ಉಚಿತ ಬಸ್ಪಾಸ್ ನೀಡುವಂತೆ ಆಗ್ರಹಿಸಿ ಎಬಿವಿಪಿಯಿಂದ ತಹಶೀಲ್ದಾರರಿಗೆ ಮನವಿ

ಲೋಕದರ್ಶನ ವರದಿ

ಶಿರಹಟ್ಟಿ 05: ಎಲ್ಲರಿಗು ಸಮ ಬಾಳು ಎಲ್ಲಿರಿಗು ಸಮ ಪಾಲು ಎಂದು ಹೇಳುವ ಸರಕಾರವೇ ಇಂದು ನಮ್ಮ ವಿದ್ಯಾಥರ್ಿಗಳಲ್ಲಿ ಬೇಧಭಾವ ಮಾಡುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಎ.ಬಿ.ವಿ.ಪಿ ರಾಜ್ಯ ಸಂಚಾಲಕರಾದ ವಿರೇಶ ಕುರವತ್ತಿ ಹೇಳಿದರು.

ಅವರು ವಿದ್ಯಾರ್ಥಿ ಗಳಿಗೆ ಉಚಿತ ಬಸ್ ಪಾಸ್ ನೀಡುವ ಕುರಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶೀಲ್ದಾರ ಕಚೇರಿಗೆ ತೆರಳಿ ಶಿರಸ್ತೇದಾರ ಜಿ.ಪಿ.ಪೂಜಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದರು. ರಾಜ್ಯ ಸರಕಾರ ಎಲ್ಲ ವಿದ್ಯಾಥರ್ಿಗಳನ್ನು ಒಂದೇ ರೀತಿಯಲ್ಲಿ ನೋಡುತ್ತಿಲ್ಲ ಎಲ್ಲ ವಿಷಯಗಳಲ್ಲಿಯೂ ತಾರತಮ್ಯ ಮಾಡುತ್ತಿದೆ. ಕಾಲೇಜ್ ಪ್ರಾರಂಭವಾಗಿ ತಿಂಗಳು ಕಳೆದರು ಈ ವರೆಗು ವಿದ್ಯಾಥರ್ಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿಲ್ಲ. ರಾಜ್ಯದ ಎಲ್ಲ ಜಾತಿ ಸಮುದಾಯದಲ್ಲು ಹಿಂದುಳಿದ ಹಾಗೂ ಬಡ ಪ್ರತಿಭಾವಂತ ವಿದ್ಯಾಥರ್ಿಗಳಿದ್ದಾರೆ. ಅವರೆಲ್ಲ ಇವರ ಮಲತಾಯಿ ಧೋರಣೆಯಿಂದ ಶಿಕ್ಷಣದಿಂದ ವಂಚಿತರಾಗುವ ಭಯದಲ್ಲಿದ್ದಾರೆ. ಕಾರಣ ಕೂಡಲೆ ಸರಕಾರ ವಿದ್ಯಾಥರ್ಿಗಳ ಕೂಗಿಗೆ ಸ್ಪಂದಿಸಿ ಅವಶ್ಯವಿರುವ ಪ್ರತಿಯೊಬ್ಬ ವಿದ್ಯಾಥರ್ಿಗಳಿಗೂ ಉಚಿತ ಬಸ್ ಪಾಸ್ ವಿತರಿಸಿ ಶಿಕ್ಷಣಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು. 

ಸಚಿನ ಜಡಿಯವರ, ಫಕ್ಕಿರೇಶ ವರವಿ, ಬಸವರಾಜ ಕುರಿ, ಅನೀಲ ಬಾರಕೇರ, ವಿನಾಯಕ ಕುರಿ, ಶಶಿಕುಮಾರ ಗಾಡಿ, ಮಂಜುನಾಥ ಹಾಲಪ್ಪನವರ, ಮಾದೇವಿ ಛಬ್ಬಿ, ಶೃತಿ ಗಡಗಿ, ಮೇಘಾ ಬೆಳವಣಗಿ, ಪೂಜಾ ಹವಳದ ಮಠ, ರತ್ನಾ ಚಳಗೇರ, ಸುಧಾ ಬಾರಕೇರ, ಲಕ್ಷ್ಮಿ ಗದಗಿನ ಮುಂತಾದ ವಿದ್ಯಾಥರ್ಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಪ್ರತಿಭಟನೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತ ಕ್ರಮವಾಗಿ ಪೊಲೀಸ ಸಿಬ್ಬಂದಿ ನಿಯೋಜಿಸಲಾಗಿತ್ತು.