ ಕಡಿತಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಅವರು ಮನವಿ ಮಾಡಿದರು.

  ನಿದರ್ೇಶಕ ಅರುಣ ದುದ್ಗಿ ಮಾತನಾಡಿ ಕೇಂದ್ರ ಕರಗಳನ್ನು ಹೇರುವದರಿಂದ ಉದ್ಯೋಗ ನೀಡುತ್ತಿರುವ ಸಹಕಾರ ಕ್ಷೇತ್ರದಲ್ಲಿರುವ ಕೋಟ್ಯಾಂತರ ಜನ ಸದಸ್ಯರಿಗೆ ಲಕ್ಷಾಂತರ ಉದ್ಯೋಗ ಅವಕಾಶ ತಪ್ಪಿದಂತಾಗುತ್ತದೆ. ಈಗಾಗಲೇ ವಿಧಿಸಿರುವ ಎಲ್ಲ ಕರಸೇವೆಗಳನ್ನು ರದ್ದುಪಡಿಸಬೇಕೆಂದು ಕೇಂದ್ರ ಸರಕಾರಕ್ಕೆ ಅವರು ಮನವಿ ಪತ್ರದ ಮೂಲಕ ಮನವಿ ಮಾಡಿಕೊಂಡರು. 

      ಪಟ್ಟಣದ ಬಸವ ಮಂಟಪದಿಂದ ಸಹಕಾರಿ ಸಂಘಗಳ ಪ್ರತಿಭಟನಾ ರ್ಯಾಲಿಯು ಚನ್ನಮ್ಮ ವೃತ್ತ, ವಿಜಯ ಮಹಾಂತೇಶ ವೃತ್ತ ಬಸ್ ನಿಲ್ದಾಣ ಮಾರ್ಗವಾಗಿ ತಾಲೂಕಾ ತಹಶೀಲ್ದಾರ ಕಚೇರಿ ತಲುಪಿ ತಹಶೀಲ್ದಾರ ಬಸವರಾಜ ನಾಗರಾಳ ಅವರಿಗೆ ಮನವಿ ಸಲ್ಲಿಸಿದರು. ವ್ಯವಸ್ಥಾಪಕ ಶರಣು ಚಳಗೇರಿ, ಭರಮಣ್ಣ ರಾಮವಾಡಗಿ, ನೀಲಪ್ಪ ಕುರಿ, ಮಲ್ಲು ಹುನಗುಂದ, ಪರಸಪ್ಪ ಬಾವಿಕಟ್ಟಿ, ರವಿಪ್ರಸಾದ ಹಾದಿಮನಿ, ನಿದರ್ೇಶಕರುಗಳಾದ ಜಕ್ಕಪ್ಪ ಹುನ್ನಳ್ಳಿ, ಬಸವರಾಜ ಹೊಸೂರ, ಮುತ್ತಣ್ಣ ಡಂಬಳ, ಚಂದ್ರು ತಳವಾರ, ಶಿವು ಬಾದವಾಡಗಿ, ಶಾಂತಪ್ಪ ಹೊಸಮನಿ, ಶರಣು ಪಾಟೀಲ, ಮಹಾಂತೇಶ ಶಿವಪ್ಪಯ್ಯನಮಠ, ಬಸವರಾಜ ಕೆಂದೂರ, ಮಹಾಂತೇಶ ರೇವಡಿ, ಮಲ್ಲಿಕಾಜರ್ಿನ ದರಗಾದ, ಶಾಂತಯ್ಯ ಮಠ, ಶಿವಪುತ್ರಪ್ಪ ಹಳಪೇಟಿ, ಬಸವರಾಜ ಬಂಡಿವಡ್ಡರ, ಸಂಗು ಹುನ್ನಳ್ಳಿ, ಮಹಾಂತೇಶ ಹಳ್ಳೂರ, ಮಹಾಂತೇಶ ಮದರಿ, ರಮೇಶ ತಾರಿವಾಳ, ಸಂಗಪ್ಪ ಬಸರಿಗಿಡದ, ವೀರಭದ್ರಯ್ಯ ಗಣಾಚಾರಿ, ರಾಣಿ ತೋಪಲಕಟ್ಟಿ, ಸುನಿತಾ ತಾರಿವಾಳ, ಮುತ್ತಕ್ಕ ಬಾವಿಕಟ್ಟಿ ಸೇರಿದಂತೆ ಎಲ್ಲ ಸಹಕಾರಿ ಸಂಘಗಳ ಸಿಬ್ಬಂದಿ ಆಡಳಿತ ಮಂಡಳಿ ಸದಸ್ಯರು ಇದ್ದರು.