ಕೊಪ್ಪಳ 09: ಬಲ್ದೋಟ್ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ ಕಂಪನಿಯ ಸ್ಥಾಪನೆಗೆ ಬೆಂಬಲ ನೀಡುವಂತೆ ದಲಿತ ಸಂಘಟನಾ ಸಮಿತಿ, ಭೀಮ ಘರ್ಜನೆ ವತಿಯಿಂದ ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಕುರಿತು ದಲಿತ ಸಂಘಟನಾ ಸಮಿತಿ, ಭೀಮ ಘರ್ಜನೆ ಸಂಘಟನೆ ಪತ್ರಿಕಾ ಪ್ರಕಟಣೆ ನೀಡಿದ್ದು, ಕೊಪ್ಪಳವು ಕಲ್ಯಾಣ ಕರ್ನಾಟಕದ ಒಂದು ಅವಿಭಾಜ್ಯ ಅಂಗವಾಗಿದೆ. ಈಗ ತಾನೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಒಂದು ಪ್ರದೇಶವು ಸಮಗ್ರ ಅಭಿವೃದ್ಧಿ ಹೊಂದಬೇಕಾದರೆ ವಾಣಿಜ್ಯ ವ್ಯವಹಾರಗಳು ವೃದ್ಧಿಯಾಗಬೇಕು, ಈ ನಿಟ್ಟಿನಲ್ಲಿ ಕಾರ್ಖಾನೆಗಳು ಅತಿ ಮುಖ್ಯ ಪಾತ್ರ ವಹಿಸುತ್ತವೆ. ಇದರಿಂದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಉದ್ಯೋಗವಕಾಶಗಳು ಹೆಚ್ಚುತ್ತವೆ. ಈಗಾಗಲೇ ಬಲ್ದೋಟ್ ಅಂಗ ಸಂಸ್ಥೆಯಾದ ಒಖಕಐ ಕಂಪನಿಯು ಅಗತ್ಯವಿರುವ ಉನ್ನತ ಮಟ್ಟದ ಮಾಲಿನ್ಯ ಯಂತ್ರೋಪಕರಣಗಳನ್ನು ಅಳವಡಿಸಿ ಪರಿಸರ ಮಾಲಿನ್ಯ ಕಡಿತಗೊಳಿಸುವಲ್ಲಿ ವಿಶೇಷವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಮತ್ತು ಗ್ರಾಮೀಣ ಭಾಗ ಅಭಿವೃದ್ಧಿಯಾಗಲು ಅಖಖ ಅನುದಾನದ ಅಡಿಯಲ್ಲಿ ಹೆಚ್ಚು ಹೆಚ್ಚು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.ಅಲ್ಲದೇ.. ಒಖಕಐ ಕಂಪನಿಯಿಂದ ಶುದ್ಧ ನೀರಿನ ಘಟಕ ಸ್ಥಾಪಿಸುವುದು,ಶಾಲಾ ಪೀಠೋಪಕರಣಗಳು ಹಾಗೂ ಸ್ಮಾರ್ಟ್ ಕ್ಲಾಸ್ ಗಳನ್ನು ಒದಗಿಸುವುದು, ಉಚಿತ ಹೊಲಿಗೆ ಯಂತ್ರ ತರಬೇತಿ, ಶೌಚಾಲಯ ವ್ಯವಸ್ಥೆ, ಜಾತ್ರೆಗಳಿಗೆ ಸಹಕಾರ, ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ,ಕೊಪ್ಪಳ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸಸಿ ನೆಡುವ ಕಾರ್ಯಕ್ರಮ,ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ, ಕೃತಕ ಕೈಕಾಲು ಜೋಡಣೆ ಸಲಕರಣೆ ಒದಗಿಸುವುದು ಸೇರಿದಂತೆ ಹತ್ತು ಹಲವು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.