ಹಾರೂಗೇರಿ: ಮಹಾನ್ ಚೇತನಗಳ ವೃತ್ತಗಳಿಗೆ ಕಂಚಿನ ಪ್ರತಿಮೆ ನಿರ್ಮಿಸುವುದಕ್ಕೆ ಮನವಿ

ಲೋಕದರ್ಶನ ವರದಿ

ಹಾರೂಗೇರಿ 26: ಹಾರೂಗೇರಿ ಪಟ್ಟಣದ ಕ್ರಾಸ್ದಲ್ಲಿ ಕಾಯಕಯೋಗಿ ಬಸವೇಶ್ವರ ವೃತ್ತ, ಹಾರೂಗೇರಿ ಪಟ್ಟಣದ ಬಸ್ಸ ನಿಲ್ದಾಣದ ಹತ್ತಿರ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ ವೃತ್ತ ಹಾಗೂ ಪಟ್ಟಣದ ಹೃದಯ ಭಾಗದಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ವೃತ್ತ ಇರುತ್ತವೆ. ಈ ಮೂವರು ಮಹಾನ್ ಪುರುಷರ ವೃತ್ತಗಳ ಪ್ರತಿಮೆಗಳಿಗೆ ಕಂಚಿನ ಪ್ರತಿಮೆ ಇಲ್ಲದಿರುವುದು ನಮ್ಮೆಲ್ಲರ ದುದರ್ೈವದ ಸಂಗತಿಯಾಗಿದೆ ಆದ್ದರಿಂದ  ಈಗಾಗಲೇ ಪುರಸಭೆಯಲ್ಲಿ ಈ ವಿಷಯದ ಕುರಿತು ಠರಾವು ಪಾಸು ಮಾಡಿದಂತೆ ಕಂಚಿನ ಪ್ರತಿಮೆಗಳನ್ನು ನಿಮರ್ಿಸಬೇಕು ಎಂದು ವಿಕ್ರಮ ಪತ್ತಾರ ಆಗ್ರಹಿಸಿದರು.

ಅವರು ಸ್ಥಳೀಯ ಹಾರೂಗೇರಿ ಪುರಸಭೆಯ ಆವರಣದಲ್ಲಿ ಎಸ್ ಎನ್ ದಾಶ್ಯಾಳ ಪುರಸಭೆ ಕಂದಾಯ ಅಧಿಕಾರಿಗಳಿಗೆ ಸಮಸ್ತ ಪಟ್ಟಣದ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಿ ಅವರು ಮಾತನಾಡಿದರು.

ಹಾರೂಗೇರಿಯು ಅತೀ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣ. ಶಿಕ್ಷಣ ಕ್ಷೇತ್ರದಲ್ಲಿ ಎರಡನೇ ಶಿಕ್ಷಣಕಾಶಿ ಎಂದು ಹೆಸರುವಾಸಿಯಾಗಿದೆ. ವ್ಯಾಪಾರ ವಹಿವಾಟಿನಲ್ಲಿ ಸುತ್ತಮುತ್ತಲಿನ ಗ್ರಾಮಗಳಿಗಿಂತ ಹಾರೂಗೇರಿ ಪಟ್ಟಣವು ಆಥರ್ಿಕವಾಗಿ ಹಾಗೂ ರಾಜಕೀಯವಾಗಿ ಬಹಳ ಮುಂಚೂಣಿಯಲ್ಲಿದೆ. ಧಾಮರ್ಿಕವಾಗಿ, ಸಂವಿಧಾನಾತ್ಮಕವಾಗಿ ಹಾಗೂ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಈ ಮೂವರು ಮಹಾನ್ ಚೇತನಗಳಿಗೆ ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಶೀಘ್ರದಲ್ಲಿ ಈ ವಿಷಯದ ಬಗ್ಗೆ ಪರಿಶೀಲಿಸಿ ಕಂಚಿನ ಪ್ರತಿಮೆಯನ್ನು ಆದಷ್ಟು ಬೇಗನೆ ನಿಮರ್ಿಸಿ ಗೌರವ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಅದೇ ಸಂದರ್ಭದಲ್ಲಿ ಆರ್ ಡಿ ಸನಗೊಂಡ ಹಿರಿಯ ಆರೋಗ್ಯ ನೀರಿಕ್ಷಕರು, ವಸಂತ ಅಲಖನೂರ, ರಾಜು ಕುರಿ, ಸಿದ್ದಪ್ಪ ಹಾಡಕಾರ, ವಿಠ್ಠಲ ಬಡಿಗೇರ, ಆನಂದ ಮೂಡಶಿ, ಬಸಪ್ಪ ಮೂಡಶಿ, ಕಮಲ ನಡೋಣ, ಬೈರಪ್ಪ ಕಾಂಬಳೆ, ಮಂಜು ಕಾಂಬಳೆ, ಶಿವಪ್ಪ ಸನದಿ, ರಾಮು ಕೆಳಗಡೆ, ಆಶೀಪ್ ಜಾರೆ, ಪ್ರವೀಣ ಹಳಬರ ಇನ್ನು ಮುಂತಾದವರು ಉಪಸ್ಥಿತರಿದ್ದರು.