ವಾರ್ಡನಲ್ಲಿಯ ಹಲವಾರು ಸಮಸ್ಯೆಗಳ ಕುರಿತು ಮುಖ್ಯಾಧಿಕಾರಿಗೆ ಮನವಿ

ಲೋಕದರ್ಶನವರದಿ

ಮಹಾಲಿಂಗಪೂರ :  ನಗರದ ವಾಡರ್ೊಂದರಲ್ಲಿಯ  ಅವ್ಯವಸ್ಥೆಯ ಕುರಿತು ಸುವರ್ಣ ಮಹಿಳಾ ಸಂಘದ ಸದಸ್ಯರು ಹಾಗೂ ಸ್ಥಳೀಯ ಮಹಿಳೆಯರು ಸೇರಿ ಪುರಸಭೆ ಮುಖ್ಯಾಧಿಕಾರಿಗೆ  ಮನವಿ ಸಲ್ಲಿಸಿದರು. 

            ನಗರದ 15 ನೆಯ ವಾರ್ಡ ಕಾವೇರಿ ಪ್ಲಾಟ ಜನನಿಬೀಡ ಪ್ರದೇಶವಾಗಿದೆ. ಬೀದಿ ದೀಪಗಳ ವ್ಯವಸ್ಥೆಯೂ ಸರಿಯಾಗಿಲ್ಲ  ರಾತ್ರಿ ಹೊತ್ತಲ್ಲಿ ಮಹಿಳೆಯರಿಗೆ, ವೃದ್ಧರಿಗೆ, ಚಿಕ್ಕಮಕ್ಕಳಿಗೆ ಬೆಳಕಿನ ಕೊರತೆಯಿಂದ ತಿರುಗಾಡಲು ತೊಂದರೆಯಾಗುತ್ತಿದೆ.ಕುಡಿಯುವ ನೀರಿಗಾಗಿ ತೊಂದರೆಯಾಗದಂತೆ ಬೋರವೆಲ್ಲ ವ್ಯವಸ್ಥೆಯನ್ನು  ಮಾಡಿ ಪರದಾಟ ತಪ್ಪಿಸಬೇಕಾಗಿದೆ. 

      ಈ ಭಾಗದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ  ನಾಗರೀಕರು ಬಯಲು ಸವಚ್ಛಕ್ಕೆ ಮೊರೆ ಹೋಗಬೇಕಾಗಿದೆ. 

     ಅಲ್ಲಲ್ಲಿ ಚರಂಡಿಯೊಳಗೆ ನೀರು ನಿಂತು ಹಾಗೂ ರಸ್ತೆ ತುಂಬ ಹರಿದು ಸೊಳ್ಳೆಗಳ ಕಾಟ ಮಿತಿ ಮೀರಿರುವುದರಿಂದ ಸಾಂಕ್ರಾಮಿಕ  ಹಾಗೂ ಡೆಂಗ್ಯುಯಂತ ರೋಗಗಳಿಗೆ ಜನತೆಗೆ  ತುತ್ತಾಗುವ ಭಯ  ಕಾಡುತ್ತಿದೆ.  

 ಈ ಎಲ್ಲ ಸಮಸ್ಯೆಗಳಿಗೆ ಪುರಸಭೆ ಬೇಗ ಸ್ಪಂದಿಸಿ ಆಗುತ್ತಿರುವ ತೊಂದರೆ ನಿವಾರಿಸಲು ಸಂಘದ ಅಧ್ಯಕ್ಷೆ ಸುವರ್ಣ ಆಸಂಗಿ ಸ್ಥಳೀಯ ಮಹಿಳೆಯರಾದ ಲೀಲಾ ಕಲಾಲ,ಅನಿತಾ ಮುಳ್ಳುರ, ಸೀಮಾ ಮೂಡಲಗಿ, ಸವಿತ ಮುಗರ್ೊಡ್ ಕೋರಿದ್ದಾರೆ.