ಲೋಕದರ್ಶನ ವರದಿ
ರಾಮದುರ್ಗ 20: ಪದೇ ಪದೇ ಪ್ರವಾಹಕ್ಕೆತುತ್ತಾಗಿ ಸಂಕಷ್ಠಕ್ಕೆ ಸಿಲುಕುತ್ತಿರುವ ತೇರ್ ಬಜಾರಯಾನಂಪೇಠೆಯ ವಾರ್ಡ ನಂ.13ರ ನಿವಾಸಿಗಳನ್ನು ಶಾಶ್ವತವಾಗಿ ಬೇರೆಡೆ ಸ್ಥಳಾಂತರಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿಅಲ್ಲಿನ ನಿವಾಸಿಗಳು ಹಾಗೂ ಮಹಿಳೆರು ಸೋಮವಾರ ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಮಲಪ್ರಭಾ ನದಿ ಪಾತ್ರಕ್ಕೆ ಕೂಗಳತೆ ದೂರದಲ್ಲಿರುವ ಯಾನಂಪೇಠೆಯ ಜನತೆ ನದಿ ಪ್ರವಾಹ ಉಂಟಾದಾಗಲೆಲ್ಲ ಮನೆಗಳು ಬಿದ್ದು, ಸಂಕಷ್ಠಕ್ಕೆ ಸಿಲುಕುವಂತಾಗಿದೆ. ಇತ್ತಿಚೆಗೆ ಉಂಟಾದ ಪ್ರವಾಹದಿಂದ ಮನೆಯಲ್ಲಿದ್ದ ಜೀವನಾವಶ್ಯಕ ವಸ್ತುಗಳು ಸೇರಿದಂತೆ ದವಸ ಧಾನ್ಯಗಳು ನದಿ ಪ್ರವಾಕ್ಕೆ ಕೊಚ್ಚಿ ಹೋಗಿದ್ದು, ಜನಜೀವನದಾರಿಗೆ ಬಂದಂತಾಗಿದೆ. ಆಥರ್ಿಕವಾಗಿ ಇಲ್ಲಿನ ಜನತೆ ನಷ್ಠಕ್ಕೊಳಗಾಗಿದ್ದು ಒಂದೆಡೆಯಾದರೆ ನದಿ ಪ್ರವಾಹದಿಂದ ವಾತಾವರಣ ಅಶುಚಿತ್ವಗೊಂಡು ಜನತೆರೋಗ ರುಜಿನಗಳು ಹರಡುವ ಭಯಾನಕ ಸ್ಥಿತಿಯಲ್ಲಿ ಜನತೆ ಕಾಲ ಕಳೆಯುವಂತಾಗಿದೆ.
ಕೂಡಲೇ ವಾರ್ಡನಲ್ಲಿರುವ ನಿವಾಸಿಗಳ ಕುಟಂಬವನ್ನು ಶಾಶ್ವತವಾಗಿ ಸ್ಥಳಾಂತರಗೊಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರವಾಹದಿಂದ ಹಾನಿಗೊಳಗಾದ ಕುಟುಂಬಕ್ಕೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಅವರು ಮನವಿ ಮೂಲಕ ಸರಕಾರವನ್ನು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವಾರ್ಡನ ನಿವಾಸಿಗಳಾದ ಮಲ್ಲಿಕಾಜರ್ುನ ರಾಮದುರ್ಗ, ಪತ್ರೆಪ್ಪ ಹರಗೋಲ, ಈರಣ್ಣ ಕೊಣ್ಣೂರ, ಬಸವರಾಜಯಂಕಂಚಿ, ಕೀತರ್ಿ ಭಾವಿಕಟ್ಟಿ, ಮಲ್ಲವ್ವ ನಿಶಾನದಾರ, ರೇಣುಕಾ ಹರಗೋಲ, ರತ್ನವ್ವ ಹರಗೋಲ ಸೇರಿದಂತೆ ಹಲವರಿದ್ದರು.