ಈಗಾಗಲೇ ಬಸ್ಸಾಪುರ್, ಹಾಲವರ್ತಿ ಹಾಗೂ ಕೊಪ್ಪಳ ರೈತರ ಜಮೀನುಗಳನ್ನು ಏಋಆಃ ಯು ಬಲ್ದೋಟ್ ಕಂಪನಿ ಗೆ ಹಸ್ತಾಂತರಸುತ್ತಾರೆ. ಸುಮಾರು 15 ವರ್ಷದಿಂದ ಜಮೀನು ಕಳೆದುಕೊಂಡ ರೈತರು ಕಂಪನಿ ಸ್ಥಾಪಿಸುವುದರಿಂದ ತಮಗೆ ಹಾಗೂ ತಮ್ಮ ಮಕ್ಕಳಿಗೆ ಉದ್ಯೋಗಾವಕಾಶಗಳು ಬರುವುದನ್ನೇ ಕಾಯುತ್ತಿದ್ದಾರೆ ಎಂದು ತಿಳಿಸಿರುವ ಅವರು, ಕಂಪನಿ ಬರುವುದು ಬೇಡ ಎಂದು ಕೆಲವು ಹಿತಾಸಕ್ತಿಗಳು ಕಂಪನಿ ಸ್ಥಾಪಿಸುವುದನ್ನು ತಡೆಗಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಇದರಿಂದ ಜಮೀನು ಕಳೆದುಕೊಂಡ ರೈತರು ಉದ್ಯೋಗಾವಕಾಶ ವಂಚಿತರಾಗುತ್ತಾರೆ ಹಾಗೂ ಯುವಕರಲ್ಲಿ ಗುಳೇ ಹೋಗುವ ಸಮಸ್ಯೆ ಹೆಚ್ಚಾಗುತ್ತದೆ, ಆಶಾಭಾವನೆಯಲ್ಲಿದ್ದ ರೈತರಿಗೆ ನಿರಾಸೆ ಉಂಟಾಗುತ್ತಿದೆ. ಕೊಪ್ಪಳ ಹಾಗೂ ಸುತ್ತಮುತ್ತಲ ಜಿಲ್ಲೆಗಳ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಾರೆ ಇಂತಹ ಸಮಸ್ಯೆಗಳ ತಡೆಗಟ್ಟುವಲ್ಲಿ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿ ಹೊಂದುವಲ್ಲಿ ಕಾರ್ಖಾನೆಗಳು ಅನಿವಾರ್ಯವಾಗಿರುತ್ತವೆ ಎಂದು ತಿಳಿಸಿದ್ದಾರೆ.ಈಗಾಗಲೇ ಬಲ್ದೋಟ್ ಸಂಸ್ಥೆಯು ಇನ್ವೆಸ್ಟ್ ಕರ್ನಾಟಕ 2025 ರಲ್ಲಿ ಸುಮಾರು ರೂ 54,000 ಕೋಟಿ ಬಂಡವಾಳ ಹೂಡಿಕೆ ಯೋಜನೆಯನ್ನು ಪ್ರಕಟಿಸಿದ್ದು ಹಾಗೂ 15 ರಿಂದ 20 ಸಾವಿರ ಉದ್ಯೋಗಗಳು ಸೃಷ್ಟಿಸುವುದು, ಅದಲ್ಲದೆ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಉನ್ನತ ತಂತ್ರಜ್ಞಾನ ಬಳಸುವುದಾಗಿ ಹೇಳಿಕೊಂಡಿದೆ.
ಬಲ್ದೋಟ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ ಕಂಪನಿ ಸ್ಥಾಪಿಸುವುದರಿಂದ ಕೊಪ್ಪಳದ ಜನ ಜೀವನಮಟ್ಟ ಸುಧಾರಿಸುವುದಲ್ಲದೆ ಒಳ್ಳೆಯ ಉದ್ಯೋಗ ಅವಕಾಶಗಳನ್ನು ಕೂಡ ಬದಗಿಸಿದಂತಾಗುತ್ತದೆ ಹಾಗೂ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹೊಂದುವ ಆಶಾಭಾವನೆ ವ್ಯಕ್ತವಾಗುತ್ತದೆ, ಎಂಎಸ್‌ಪಿಎಲ್ ಕಂಪನಿ ಸ್ಥಾಪನೆಗೆ ಮುಖ್ಯಮಂತ್ರಿಗಳು ಅನುವು ಮಾಡಿಕೊಡಬೇಕೆಂದು ದಲಿತ ಸಂಘಟನಾ ಸಮಿತಿ,ಭೀಮ ಘರ್ಜನೆ ಮನವಿಯಲ್ಲಿ ತಿಳಿಸಿದ್ದಾರೆ.