ಜಿಲ್ಲೆಯ ಎಲ್ಲ ಶಾಸಕರುಗಳಿಗೆ ಹೋರಾಟ ಸಮಿತಿಯಿಂದ ಹಕ್ಕೊತ್ತಾಯದ ಮನವಿ ಪತ್ರ

Appeal letter from the struggle committee to all MLAs of the district

ಜಿಲ್ಲೆಯ ಎಲ್ಲ ಶಾಸಕರುಗಳಿಗೆ ಹೋರಾಟ ಸಮಿತಿಯಿಂದ ಹಕ್ಕೊತ್ತಾಯದ ಮನವಿ ಪತ್ರ

ಹಾವೇರಿ 28 :ಹಾವೇರಿ ವಿಶ್ವವಿದ್ಯಾಲಯ ಮುಚ್ಚದಂತೆ ಈಗಾಗಲೇ ಸರಕಾರಕ್ಕೆ, ಜಿಲ್ಲೆಯ ಎಲ್ಲ ಶಾಸಕರುಗಳಿಗೆ ಹೋರಾಟ ಸಮಿತಿಯಿಂದ ಹಕ್ಕೊತ್ತಾಯದ ಮನವಿ ಪತ್ರ ಕೊಡಲಾಗಿದೆ. ರಾಜ್ಯ ಸರಕಾರದ ಬಜೆಟ್ ಅಧಿವೇಶನ ಆರಂಭಗೊಳ್ಳುತ್ತಿದ್ದು, ನಮ್ಮ ಮನವಿ ಪತ್ರಕ್ಕೆ ವಿಧಾನಸಭೆ ಅಧಿವೇಶನ ನಡೆಯುವ ಅವಧಿಯಲ್ಲಿ ಸರಕಾರ ಸಕರಾತ್ಮಕ ಪ್ರತಿಕ್ರಿಯೆ ನೀಡಬಹುದೆಂಬ ಆಶಾಭಾವನೆಯಿದ್ದು, ಅಧಿವೇಶನದವರೆಗೂ ಸರಕಾರಕ್ಕೆ ಸಮಾಯಾವಕಾಶ ನೀಡಲಾಗುವುದು. ಅಧಿವೇಶನದ ಅವಧಿಯಲ್ಲಿ ರಾಜ್ಯ ಸರಕಾರ ವಿ.ವಿ ಮುಚ್ಚುವುದಿಲ್ಲ ಎಂದು ಅಧಿಕೃತಗೊಳಿಸಿ ಆದೇಶ ಹೊರಡಿಸಬೇಕು. ಒಂದು ವೇಳೆ ಅಧಿವೇಶನದಲ್ಲಿ ಈ ರೀತಿ ಆದೇಶ ಹೊರಡಿಸದಿದ್ದರೆ, ಮುಂದೆ ಉಗ್ರವಾದ ಹೋರಾಟ ಮಾಡಲು ಅಗತ್ಯಬಿದ್ದರೆ ಹಾವೇರಿ ಬಂದ್ ಮಾಡಿ ಹೋರಾಟ ನಡೆಸಲಾಗುವುದು ಎಂದು ಹಾವೇರಿ ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಸಂಚಾಲಕ ಬಸವರಾಜ ಪೂಜಾರ ಹೇಳಿದರು.       ನಗರದ ಪತ್ರಿಕಾಭವನದಲ್ಲಿ ಹಾವೇರಿ ವಿ.ವಿ ಉಳಿಸಿ ಹೋರಾಟ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಾವೇರಿ ವಿಶ್ವ ವಿದ್ಯಾಲಯ ಮುಚ್ಚುವುದಿಲ್ಲ ಎಂದು ರಾಜ್ಯ ಸರಕಾರ ಅಧಿಕೃತಗೊಳಿಸುವವರೆಗೆ ನಮ್ಮ ಐಕ್ಯ ಹೋರಾಟ ಮುಂದುವರೆಯುತ್ತದೆ ಎಂದರು.ವಿ.ವಿ ಮುಚ್ಚುವ ಸರಕಾರದ ತೀರ್ಮಾನವನ್ನು ವಿರೋಧಿಸಿ ಹಾಗೂ ಹಾವೇರಿ ವಿಶ್ವವಿದ್ಯಾಲಯ ಉಳಿವಿಗೆ ಒತ್ತಾಯಿಸಿ ಈಗಾಗಲೇ ವಿದ್ಯಾರ್ಥಿ ಸಂಘಟನೆಗಳು, ಉಪನ್ಯಾಸಕರು, ಸಾಹಿತಿ ಕಲಾವಿದರ ಬಳಗ, ದಲಿತ, ದಮನಿತ, ಮಹಿಳಾ, ಕನ್ನಡಪರ ಸಂಘಟನೆಗಳು, ಕಸಾಪ, ರೈತ-ಕಾರ್ಮಿಕ ಸಂಘಟನೆಗಳು ಸೇರಿದಂತೆ ಜಿಲ್ಲೆಯ ಜನ ಸಾಮಾನ್ಯರೂ ಕೂಡ ವಿ.ವಿ ಉಳಿಸುವಂತೆ ಒಕ್ಕೊರಲಿನಿಂದ ಬೀದಿಗಿಳಿದು ಪ್ರತಿಭಟಿಸಿದ್ದಾರೆ ಮುಂದೆಯೋ ಹೋರಾಟ ಮಾಡಲಾಗುವುದು ಈ ನಿಟ್ಟಿನಲ್ಲಿ ಸರ್ಕರದ ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಎಲ್ಲರಿಗೂ ಮವಿ ಸಲ್ಲಿಸಲಾಗಿದೆ ಎಂದರು.       ಹೋರಾಟ ಸಮಿತಿಯ ಮುಖಂಡರಾದ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ಜಿಲ್ಲೆಯ ರೈತರ ಹಾಗೂ ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಹಾವೇರಿ ವಶ್ವ ವಿದ್ಯಾಲಯವು ಅನುಕೂಲಕರವಾಗಿದೆ.ಸರಕಾರ ಯಾವುದೇ ಕಾರಣಕ್ಕೂ ಇದನ್ನು ಮುಚ್ಚಬಾರದು ಎಂದರು. 

