ಲೋಕದರ್ಶನ ವರದಿ
ಕೊಪ್ಪಳ 27: ಜಿಲ್ಲೆಯಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯ, ಹೆಣ್ಣು ಮಕ್ಕಳ ಮೇಲಿನ ಬಲಾತ್ಕಾರ, ಹಿಂಸೆ ಮತ್ತು ಕೊಲೆಗಳ ಹಾಗೂ ಶಾಲಾ ಬಾಲಕಿಯರ ಹಿತರಕ್ಷಣೆ ಕುರಿತು ಹಾಗೂ ವಿವಿಧ ಇಲಾಖೆಗಳಲ್ಲಿನ ಮಹಿಳೆಯರ ಮೇಲಿನ ಕಿರುಕುಳ ತಪ್ಪಿಸಲು ಜಿಲ್ಲಾಡಳಿತ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಿಳಾಪರ ಸಂಘಟನೆಗಳ ಮುಖ್ಯಸ್ಥರು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ಗೆ ಮನವಿ ಸಲ್ಲಿಸಿದರು.
ದೇಶದಲ್ಲಿ ಸಂಸ್ಕೃತಿಯ ಹೆಸರಲ್ಲೂ ಸಹ ಹಿಂಸಾಚಾರವಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಪೋಷಕರು ನಿತ್ಯ ಆತಂಕಪಡುವ ಸಂದರ್ಭ ಬಂದಿದೆ, ಶಾಲಾ ಸುರಕ್ಷತೆ ಬಗ್ಗೆ ತೀವ್ರವಾದ ನಿಗಾ ಮತ್ತು ಕಾಲಕಾಲಕ್ಕೆ ಸಭೆ ಹಾಗೂ ಕ್ರಮ ತೆಗೆದುಕೊಳ್ಳಬೇಕು. ಪೋಲಿಸ್ ಠಾಣೆಯಲ್ಲಿಯೇ ಅನೇಕ ಪ್ರಕರಣಗಳನ್ನು ಇತ್ಯರ್ಥಪಡಿಸುವ ವ್ಯವಸ್ಥೆ ನಿಲ್ಲಬೇಕು, ಪೋಲಿಸ್ ಇಲಾಖೆ ತುರ್ತಾ ಗಿ ಸ್ಪಂದಿಸಿ ಮಹಿಳೆಯರು ಕೊಡುವ ಕೇಸ್ಗಳನ್ನು ದಾಖಲಿಸಿಕೊಳ್ಳಬೇಕು ಪ್ರಭಾವಕ್ಕೊಳಗಾಗಿ ಅವರನ್ನು ಸತಾಯಿಸಿ ಕೇಸ್ ವಾಪಸ್ ಪಡೆಯುವಂತೆ ಮಾಡುವದನ್ನು ನಿಲ್ಲಿಸಬೇಕು. 15 ನಿಮಿಷಕ್ಕೊಂದು ಮಹಿಳಾ ದೌರ್ಜನ್ಯ ಕೇಸ್ ದಾಖಲಾಗುತ್ತಿದ್ದು ಅದಕ್ಕೆ ಸರಿಯಾದ ಕ್ರಮ ಆಗದಿರುವ ಕಾರಣ ಅತ್ಯಾಚಾರಿಗಳನ್ನು ಶೂಟೌಟ್ ಮಾಡಿದರೆ ಜನರು ಖುಷಿ ಪಡುವ ಸಂದರ್ಭ ಬಂದಿದೆ, ಇದು ಮುಂದೆ ಹೇಗೆ ಬೇಕಾದರೂ ಆಗಬಹುದು ಪ್ರಮುಖ ವ್ಯಕ್ತಿಯನ್ನು ಉಳಿಸಲು ಪೋಲಿಸ್ ಬಳಕೆಯಾಗಿ ತಪ್ಪು ಮಾಡದವನಿಗೆ ಶಿಕ್ಷೆಯಾಗುವ ಆತಂಕವಿದೆ ಆದ್ದರಿಂದ ದೌರ್ಜನ್ಯಕ್ಕೆ ಸಾಂತ್ವನ ಮತ್ತು ತುತರ್ು ನ್ಯಾಯ ವ್ಯವಸ್ಥೆ ಇಂದಿನ ಬಹು ಅಗತ್ಯವಾದ ಕ್ರಮ.ಇನ್ನೂ ಜಿಲ್ಲೆಯಲ್ಲಿ ಪ್ರಮುಖವಾಗಿ ಮಹಿಳೆಯರು ಓಡಾಡುವ ಸ್ಥಳಗಳಲ್ಲಿ ಬೀದಿ ದೀಪ, ಪೋಲಿಸ್ ರಕ್ಷನೆ ಮತ್ತು ಮಹಿಳಾ ಪೋಲಿಸ್ ಠಾಣೆಯ ಬಲವರ್ಧನೆ ಆಗಬೇಕಿದೆ. ಸ್ವಯಂ ಸೇವಾ ಸಂಸ್ಥೆಗಳು ನಡೆಸುವ ಕೇಂದ್ರಗಳ ಪರಿಶೀಲನೆ ಮತ್ತು ಅವುಗಳ ಸರಿಯಾದ ನಿರ್ವಹಣೆಗೆ ಸರಿಯಾದ ಸಮಯಕ್ಕೆ ಹಣ ಬಿಡುಗಡೆ ವ್ಯವಸ್ಥೆ ಮಾಡುವದು ಸೇರಿದಂತೆ ಅನೇಕ ಉಪಕ್ರಮಗಳನ್ನು ಜಿಲ್ಲಾಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಸಾಧನಾ ಸಂಸ್ಥೆಯ ಡಾ. ಇಸಬೆಲ್ಲಾ ಝೇವಿಯರ್ ದಾಸ, ಸ್ವಾಭಿಮಾನಿ ಮಹಿಳಾ ಸಂಚಲನ ಸಂಸ್ಥೆಯ ಜ್ಯೋತಿ ಗೊಂಡಬಾಳ, ವಿಜಯಲಕ್ಷ್ಮೀ ಗುಳೇದ್ ಇತರರು ಇದ್ದರು.