ಹೊಂಡದ ತ್ಯಾಜ್ಯ ಮುಕ್ತಿಗೆ ಮನವಿ

 ಗುಳೇದಗುಡ್ಡ16: ಪ್ರಸಿದ್ದ ಬಾದಾಮಿ ಬನಶಂಕರಿ ದೇವಸ್ಥಾನದ ಜಾತ್ರೆ ವಿಜೃಂಭಣೆಯಿಂದ ನಡೆದಿದ್ದೂ , ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಬರುತ್ತಿದ್ದಾರೆ. 

    ಆದರೆ ದೇವಸ್ಥಾನದ ಎದುರಿನ ಹೊಂಡದಲ್ಲಿ ಭಕ್ತಾಧಿಗಳು ನಿತ್ಯ ಸಾಕಷ್ಟು ತ್ಯಾಜ್ಯವನ್ನು ಚಲ್ಲುತ್ತಿರುವುದರಿಂದ ಹೊಂಡದ ನೀರು ಮಲೀನವಾಗುತ್ತಿದೆ ಎಂದು ಭಕ್ತಾಧಿಗಳು ಅರೋಪಿಸುತ್ತಿದ್ದಾರೆ.  ಅದರಲ್ಲಿಯೇ ಭಕ್ತರು ಸ್ನಾನ ಮಾಡುವುದು, ಪೂಜೆಗೆ ನೀರು ಬಳಸುವುದು ಕಂಡು ಬರುತ್ತಿದ್ದೂ, ಭಕ್ತರು ಹೊಂಡದಲ್ಲಿ ಹೂ, ಹಾರ, ಮಲೀನ ಬಟ್ಟೆ ಬಿಡುತ್ತಿರುವುದು ಹೆಚ್ಚಾಗಿದೆ. ಇದನ್ನು ನಿಯಂತ್ರಿಸಬೇಕು. ಅಲ್ಲದೇ ನಿತ್ಯ ಹೊಂಡದಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡಿ ನೀರು ಶುದ್ದವಾಗಿರುವಂತೆ ಸಂಬಂಧಪಟ್ಟ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕೆಂದು ಗುಳೇದಗುಡ್ಡ, ಕೆರೂರ, ಹಂಸನೂರ ಸೇರಿದಂತೆ ವಿವಿಧ ಕಡೆಗಳಲ್ಲಿನ ಭಕ್ತರು ಆಗ್ರಹಿಸಿದ್ದಾರೆ.