     ಪರಿಮಳ ಜೈನ ಮಾತನಾಡಿ ಜಿಲ್ಲೆಯ ವಿದ್ಯಾರ್ಥಿನಿಯರು ಮಹಿಳೆಯರಿಗೆ ಉನ್ನತ ಶಿಕ್ಷಣ ಪಡೆಯಲು ವಿಶ್ವ ವಿದ್ಯಾಲಯ ಅಗತ್ಯವಾಗಿದೆ.ಈಗ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಪ್ರತಿಶತ 65ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಇದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಅನುಕೂಲವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಸರಕಾರ ಮುಚ್ಚಬಾರದು. ಅಲ್ಲದೇ ವಿ.ವಿ ಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಿದೆ ಎಂದರು.       ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಮುಖಂಡರಾದ ಉಡಚಪ್ಪ ಮಾಳಗಿ,ಎಂ ಆಂಜನೇಯ,ಹೊನ್ನಪ್ಪ ಮರೆಮ್ಮನವರ,ಸತೀಶ ಎಂ.ಬಿ,ಬಸವರಾಜ ಎಸ್,ಎ.ಎಂ ಪಟವೇಗಾರ,ವಿಭೂತಿ ಶೆಟ್ಟಿ ನಾಯಕ,ಗೀತಾ ಎಸ್ ಲಮಾಣಿ, ಕೃಷ್ಣಾ ನಾಯಕ್, ಶಿವಯೋಗಿ ಹೊಸಗೌಡ್ರ, ಸಿದ್ದು ಮರೆಮ್ಮನವರ ಮತ್ತು ಇತರರು ಇದ್ದರು.