ಮಹಾಲಿಂಗಪೂರ೨೬ : ಕೆಂಗೇರಿಮಡ್ಡಿ ಬಡಾವಣೆಯ 14ನೇ ವಾರ್ಡ್ನಲ್ಲಾಗುತ್ತಿರುವ ಸಮಸ್ಯೆಗಳ ಪರಿಹಾರಕ್ಕಾಗಿ ಮಹಿಳೆಯರು, ಪುರುಷರು ಸೇರಿ ಪುರಸಭಾ ಮುಖ್ಯಾಧಿಕಾರಿ ಎ.ಬಿ.ಕಲಾಲ್ ರಿಗೆ ಮನವಿ ಅರ್ಪಿಸಿದರು.
ತಿಂಗಳ ಹಿಂದೆ ಹೆಚ್ಚಿನ ವೋಲ್ಟೇಜ್ ವಿದ್ಯುತ್ ಪ್ರವಹಿಸಿ ಬಹುತೇಕ ದಾರಿ ದೀಪಗಳು ಸುಟ್ಟು ಹೋಗಿದ್ದವು.ಸಾರ್ವಜನಿಕರ ಹಲವಾರು ಬಾರಿ ಮನವಿಯ ಅನಂತರ ಪುರಸಭೆ ಕೆಲಸವನ್ನು ಪ್ರಾರಂಭಿಸಿ ಅರ್ಧಕ್ಕೆ ಮೊಟಕುಗಳಿಸಿತು.
ಇದರಿಂದ ವಾರ್ಡ್ನ ಪ್ರದೇಶ ತಿಂಗಳುಗಟ್ಟಲೆ ಕತ್ತಲಿನಲ್ಲಿಯೆ ಮುಳುಗಿ ಹೋಗುವಂತಾಯಿತು. ಅಧಿಕಾರಿಗೆ ತಿಳಿಸಿದರೆ ಸರಿಯಾಗಿ ಸ್ಪಂದಿಸುವ ಗೋಜಿಗೆ ಹೋಗಲಿಲ್ಲ. ವಯೋವೃದ್ದರಾದಿಯಾಗಿ ಎಲ್ಲ ನಾಗರೀಕರು ತೊಂದರೆ ಅನುಭವಿಸಿ ಕತ್ತಲಿನಲ್ಲಿಯೆ ಕಾಲ ಕಳೆಯುವಂತಾಗಿದೆ.ಎಂದು ಜನ ಆರೋಪಿಸುತ್ತಿದ್ದಾರೆ.
ಈ ಭಾಗದಲ್ಲಿ ಸುಸಜ್ಜಿತವಾದ ಕೊಳವೆಭಾವಿ ಇದ್ದರೂ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ.ಈಗೆ ನಾಲ್ಕು ತಿಂಗಳುಗಳಿಂದ ಈ ಸಮಸ್ಯೆ ಮುಂದುವರೆಯುತ್ತಾ ಬಂದಿದೆ.ಇದರಿಂದ ವಾಡರ್ಿನ ಜನತೆ ಅತ್ತ ಇತ್ತ ನೀರಿಗಾಗಿ ಅಲೆದು ಸುಸ್ತಾಗಿದ್ದಾರೆ.ಮಡ್ಡಿಯಲ್ಲಿ ಕೊಳಚೆ ನಿವಾಸಿಗಳಿಗೆ ಕಟ್ಟಲಾದ ಹೊಸ ಮನೆಗಳ ಜನರು ಒಂದು ಫಲರ್ಾಂಗ್ ದೂರನ್ನು ಕ್ರಮಿಸಿ ನೀರನ್ನು ಹೊತ್ತೊಯ್ಯುವ ಸಂಧರ್ಭ ಬಂದಿದೆ.ಇದರಿಂದ ಬಾನಂತಿಯರಿಗೆ, ವೃದ್ಧರಿಗೆ ತೊಂದರೆಯುಂಟಾಗಿದೆ.ಈ ಪ್ರದೇಶದಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರ ಕಂಡುಕ್ಕೊಳ್ಳಬೇಕು ಎನ್ನುತ್ತಿದ್ದಾರೆ ಜನ.
ಮನೆಗಳ ಮುಂದೆ ಎತ್ತರವಾಗಿ ಕಟ್ಟಲಾದ ಚರಂಡಿಯಿಂದ ಮಳೆ,ಹಾಗೂ ಕಶ್ಮಲ ನೀರು ಸಂಗ್ರಹವಾಗಿ ಕೆರೆಯಂತೆ ಕಾಣುತ್ತಿದೆ ಅಲ್ಲದೆ ಮನೆಯೊಳಗೂ ನೀರು ನುಗ್ಗಿ ಹಾನಿಯುಂಟು ಮಾಡುತ್ತಿದೆ. ಹುಳಗಳ ಕಾಟವೂ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ಭಯವುಂಟಾಗಿದೆ ಹಾಗೂ ಸುಗಮವಾಗಿ ಅಡ್ಡಾಡಲೂ ಆಗುತ್ತಿಲ್ಲ.
ಈ ಅವ್ಯವಸ್ಥೆಗಳನ್ನು ಶೀಘ್ರವಾಗಿ ಸರಿಪಡಿಸಿಕೊಡಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದೆಂದು ಶ್ರೀಶೈಲ ದೊಡಮನಿ,ಮಧು ಮಾವಿನಹಿಂಡಿ,ಯುನುಸ್ ಪಠಾಣ್, ನಾಗಪ್ಪ ಬಜಂತ್ರಿ,ಮಹಾಲಿಂಗ ಮಾವಿನಹಿಂಡಿ, ಚನ್ನಪ್ಪ ಮುಕ್ಕೇನ್ನವರ್, ಪ್ರಭು ಬಜಂತ್ರಿ, ಅಪ್ಪಾಲಾಲ್ ಆಸಂಗಿ, ಇಂದ್ರವ್ವ ಬಜಂತ್ರಿ, ಝಾತಿರಾ ಜಮಾದಾರ್,ಹುಮಾಯೂನ್ ಹುಬ್ಬಳ್ಳಿ, ಮಹಾಂತೇಶ್ ಬಜಂತ್ರಿ ಎಚ್ಚರಿಕೆ ನೀಡಿದರು.