ಟಿಡಿಎಸ್, ಜಿಎಸ್ಟಿ ವಿರೋಧಿಸಿ ತಹಶೀಲ್ದಾರರಿಗೆ ಮನವಿ

ಶೇಡಬಾಳ 13:     ಇತ್ತಿಚಿಗೆ ಕೇಂದ್ರ ಸಕರ್ಾರವು ಸಹಕಾರ ಸಂಸ್ಥೆಗಳ ಮೇಲೆ ಆದಾಯ ತೆರಿಗೆ, ಟಿಡಿಎಸ್ ಹಾಗೂ ಜಿಎಸ್ಟಿ ವಿಧಿಸಿರುವುದು ಸಹಕಾರ ಸಂಸ್ಥೆಗಳ ಬೆಳಗಣಿಗೆಗೆ ತೊಡಕನ್ನುಂಟು ಮಾಡಿರುತ್ತದೆ. 

ಸಹಕಾರ ಸಂಸ್ಥೆಗಳ ಮೇಲೆ ಟಿಡಿಎಸ್ ವಿಧಿಸಿರುವುದರಿಂದ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ 52 ಸಾವಿರಕ್ಕೂ ಹೆಚ್ಚು ಸಹಕಾರ ಸಂಸ್ಥೆಗಳ ಅಭಿವೃದ್ಧಿಯಲ್ಲಿ ಹಿನ್ನಡೆ ಉಂಟಾಗುತ್ತಿದೆ ಕಾರಣ ಸಹಕಾರ ಕ್ಷೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ ಮತ್ತು ಇಎಸ್ಟಿಗಳನ್ನು ರದ್ದುಪಡಿಸಬೇಕೆಂದು ಕಾಗವಾಡದ ಬ್ರಹ್ಮನಾಥ ಕೋ-ಆಫ್ ಸೊಸಾಯಿಟಿಯ ಮುಖ್ಯಕಾರ್ಯದಶರ್ಿ ರಾಜೇಂದ್ರ ಖೋತ ಸಕರ್ಾರಗಳನ್ನು ಒತ್ತಾಯಿಸಿದ್ದಾರೆ. 

ಅವರು ಶುಕ್ರವಾರ ದಿ. 13 ರಂದು ಕಾಗವಾಡ ತಾಲೂಕಾ ತಹಶೀಲ್ದಾರರಾದ ಪ್ರಮೀಳಾ ದೇಶಪಾಂಡೆ ಅವರಿಗೆ ಸಹಕಾರ ಸಂಘಗಳ ಒಕ್ಕೂಟದಿಂದ ಮನವಿ ಪತ್ರ ಅಪರ್ಿಸಿ ಮಾತನಾಡುತ್ತಿದ್ದರು. ಅವರು ಮುಂದೆ ಮಾತನಾಡಿ ಸಹಕಾರ ಕ್ಷೇತ್ರದಲ್ಲಿ ಕೋಟ್ಯಾಂತರ ಜನರು ಸದಸ್ಯರಿದ್ದು, ಲಕ್ಷಾಂತರ ಉದ್ಯೋಗ ಅವಕಾಶವನ್ನು ಸಹಕಾರ ಕ್ಷೇತ್ರ ನೀಡಿರುತ್ತದೆ. 

ಈ ಹಿನ್ನಲೆಯಲ್ಲಿ ಸಹಕಾರ ಕ್ಷೇತ್ರವನ್ನು ಉಳಿಸಿ, ಬೆಳೆಸುವ ದೃಷ್ಟಿಯಿಂದ, ಸಹಕಾರ ಕ್ಷೇತ್ರದ ಮೇಲೆ ವಿಧಿಸಿರುವ ಆದಾಯ ತೆರಿಗೆ, ಟಿಡಿಎಸ್ ಮತ್ತು ಇಎಸ್ಟಿಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. 

ಕನರ್ಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟೀಸ್ ಅಸೋಸಿಯೇಷನ್ ನೇತೃತ್ವದಲ್ಲಿ ರಾಜ್ಯದ/ದೇಶದ ಎಲ್ಲಾ ಸಹಕಾರಿಗಳು ಕೇಂದ್ರ ಸಕರ್ಾರವನ್ನು ಮನವಿ  ಮಾಡಿಕೊಳ್ಳುತ್ತೀದ್ದೇವೆ. ದಯಮಾಡಿ ಇದರೊಂದಿಗೆ ಲಗತ್ತಿಸಿರುವ ಮನವಿ ಪತ್ರವನ್ನು ಗೌರವಾನ್ವಿತ ಪ್ರಧಾನ ಮಂತ್ರಿಗಳಿಗೆ ಹಾಗೂ ಗೌರವಾನ್ವಿತ ಕೇಂದ್ರ ಹಣಕಾಸು ಸಚಿವರಿಗೆ ರವಾನಿಸಬೇಕೆಂದು ವಿನಂತಿಸುತ್ತೇವೆ ಎಂದು ರಾಜೇಂದ್ರ ಖೋತ ಮನವಿ ಮಾಡಿಕೊಂಡರು.

ಈ ಸಮಯದಲ್ಲಿ ಬ್ರಹ್ಮನಾಥ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ, ಶ್ರೀ ಮಲ್ಲಿಕಾಜರ್ುನ ಅರ್ಬನ್ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ, ಲಕ್ಷ್ಮೀ ಸೌಹರ್ಾದ ಕ್ರೆಡಿಟ್ ಸೊಸಾಯಿಟಿ, ಅಕ್ಕಮಹಾದೇವಿ ಮಹಿಳಾ ವಿವಿಧ ಉದ್ದೇಶಗಳ ಸಹಕಾರಿ ಸಂಘ, ವಿದ್ಯಾಶ್ರೀ ಬ್ರಾಹ್ಮಿಸುಂದರಿ ಮಹಿಳಾ ಮಲ್ಟಿಫರಪಜ್ ಕೋ-ಆಫ್ ಸೊಸಾಯಿಟಿ, ರೈತ ಸೇವಾ ಮಲ್ಟಿ ಫರಪಜ್ ಕೋ-ಆಫ್ ಸೊಸಾಯಿಟಿ, ಜ್ಯೋತಿಲರ್ಿಂಗ ಮಲ್ಟಿಫರಪಜ್ ಕೋ-ಆಫ್ ಸೊಸಾಯಿಟಿ, ಸಂಜೀವಿನಿ ಕೋ-ಆಫ್ ಸೊಸಾಯಿಟಿ, ಅರಿಹಂತ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ., ಪಿಕೆಪಿಎಸ್ ಕಾಗವಾಡ, ಕರ್ಮವೀರ ಭಾವುರಾವ ಪಾಟೀಲ ಮಲ್ಟಿಸ್ಟೇಟ್ ಕೋ-ಆಫ್ ಕ್ರೆಡಿಟ್ ಸೊಸಾಯಿಟಿ, ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿ. ಸೇರಿದಂತೆ ಪಟ್ಟಣದ ಎಲ್ಲ  ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ ಇದ್ದರು.