ಬೆಳಗಾವಿ : ಅತೀವೃಷ್ಠಿಯಿಂದ ಬೆಳೆಹಾನಿ ಹಾಗೂ ಫಸಲ್ ಬೀಮಾ ಯೋಜನೆಯ ಹಣವನ್ನು ತಾಲೂಕಿನ ಕೆ.ಕೆ ಕೊಪ್ಪ ಗ್ರಾಮದ ರೈತರಿಗೆ ನೀಡುವಂತೆ ಆಗ್ರಹಿಸಿ ಅಖಂಡ ಕನರ್ಾಟಕ ರೈತ ಸಂಘ ಕನರ್ಾಟಕ ಬೆಳಗಾವಿ ತಾಲೂಕ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಕೆಲಹೊತ್ತು ಪ್ರತಿಭಟನೆ ನಡೆಸಿದ ರೈತರು ಈ ಕುರಿತು ಮನವಿಯೊಂದನ್ನು ಸಲ್ಲಿಸಿ, ಕಳೆದ ಒಂದು ತಿಂಗಳಿನಿಂದ ತಾಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ಮಳೆ ಹೆಚ್ಚಾಗಿ ಬಿಳತಾ ಇದ್ದು, ಇದರಿಂದ ಹಾಗೂ ಗ್ರಾಮದಲ್ಲಿ ಬಸವನ ಹುಳುವಿನ ಕಾಟದಿಂದ ಬತ್ತ, ಸೊಯಾಬಿನ್ ಸೇರಿದಂತೆ ಬೆಳೆಗಳು ಅತಿವೃಷ್ಠಿಯಿಂದ ಹಾನಿಯಾಗಿವೆ.
ಈ ಕೂಡಲೆ ಅತಿವೃಷ್ಠಿ ಹಾಗೂ ಫಸಲ ಬಿಮಾ ಯೋಜನೆಯಡಿಯಲ್ಲಿ ಕೆ.ಕೆ.ಕೊಪ್ಪ ಗ್ರಾಮದ ರೈತರಿಗೆ ಪರಿಹಾರ ನೀಡುವಂತೆ ಲ್ಲಾಧಿಕಾರಿಗಳಿಗೆ ನೀಡಲಾಗಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ. ಇಂದಿನ ಪ್ರತಿಭಟನೆಯಲ್ಲಿ ಸೋಮಪ್ಪ ಡೊಂಗರಗಾವಿ, ಸಿದ್ದಪ್ಪ ನೀರಲಗಿ, ರಾಮನಗೌಡ ಪಾಟೀಲ, ಸೂರಪ್ಪ ಚಚಡಿ, ಅಪ್ಪರಾಯ ಡೊಂಗರಗಾವಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.