ಲೋಕದರ್ಶನ ವರದಿ
ರಾಯಬಾಗ: ಸಂವಿಧಾನ ದಿನಕ್ಕಾಗಿ ಸಿದ್ಧಪಡಿಸಿರುವ ಕೈಪಿಡಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಶಿಕ್ಷಣ ಇಲಾಖೆಯ ಉಮಾಶಂಕರ ಅವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿ ಕನರ್ಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ತಾಲೂಕು ಪದಾಧಿಕಾರಿಗಳು ತಹಶೀಲ್ದಾರ ಡಿ.ಎಚ್.ಕೋಮರ ಮೂಲಕ ರಾಜ್ಯಪಾಲರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ರಾಜ್ಯ ಸಂಘಟನಾ ಸಂಚಾಲಕ ರಾಜು ತಳವಾರ ಮಾತನಾಡಿ, ರಾಜ್ಯ ಶಾಲಾ ಕಾಲೇಜು ವಿದ್ಯಾಥರ್ಿಗಳಿಗೆ ಸಂವಿಧಾನ ಮೂಲ ಆಶಯ ತಿಳಿಸುವ ಕೈಪಿಡಿಯಲ್ಲಿ ಕನರ್ಾಟಕ ರಾಜ್ಯ ಶಿಕ್ಷಣ ಇಲಾಖೆ ಮುದ್ರಿಸಿರುವ ವಿಷಯಗಳು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸುವ ರೀತಿಯಲ್ಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಅಂಬೇಡ್ಕರ್ರವರು ಸಂವಿಧಾನ ಓದುವುದಷ್ಟೇ ಕೆಲಸವಾಗಿತ್ತು ಎಂಬಂತೆ ಬಿಂಬಸಲಾಗಿದ್ದು, ಕೈಪಿಡಿಯಲ್ಲಿ ಅನೇಕ ಅಪಾರ್ಥ ಪದಗಳಿಂದ ಕೂಡಿದೆ. ಡಾ.ಅಂಬೇಡ್ಕರ್ರವರಿಗೆ ಹಾಗೂ ಅವರನ್ನು ಅನುಸರಿಸುವ ಸಮುದಾಯಕ್ಕೆ ಅವಮಾನ ಮಾಡಿದ್ದು, ಈ ಕೈಪಿಡಿ ಸಿದ್ಧಪಡಿಸಿದ ಶಿಕ್ಷಣ ಇಲಾಖೆಯ ಉಮಾಶಂಕರ ಅವರನ್ನು ಅಮಾನತ್ತು ಮಾಡಿ, ಅವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು. ಹಾಗೂ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕು ಸಂಚಾಲಕ ಸಿದ್ದು ಕಾಂಬಳೆ, ನಾಮದೇವ ಕಾಂಬಳೆ, ಸಂತೋಷ ಕಾಂಬಳೆ, ಸುಜೀತ ಕಾಂಬಳೆ, ಸಂಜು ಕಾಂಬಳೆ, ಜ್ಯೋತಿಬಾ ಚಾಂಬಾರ, ಪರಶುರಾಮ ಕಾಂಬಳೆ, ವಸಂತ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.