ಪ್ರತಿ ರ್ಷ ಸೆಪ್ಟೆಂಬರ್ 17 ರಂದು ನಡೆಯುವ ಕಲ್ಯಾಣ ಉತ್ಸವ ಕುರಿತು ಜಿಲ್ಲಾದಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ
Appeal to the government through the district administration regarding the Kalyana Utsav held on Sep
ಪ್ರತಿ ರ್ಷ ಸೆಪ್ಟೆಂಬರ್ 17 ರಂದು ನಡೆಯುವ ಕಲ್ಯಾಣ ಉತ್ಸವ ಕುರಿತು ಜಿಲ್ಲಾದಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ
ಕೊಪ್ಪಳ 12: ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿ ರ್ಷ ಸೆಪ್ಟೆಂಬರ್ 17 ರಂದು ನಡೆಯುವ ಕಲ್ಯಾಣ ರ್ನಾಟಕ ಉತ್ಸವದಲ್ಲಿ ಈ ಭಾರಿ ಕೊಪ್ಪಳಕ್ಕೆ ಆಗಮಿಸುವಂತೆ ಆಗ್ರಹಿಸಿ ಕಲ್ಯಾಣ ರ್ನಾಟಕ ಹೋರಾಟ ಸಮಿತಿ ಯುವ ಘಟಕ ಆಗ್ರಹಿಸಿದೆ. ಈ ಕುರಿತು ಜಿಲ್ಲಾದಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಅವರು ಪ್ರತಿ ರ್ಷ ಸರದಿಯ ಆಧಾರದ ಮೇಲೆ ಎಲ್ಲಾ ಜಿಲ್ಲೆಗಳಲ್ಲಿಯೂ ತಾವು ಭಾಗವಹಿಸುವಂತೆ ಒತ್ತಾಯಿಸಿದ್ದಾರೆ. ಮನವಿಯಲ್ಲಿ ದೇಶಕ್ಕೆ ಲಭಿಸಿರುವದು 1947ರ ಆಗಷ್ಟ್, 15 ರಂದು ಆದರೆ ಅಂದಿನ ಹೈದ್ರಾಬಾದ ಸಂಸ್ಥಾನವು ಭಾರತ ಒಕ್ಕೂಟದಲ್ಲಿ ಸೇರದೇ ಇರುವದರಿಂದ, ಪೋಲಿಸ್ ಆಕ್ಷನ್ ಮೂಲಕ ಸೆಪ್ಟೆಂಬರ್ 17, 1948ರಂದು ಈ ಪ್ರದೇಶವು ಭಾರತ ಒಕ್ಕೂಟದಲ್ಲಿ ವೀಲೀನಗೊಳಿಸಲಾಯಿತು, ಈ ದಿನವನ್ನು 1998ರಿಂದ ಪ್ರತಿ ರ್ಷ ಹೈದ್ರಾಬಾದ ರ್ನಾಟಕ ವಿಮೋಚನಾ ದಿನವನ್ನಾಗಿ ಆಚರಿಸಲಾಗುತ್ತಿತ್ತು, ಕಳೆದ ಅವಧಿಯ ಬಿಜೆಪಿ ಸರಕಾರ ಇದನ್ನು ಕಲ್ಯಾಣ ರ್ನಾಟಕ ಉತ್ಸವವೆಂದು ಘೋಷಿಸಿದೆ. 1998ರಿಂದಲೂ ರಾಜ್ಯದ ಮುಖ್ಯಮಂತ್ರಿಗಳು ಈ ಉತ್ಸವದಲ್ಲಿ ಭಾಗವಹಿಸುತ್ತ ಬಂದಿರುತ್ತಾರೆ, ತಮಗೆ ತಿಳಿದಿರುವಂತೆ ಅಂದಿನ ಹೈದ್ರಾಬಾದ ಸಂಸ್ಥಾನದ ಭಾಗಗಳಾದ ಬೀದರ, ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳು ರಾಜ್ಯಗಳ ಪುರ್ವಿಂಗಡಣೆಯ ಸಂರ್ಭದಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಸೇರಿದವು, ಆದ್ದರಿಂದ, ಈ ಕಲ್ಯಾಣ ರ್ನಾಟಕ ಉತ್ಸವ ಅವಿಭಜಿತ ಕಲಬುರಗಿ, ರಾಯಚೂರು ಮತ್ತು ಬೀದರ ಜಿಲ್ಲೆಗಳಲ್ಲಿ ನಡೆಯುತ್ತಿದೆ, ಈಗ ಅವು ಕೊಪ್ಪಳ ಮತ್ತು ಯಾದಗಿರಿ ಸೇರಿ ಐದು ಜಿಲ್ಲೆಗಳಾಗಿವೆ. ಆದರೆ, ದುರಾದೃಷ್ಟವಷಾತ್ ರಾಜ್ಯದ ಮುಖ್ಯಮಂತ್ರಿಗಳು ಪ್ರತಿ ರ್ಷ ಕಲಬುರಗಿ ಜಿಲ್ಲೆಯಲ್ಲಿ ನಡೆಯುವ ಕಲ್ಯಾಣ ರ್ನಾಟಕ ಉತ್ಸವದ ಧ್ವಜಾರೋಹಣ ಕರ್ಯಕ್ರಮದಲ್ಲಿ ಭಾಗವಹಿಸುತ್ತ ಬಂದಿರುತ್ತಾರೆ, ಇದು ಕಲ್ಯಾಣ ರ್ನಾಟಕದ ಇತರೆ ಜಿಲ್ಲೆಗಳಿಗೆ ತಾರತಮ್ಯದ ಅನುಭವವಾಗುತ್ತಿದೆ, ಅಲ್ಲದೇ ಕಲಬುರಗಿ ಜಿಲ್ಲೆಗೆ ಮಾತ್ರ ಮಹತ್ವ ನೀಡಲಾಗುತ್ತಿದೆ ಎನ್ನುವ ಭಾವನೆ ಇತರೆ ಜಿಲ್ಲೆಗಳ ಜನರಿಗೆ ಆಗುತ್ತಿರುವದು ತಮ್ಮ ಗಮನಕ್ಕೂ ಬಂದಿರಬಹುದು. ಹೈದ್ರಾಬಾದ ಸಂಸ್ಥಾನವನ್ನು ಭಾರತ ಒಕ್ಕೂಟದಲ್ಲಿ ವೀಲೀನಗೊಳಿಸುವಂತೆ ಹೋರಾಟ ಮಾಡಿದವರು ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಲ್ಲೂ ಸಾಕಷ್ಟು ಜನ ಇದ್ದು, ಅವರನ್ನು ಯಾರೂ ಸ್ಮರಿಸದೇ ಇರುವದು ದುರಾದೃಷ್ಟಕರ.ಆದ್ದರಿಂದ, ರಾಜ್ಯದ ಮುಖ್ಯಮಂತ್ರಿಯಾಗಿ ತಾವು ಈ ಭಾಗದ ಎರಡನೆಯ ದಿನಾಚರಣೆಯೆಂದು ಆಚರಿಸುವ ಸೆಪ್ಟೆಂಬರ್ 17ರ ಈ ಸಂರ್ಭದಲ್ಲಿ ಕಲ್ಯಾಣ ರ್ನಾಟಕ ಭಾಗದ ಇತರೆ ಜಿಲ್ಲೆಗಳಲ್ಲಿಯೂ ಭಾಗವಹಿಸುವದರ ಮೂಲಕ ಸಮಾನತೆಯ ಪ್ರತಿಪಾದನೆಗೆ ಮುನ್ನಡಿಯಿಡಬೇಕು, ಈ ರ್ಷ ಸೆಪ್ಟೆಂಬರ್ 17ರ ನಡೆಯುವ ಕಲ್ಯಾಣ ರ್ನಾಟಕ ಉತ್ಸವದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ತಾವು ಭಾಗವಹಿಸಬೇಕೆಂದು ಹಾಗೂ ಮುಂದಿನ ರ್ಷದಿಂದ ರಾಯಚೂರ, ಯಾದಗಿರಿ, ಬೀದರ ಜಿಲ್ಲೆಗಳಲ್ಲಿ ಸರದಿಯ ಆಧಾರದ ಮೇಲೆ ಭಾಗವಹಿಸಬೇಕೆಂದು ಒತ್ತಾಯಿಸಿದ್ದಾರೆ. ಈ ಸಂರ್ಭದಲ್ಲಿ ಜಿಲ್ಲಾಧ್ಯಕ್ಷ ರಮೇಶ ತುಪ್ಪದ್ , ಸಂತೊಷ ದೇಶಪಾಂಡೆ, ಶಿವಕುಮಾರ ಕುಕನೂರ, ಮಂಜುನಾಥ ಅಂಗಡಿ, ಶಿವಕುಮಾರ ಕುಕನೂರ, ಹುಲಗಪ್ಪ ಕಟ್ಟಿಮನಿ,ನೀತೀಶ ಪುಲಸ್ಕರ್, ಸೋಮನಗೌಡ ಹೊಗರನಾಳ,ವಿನೋದ ಡೊಳ್ಳಿನ್ ಇತರರು ಇದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 