ಸ್ಮಶಾನ ಭೂಮಿಗೆ ಜಾಗ ನೀಡಲು ಮನವಿ: ಉಗ್ರ ಹೋರಾಟದ ಎಚ್ಚರಿಕೆ..!!

Appeal to provide land for cemetery: Warning of violent struggle..!!

ಕಾಗವಾಡ 14: ತಾಲೂಕಿನ ಜುಗೂಳ ಗ್ರಾಮದ ಪರಿಶಿಷ್ಟ ಜಾತಿಯ ಸಮಾಜ ಬಾಂಧವರಿಗೆ ಸ್ಮಶಾನಕ್ಕಾಗಿ ಭೂಮಿ ನೀಡುವಂತೆ ಆಗ್ರಹಿಸಿ, ಸಮಾಜ ಬಾಂಧವರು, ಗುರುವಾರ ದಿ. 13 ರಂದು ಕಾಗವಾಡ ಉಪ ತಹಶೀಲ್ದಾರ ರಷ್ಮಿ ಜಕಾತಿ ಮತ್ತು ತಾಲೂಕಾ ಪಂಚಾಯತ ಎಡಿ ಅಲ್ಲಾವುದ್ದಿನ ಅನ್ಸಾರಿ ಮನವಿ ಸಲ್ಲಿಸಿ, ಆಗ್ರಹಿಸಿದ್ದಾರೆ. 

ಮನವಿ ನೀಡಿ, ಸಮಾಜದ ಮುಖಂಡರು ಮಾತನಾಡಿ, ಗ್ರಾಮದಲ್ಲಿ ಪ.ಜಾ. ಸಮಾಜದ ಸುಮಾರು 200 ಕುಟುಂಬಗಳಿದ್ದು, ನಮಗೆ ಸ್ಮಶಾನ ಭೂಮಿ ಇರುವುದಿಲ್ಲ. ಗ್ರಾ.ಪಂ.ಯ ಶಹಾಪೂರ ಹದ್ದಿಯಲ್ಲಿನ ಸರ್ವೇ ನಂ. 01 ಸರ್ಕಾರಿ-ಮಸನವಾಟಿ ಹೆಸರಿನಲ್ಲಿರುವ ಸುಮಾರು 2 ಎಕರೆ 1 ಗುಂಟೆ ಖುಲ್ಲಾ ಜಮೀನಿನಲ್ಲಿ ನಮ್ಮ ಪೂರ್ವಜರು, ಹಿರಿಯರು ಸುಮಾರು 30-40 ವರ್ಷಗಳಿಂದ ಮೃತರ ಅಂತ್ಯ ಸಂಸ್ಕಾರ ಮಾಡುತ್ತಾ ಬಂದಿರುತ್ತಾರೆ. ಆದರೇ ಈಗ ಶಹಾಪೂರ ಗ್ರಾಮದ ಕೆಲವು ಸರ್ವಣಿಯರು ಸರ್ಕಾರಿ ಜಾಗೆಯನ್ನು ಕಬಳಿಸುವ ಹುನ್ನಾರ ಮಾಡಿ, ಅಕ್ರಮವಾಗಿ ತಂತಿ-ಬೇಲಿಯನ್ನು ಹಾಕಿರುತ್ತಾರೆ. ಅದನ್ನು ಕೂಡಲೇ ತೆರವುಗೊಳಿಸಬೇಕೆಂದು ಫೆ. 6 ರಂದು ಪಿಡಿಓ ಅವರಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಕೂಡಲೇ ಸ್ಮಶಾನ ಭೂಮಿಗಾಗಿ ಪಹಣಿ ಪತ್ರವನ್ನು ನೀಡಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಾಗುವುದು. ಎಂದು ಎಚ್ಚರಿಕೆ ನೀಡಿದ್ದಾರೆ. 

ಈ ಸಮಯದಲ್ಲಿ ಅಣ್ಣಾಸಾಬ ಕೋರೆ  ಸೇರಿದಂತೆ ತಾಲೂಕಾ ಪಂಚಾಯತ ಅಧಿಕಾರಿಗಳು, ತಹಶೀಲ್ದಾರ ಕಾರ್ಯಾಲಯದ ಅಧಿಕಾರಿಗಳು ಮತ್ತು ಜುಗೂಳ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಬಾಂಧವರು ಉಪಸ್ಥಿತರಿದ್ದರು.