ಕೆಎಸ್ ಆರ್‌ಟಿಸಿ ಬಸ್ಸು ನಿಲ್ದಾಣ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ
ವಿಜಯಪುರ 21: ಕೆಎಸ್ ಆರ್‌ಟಿಸಿ ಬಸ್ಸು ನಿಲ್ದಾಣ, ತಾಳಿಕೋಟಿ ಒಳಗಡೆ ಅಥವಾ ಹೊರಗಡೆ ಆಟೋರಿಕ್ಷಾ ಸ್ಟ್ಯಾಂಡ್ ನೀಡುವಂತೆ ಒತ್ತಾಯಿಸಿ ಜಿಲ್ಲಾ ಆಟೋರಿಕ್ಷಾ ಯುನಿಯನ್, ಬಿಜಾಪುರ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಹ್ಮದ ಗುಲಾಬ ಭಂಡಾರಿ ಮಾತನಾಡಿ, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ ಹೊರಗೇಟ್ ಲಗತ್ತಿಸಿ ಆಟೋರಿಕ್ಷಾ ಪಾಳಿ ಹಚ್ಚಿ ಅಹೋರಾತ್ರಿ ಪ್ರಯಾಣಿಕರ ನಿರಂತರ ಸೇವೆ ಮಾಡುವ ಸಲುವಾಗಿ ಆಟೋರಿಕ್ಷಾ ನಿಲ್ಲಿಸಲು ಸ್ಟ್ಯಾಂಡ್ ಇತ್ತು. ಬಸ್ಸು ನಿಲದಾಣ ಮುಂಭಾಗಕ್ಕೆ ಇರುವ ಮುಖ್ಯ ರಹದಾರಿ ರಸ್ತೆಯ ನವೀರಕರಣ ಮಾಡುವ ಕಾಮಗಾರಿ ಕೆಲಸ ಜಾರಿಯಲ್ಲಿ ಇತ್ತು. ಇದರಿಂದ ಆಟೋರಿಕ್ಷಾ ನಿಲ್ಲಿಸಲು ಅವಕಾಶ ಇರಲಿಲ್ಲಾ. ಈಗಾಗಲೇ ಬಸ್ಸು ನಿಲ್ದಾಣ ಮುಂಭಾಗಕ್ಕೆ ಇರುವ ಮುಖ್ಯ ರಹದಾರಿ ರಸ್ತೆಯ ನವಿಕರಣ ಕಾಮಗಾರಿ ಕೆಲಸ ಪೂರ್ಣ ಗೊಂಡಿದೆ. ಕಾರಣ ಆಟೋರಿಕ್ಷಾ ಚಾಲಕರು ಮಾಲಿಕರು ಮೊದಲಿನಂತೆ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ ಹೊರಗೇಟ ಲಗತ್ತಿಸಿ ಆಟೋರಿಕ್ಷಾ ಪಾಳಿ ಹಚ್ಚಿ ಪ್ರಯಾಣಿಕರ ನಿರಂತರ ಸೇವೆ ಸಲುವಾಗಿ ಆಟೋರಿಕ್ಷಾ ನಿಲ್ಲಿಸಲು ಸ್ಟ್ಯಾಂಡ್ ಮಾಡಿ ಅನುಕೂಲ ಕಲ್ಪಿಸಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಸಾಹೇಬರು ಮಧ್ಯ ಪ್ರವೇಶಿಸಿ ಸಂಬಂಧಿಸಿತ ಇಲಾಖೆಯವರಿಗೆ ಆಟೋರಿಕ್ಷಾಗಳಿಗೆ ಹಾಲಿ ಸ್ಟ್ಯಾಂಡ ಸಲುವಾಗಿ ಆದೇಶ ನೀಡಿ ಸಮಸ್ಯೆಯ ಪರಿಹಾರ ಮಾಡಿಕೊಡಬೇಕೆಂದು ಪ್ರಸ್ತುತ ಪತ್ರದ ಮೂಲಕ ವಿನತಿ. 2) ಅಥವಾ ಬಸ್ಸು ನಿಲ್ದಾಣ ಒಳಗಡೆ ಪಾರ್ಕಿಂಗ್ ಜಾಗದಲ್ಲಿ ಆಟೋರಿಕ್ಷಾಗಳಿಗೆ ಸ್ಟ್ಯಾಂಡ್ ಮಾಡಿ ನಾಲ್ಕು ಆಟೋರಿಕ್ಷಾಗಳಿಗಾಗಿ ಹೊರಗೇಟ ಲಗತ್ತಿಸಿ ನಿಲ್ಲಿಸಲು ಅವಕಾಶ ಮಾಡಿದರೆ ಪ್ರಯಾಣಿಕರಿಗೆ ಹಾಗೂ ಆಟೋರಿಕ್ಷಾ ಚಾಲಕರು ಮಾಲಿಕರಿಗೆ ಅನುಕೂಲ ಆಗುತ್ತದೆ. ಇದೇ ಸಂದರ್ಭದಲ್ಲಿ ದಯಾಳುಗಳಾದ ತಾವು ಪ್ರಯಾಣಿಕರ ಹಿತಾಸಕ್ತಿ ಹಾಗೂ ಸೇವೆಗಾಗಿ ಸವಲತ್ತು ಮಾಡಿಕೊಡಬೇಕೆಂದು ತಮ್ಮಲ್ಲಿ ಜಿಲ್ಲಾ ಆಟೋರಿಕ್ಷಾ ಯುನಿಯನ್ ತಮ್ಮಲ್ಲಿ ವಿನಂತಿಸಿಕೊಳ್ಳುತ್ತದೆ.
ಈ ಸಂದರ್ಭದಲ್ಲಿ ಪೀರಾಮದರಸಾ ಮಕಾಂದಾರ, ಮಹ್ಮದಯೂಸೂಪ್ ಕರೋಬಾ, ಆನಂದ ಕದಂ, ಅಮೀನ ಮೇತ್ರಿ, ಮುಸ್ತಾಫಾ ಬಶಟ್ಟಾಳ, ನಬಿ ಮೇತ್ರಿ, ಆರೀಫ ಬಂಚೂಡಿ, ಇಸಾಕ ಬೋರಗಿ, ಸೈಯ್ಯದ ಲಾಹೋರಿ, ಮಹಿಬೂಬ ಕುಂಬಾರೋಡಿ, ಅಶೋಕ ತಳವಾರ, ಅಶೋಕ ಕಟ್ಟಿಮನಿ, ಗೌಡಪ್ಪ ಪಾಟೀಲ, ಮೈಬೂಬ ಖಾಂಜಾದೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.