ಲೋಕದರ್ಶನವರದಿ
ಹಾವೇರಿ :ನಾಗೇಂದ್ರನಮಟ್ಟಿ ಹೊರ ವಲಯದಲ್ಲಿರುವ ಸುಡುಗಾಡು ಸಿದ್ಧರ ಕುಟುಂಬಗಳಿಗೆ ಶಾಶ್ವತವಾದ ಮನೆಗಳನ್ನು ಕಟ್ಟಿಸಿ ಕೊಡಬೇಕೆಂಬ ಮನವಿ ಪತ್ರವನ್ನು ವಿವಿಧ ಸಂಘಟನೆಗಳ ಪರವಾಗಿ ಜಿಲ್ಲಾಧಿಕಾರಿಗಳಾದ ಕೃಷ್ಣಾ ಬಾಜಪೇಯಿಯವರಿಗೆ ಸಲ್ಲಿಸಲಾಯಿತು.
ಕಳೆದೆರಡು ವಾರಗಳ ಹಿಂದೆ ಸತತವಾಗಿ ಮಳೆ ಸುರಿದ ಪರಿಣಾಮವಾಗಿ ಶಾಂತಿನಗರ ಹೊರ ವಲಯದ 20 ಕ್ಕೂ ಹೆಚ್ಚು ಸುಡುಗಾಡು ಸಿದ್ದ ಜನಾಂಗ ಕುಟುಂಬದವರು ನಿರಾಶ್ರಿತರ ವಸತಿ ಕೇಂದ್ರಕ್ಕೆ ಬರುವಂತಾಗಿತ್ತು.
ಅವರ ಎರಡು ಮುಖ್ಯ ಬೇಡಿಕೆಗಳಾದ ಶಾಶ್ವತ ವಸತಿ ಮತ್ತು ಅವರ ಹೈಸ್ಕೂಲ ಹಾಗೂ ಕಾಲೇಜಿನಲ್ಲಿ ಓದುತ್ತಿರು 8 ಮಕ್ಕಳಿಗೆ ಸರಕಾರಿ ಹಾಸ್ಟೇಲ್ ಗಳಲ್ಲಿ ಉಚಿತ ಪ್ರವೇಶ ನೀಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸತೀಶ ಕುಲಕಣರ್ಿ, ನಾಗರಾಜ ನಡುವಿನಮಠ, ಮೋಹನ್ ತರೀಕೇರಿ ಹಾಗೂ ಎಸ್.ಆರ್.ಹಿರೇಮಠ ಇದ್ದರು.