ಫಲಾನುಭವಿಗಳ ಪಟ್ಟಿ ರಚಿಸುವಲ್ಲಿ ಕರ್ತವ್ಯ ಲೋಪ ಖಂಡಿಸಿ ತಹಶೀಲ್ದಾರಗೆ ಮನವಿ

ಲೋಕದರ್ಶನ ವರದಿ

ಶಿರಹಟ್ಟಿ 16: ಶಿರಹಟ್ಟಿ ಪಟ್ಟಣ ಪಂಚಾಯತಿಗೆ ಸಂಬಂಧ ಪಟ್ಟಣ ಗೆ 2019-20 ನೇ ಸಾಲಿಗೆ ಸಂಬಂಧ ಪಟ್ಟಿ ಎಹೆಚ್ಪಿ ಯೋಜನೆಯ ಅಡಿಯಲ್ಲಿನ ಏಕಶಿಲೆ ಮಾದರಿಯಲ್ಲಿ ಒಟ್ಟು 450 ಮನೆ ಕಟ್ಟಿಕೊಡಲು ಫಲಿನುಭವಿಗಳ ಆಯ್ಕೆಯಲ್ಲಿ ಕರ್ತವ್ಯೆ ಲೋಪ ಎಸಗಿದ್ದಾರೆ ಎಂದು ಪಪಂ ಸದಸ್ಯರು ಹಾಗೂ ಸಾರ್ವಜನಿಕರು ತಹಶೀಲ್ದಾರ ರವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಎಹೆಚ್ಪಿ ಯೋಜನೆಯಡಿಯಲ್ಲಿ ಏಕಶಿಲೆಮಾದರಿಯಲ್ಲಿ ಒಟ್ಟು 450 ಮನೆಗಳ ಕಟ್ಟಿಕೊಡಲು ಫಲಾನುಭವಿಗಳ ಆಯ್ಕೆಯಲ್ಲಿ ಕರ್ತವ್ಯೆ ಲೋಪ ವಾಗಿರುವುದನ್ನು  ಖಂಡಿಸಿ ತಹಶೀಲ್ದಾರರವರಿಗೆ ಪಪಂ ಸದಸ್ಯರು ಮತ್ತು ಸಾರ್ವಜನಿಕರು ಮನವಿ ಸಲ್ಲಿಸಿದರು. 

ದಿ. 13 ರಂದು ಪತ್ರಿಕೆಯಲ್ಲಿ ಪ್ರಕಟವಾದ ಫಲಾನುಭವಿಗಳ ಯಾದಿಯಲ್ಲಿ ಯಾವುದೇ ಮಾನದಂಡನೆಗಳು ಮತ್ತು ಯಾವುದೇ ಸರಕಾರದ ನಿಯಮಗಳನ್ನು ಪಾಲನೆ ಯಾಗಿಲ್ಲವೆಂದು ಸ್ಪಷ್ಟವಾಗಿ ಕಂಡು ಬಂದಿರುತ್ತದೆ. ಸದರಿ ಫಲಾನುಭವಿಗಳ ಪಟ್ಟಿ ರಚಿಸಿದವರು ಕರ್ತವ್ಯ ಲೋಪವೆಸಗಿದ್ದಾರೆ ಆದ ಕಾರಣ 450 ಫಲಾನುಭವಿಗಳ ಪಟ್ಟಿಯನ್ನು ರಚಿಸಿ ಪ್ರಕಟಗೊಳಿಸಿದವರ ಮೇಲೆ ಕ್ರಮ ಜರುಗಿಸಬೇಕು ಮತ್ತು ಪ್ರಕಟಗೊಂಡ ಸಾರ್ವಜನಿಕರಿಗೆ ದಾರಿ ತಪ್ಪಿಸುವಂತಾಗಿರುತ್ತದೆ ಎಂದ್ರ ಅಗ್ರಹಿಸಿ ತಹಶೀಲ್ದಾರವರಿಗೆ ಮನವಿ ಸಲ್ಲಿಸಿದರು. 

ಹುಮಾಯುನ ಮಾಗಡಿ,ದೇವಪ್ಪ ಲಮಾಣಿ ಹೊನ್ನಪ್ಪ ಶಿರಹಟ್ಟಿ, ದೇವಪ್ಪ ಆಡೂರ, ಮಂಜುನಾಥ ಗಂಟಿ, ಮುಸ್ತಕ ಚೋರಗಸ್ತಿ, ನೀಲವ್ವ ಹುಬ್ಬಳ್ಳಿ, ಡಿ.ಎಮ್.ಮಾಚೇನಹಳ್ಳಿ, ಎ.ಎಮ್.ಆದ್ರಳ್ಳಿ , ಗಂಗಮ್ಮ ಆಲೂರ, ಮಾಬುಸಾಬ ಲಕ್ಷ್ಮೇಶ್ವರ, ಎಸ್.ಎಸ್.ಮರಿಗೌಡ್ರ, ಎಮ್.ಆರ್. ಬುವಾಜಿ, ಅಲ್ಲಾಭಕ್ಷಿ ನಗಾರಿ, ಉಪಸ್ಥಿತರಿದ್ದರು.