ಲೋಕದರ್ಶನ ವರದಿ
ಗೋಕಾಕ 22: ನಗರದಲ್ಲಿ ಇತ್ತಿಚೆಗೆ ಸಂಭವಿಸಿದ ನೆರೆಹಾವಳಿಗೆ ತುತ್ತಾಗಿ ಹಾನಿ ಅನುಭವಿಸಿದ ವ್ಯಾಪಾರಸ್ಥರಿಗೆ ಸರಕಾರದಿಂದ ಸೂಕ್ತ ಪರಿಹಾರ ಧನವನ್ನು ನೀಡಲು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಗೋಕಾಕ ತಹಶೀಲ್ದಾರರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಈಗಾಗಲೇ ಸರಕಾರ ವ್ಯಾಪಾರಸ್ಥರಿಗೆ 25000 ರೂಪಾಯಿಗಳ ಪರಿಹಾರ ಧನವನ್ನು ಘೋಷಿಸಿದ್ದಾರೆ. ಆದರೆ ವಾಸ್ತವವಾಗಿ ಹಾನಿಗೆ ಒಳಗಾದ ವ್ಯಾಪಾರಸ್ಥರ ಬದುಕು ಶೋಚನೀಯವಾಗಿದೆ. ಬಹುತೇಕ ವ್ಯಾಪಾರಸ್ಥರು ವಾಣಿಜ್ಯ ಬ್ಯಾಂಕುಗಳು ಮತ್ತು ಖಾಸಗಿ ವ್ಯಕ್ತಿಗಳ ಕಡೆಗೆ ಲಕ್ಷಾಂತರ ರೂಪಾಯಿಗಳ ಸಾಲ ಮಾಡಿ ತಮ್ಮ ವ್ಯಾಪಾರವನ್ನು ನಡೆಸುತ್ತಿದ್ದು, ಈಗ ಅವರೆಲ್ಲರೂ ಈ ಸಾಲವನ್ನು ತೀರಿಸಲಾರದ ದುಸ್ಥಿತಿಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಹಾನಿಗೆ ಒಳಗಾದ ಪ್ರಮಾಣಕ್ಕೆ ಪೂರಕವಾದ ಹೆಚ್ಚುವರಿ ಧನಸಹಾಯ ಸರಕಾರದಿಂದ ನೀಡಿದಾಗ ಮಾತ್ರ ಅವರು ತಮ್ಮ ಉದ್ಯೋಗ ಮುಂದುವರಿಸಲು ಸಾಧ್ಯವಾಗುತ್ತದೆ.
ಈಗಾಗಲೇ ನಗರದ ಸೇವಾ ಸಂಸ್ಥೆಗಳು ಖುದ್ದಾಗಿ ಸಮೀಕ್ಷೆ ನಡೆಸಿ ವಾಸ್ತವ ವರದಿಯನ್ನು ಮನವಿಯ ಮುಖಾಂತರ ಇಂದು ಸಲ್ಲಿಸುತ್ತಿದ್ದು, ಸರಕಾರ ಕೂಡಲೇ ಇದಕ್ಕೆ ಪೂರಕವಾದ ಕ್ರಮ ಜರುಗಿಸಿ ಸೂಕ್ತ ಪರಿಹಾರ ಧನ ನೀಡಲು ಕ್ರಮಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದರು.
ಸೇವಾ ಸಂಸ್ಥೆಗಳು ಕೈಗೊಂಡ ಹಾನಿಗೊಳಗಾದ ವ್ಯಾಪಾರಸ್ಥರ ವಾಸ್ತವ ಸಮೀಕ್ಷೆಯ ನೇತೃತ್ವ ವಹಿಸಿದ ಜೆ.ಸಿ.ಆಯ್. ಸಂಸ್ಥೆಯ ರಾಷ್ಡ್ರೀಯ ಸಂಪರ್ಕ ಅಧಿಕಾರಿ ನ್ಯಾಯವಾದಿ ವಿಷ್ಣು ಲಾತೂರ ಮಾತನಾಡಿ ನಗರದಲ್ಲಿ ನೆರೆಯಿಂದ ಹಾನಿಗೊಳಗಾದ ವ್ಯಾಪಾರಸ್ಥರ ಸಂಪೂರ್ಣ ವಿವರಣೆಯನ್ನು ಖುದ್ದಾಗಿ ಪರಿಶೀಲಿಸಿ ಸಮೀಕ್ಷೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಒಟ್ಟು ಹಾನಿಗೊಳಗಾದ 410 ವ್ಯಾಪಾರಸ್ಥರ ಅಂಗಡಿಗಳಿಗೆ ಬೇಟಿಯಾಗಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಲಾಗಿದೆ. ಅವರು ಅನುಭವಿಸಿದ ಹಾನಿಯನ್ನು ಅಂದಾಜಿಸಲಾಗಿದೆ.
ಈಗ ಅದರ ಸಂಪೂರ್ಣ ವಿವರಣೆಯನ್ನು ಅವರ ವೈಯಕ್ತಿಕ ಅಜರ್ಿಯ ಜೊತೆಗೆ ಮುಖ್ಯಮಂತ್ರಿಗಳಿಗೆ ಮನವಿಯ ಮೂಲಕ ವಿವರಿಸಲಾಗಿದೆ. ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವ್ಯಾಪಾರಸ್ಥರ ಅಳಲನ್ನು ಕೂಡಲೇ ಪರಿಗಣಿಸಿ ಸಮಂಜಸ ಸೂಕ್ತ ಪರಿಹಾರ ಧನವನ್ನು ಸರಕಾರದಿಂದ ನೀಡಲು ಕ್ರಮಕೈಗೊಳ್ಳಬೇಕೆಂದು ಕೋರಿದರು. ಮನವಿ ಸ್ವೀಕರಿಸಿದ ಉಪ ತಹಶೀಲ್ದಾರ ಎಸ.ಕೆ. ಕುಲಕಣರ್ಿ ಈ ಕುರಿತು ಕೂಡಲೇ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿಗಳನ್ನು ವರದಿ ಸಹಿತ ಸಲ್ಲಿಸಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜೆ.ಸಿ.ಆಯ್. ಸಂಸ್ಥೆಯ ಅಧ್ಯಕ್ಷ ಮಹಾವೀರ ಖಾರೇಪಠಾಣ, ವಲಯ ನಿದರ್ೆಶಕ ಕೆಂಪಣ್ಣಾ ಚಿಂಚಲಿ, ಕಾರ್ಯದಶರ್ಿ ರಜನಿಕಾಂತ ಮಾಲೋದೆ, ಕನರ್ಾಟಕ ರಕ್ಷಣಾ ವೇದಿಕೆ, ಸ್ವಾಭಿಮಾನಿ ಬಣದ ಅಧ್ಯಕ್ಷ ಸಂತೋಷ ಖಂಡ್ರೆ, ವ್ಯಾಪಾರಸ್ಥರಾದ ರವಿ ಮಾಲದಿನ್ನಿ, ಸುಭಾಸ ಘಸ್ತಿ, ಅಶೋಕ ಕುರಬೇಟ, ವಿಜಯಕುಮಾರ ಖಾರೇಪಠಾಣ, ರಾಜಶೇಖರ ಕೊಕ್ಕರಿ, ಶೇಖರ ಉಳ್ಳಾಗಡ್ಡಿ, ಯುವ ಮುಖಂಡ ಸತೀಶ ಪೂಜಾರಿ, ಸುಭಾಸ ಕವಲಗಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.