ಜಿಲ್ಲೆಯ ನರೇಗಾ ಯೋಜನೆಯ ಸಮರ್ಪಕ ಜಾರಿಗಾಗಿ ಮನವಿ

Appeal for prompt implementation of the district's NAREGA scheme

ವಿಜಯಪುರ 25: ಜಿಲ್ಲೆಯ ನರೇಗಾ ಯೋಜನೆಯನ್ನು ಸಮರ​‍್ಕ ಜಾರಿಗಾಗಿ ಸತತ 100 ದಿನಗಳ ಕೆಲಸಕ್ಕಾಗಿ ಒತ್ತಾಯಿಸಿ ವಿಜಯಪರು ಜಿಲ್ಲಾ ಪಂಚಾಯತ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಂಡು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ  ಅವರಿಗೆ ಮನವಿ ಸಲ್ಲಿಸಲಾಯಿತು 

ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಅಣ್ಣಾರಾಯ ಈಳಗೇರಿ ಮಾತನಾಡಿ, ವಿಜಯಪುರ ಜಿಲ್ಲೆ ಕರ್ನಾಟಕದಲ್ಲಿಯೇ ಅತಿ ಹೇಚ್ಚು ವಲಸೆ ಹೋಗುವ ಕೂಲಿಕಾರರ ಜಿಲ್ಲೆಯಾಗಿದೆ. ನರೇಗಾ ಬಡವರ ಪಾಲಿಗೆ ವರದಾನವಾಗಬೇಕಾಗಿದೆ. ಯೋಜನೆ ಬಡವರ ಪಾಲಿಗೆ ಶಾಪವಾಗಿ ಪರಿಣಮಿಸಲು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ ಯೋಜನೆ ದಾರಿ ತಪ್ಪಿದ್ದು. ಜಿಲ್ಲಾ ಪಂಚಾಯತ ಸಿ.ಇ.ಓ ರವರ ಆಲಕ್ಷತನದಿಂದ ಕೆಳ ಹಂತದ ಅಧಿಕಾರಿಗಳ ನಿರ್ಲಕ್ಷದಿಂದ ಯೋಜನೆ ಹಳ್ಳ ಹಿಡಿದಿದೆ. ಜಿಲ್ಲೆಯ ಹಲವಾರು ಪಂಚಾಯತಗಳ ಕೆಲಸಕ್ಕಾಗಿ ಫಾರ್ಮ ನಂ: 6 ಅರ್ಜಿಸಲ್ಲಿಸಿದ್ದರು ಕೆಲಸ ಕೋಡುತ್ತಿಲ್ಲಾ ಕೆಲಸ ಕೊಡದೆ ಇರುವಾಗ ನಿರುದ್ಯೋಗ ಭತ್ಯಗಾಗಿ ಆದೇಶ ಖಚಿತ ಜಾರಿಮಾಡದೆ ಯೋಜನೆ ಮಹತ್ವವನ್ನು ಹಾಳುಮಾಡಿದ್ದಾರೆ ಇದಕ್ಕೇ ನೇರವಾಗಿ ಸಿಇಓ ಅವರೇ ಕಾರಣಾಗಿದ್ದಾರೆ ಎಂದು ಆಕ್ರೊಶವ್ಯಕ್ತಪಡಿಸಿದ್ದಾರೆ.  

ಇದೇ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘಟನೆಯ ಸುರೇಖಾ ರಜಪೂತ ಮಾತನಾಡಿ, ಮೇ 1 ರಿಂದ ಸತತವಾಗಿ ಕೆಲಸ ಕೊಡಬೇಕು. ಒಂದೆ ಬಾರಿಗೆ ಎನ್‌. ಎಮ್ ಆರ್ ಫಾರ್ಮ್‌ ಕೊಡಬೇಕು. ಈಗಾಗಲೆ ಒಂಬಡ್ಸ್‌ಮನ ನಿರುದ್ಯೋಗ ಭತ್ಯೆಯ ಆದೇಶವನ್ನು ಜಾರಿಮಾಡಿ ನಿರುದ್ಯೋಗ ಭರ್ತಿಗೊಳಿಸಬೇಕು. ಗೋಲಗೇರಿ ಗ್ರಾಂ. ಪಂ. ಆಪರೇಟರನ್ನು ಕೂಡಲೆ ವರ್ಗಾವಣೆ ಮಾಡಬೇಕು (ಸಿಂದಗಿ ತಾಲೂಕ) ಆಲಮೇಲ ತಾಲೂಕ ಬಗಲೂರ ಗ್ರಾಂ.ಪಂ 80-ಜನರ ಫಾರಂ: ನಮೂನೆ 6 ತುಂಬಿಕೊಟ್ಟರು ಬರಿ 40 ಜನಕ್ಕೆ ಕೆಲಸ ಕೊಟ್ಟಿದ್ದಾರೆ ಕೂಡಲೆ ಉಳಿದ ಮಹಿಳೆಯರಿಗೆ ಕೇಲಸ ಕೋಡಬೇಕು ಎಂದರು. 

ಇದೇ ಸಂದರ್ಭದಲ್ಲಿ ಕೃಷಿ ಕೂಲಿ ರಾಜ್ಯ ಸಮಿತಿ ಜಂಟಿ ಕಾರ್ಯದರ್ಶಿ ದಾವಲಸಾಬ ನದಾಫ್ ಮಾತನಾಡಿ, ದೇವರಹಿಪ್ಪರಗಿ ಕೊಂಡಗೂಳಿ ಗ್ರಾಂ. ಪಂ ಪಾರ್ಮ ನಂ: 6 ಕೋಟ್ಟು 20-ದಿನಗಳು ಕಳಿದಿವೆ ಕೂಡಲೆ ಕೇಲಸ ಕೋಡಬೇಕು. ಗ್ರಾಂ.ಪಂ ಅಭಿವೃದ್ಧಿ ಅಧಿಕಾರಿ ಹಾಗೂ ತಾಲೂಕ ಪಂಚಾಯತ ಇ.ಓ ಮತ್ತು ಎ.ಡಿ ಪೋನ್ ಕರೆಗಳು ಸ್ವಿಕರಿಸುತ್ತಿಲ್ಲಾ ಯಾಕೆ?. ದೇವರ ಹಿಪ್ಪರಗಿ ಹಾಗೂ ತಾಳಿಕೋಟಿ ಬಂಟನೂರ ಗ್ರಾಂ.ಪಂಯಲ್ಲಿ ಫಾರ್ಮ: 6 ಕೋಟ್ಟಿದ್ದು ಕೆಲಸ ಕೋಡಬೇಕು ಎಂದು ಒತ್ತಾಯಿಸಿದರು.  

ಕೆಪಿಆರ್‌ಎಸ್  ಸಿಂದಗಿಯ ರಮೇಶ ಸಾಸಬಾಳ ಮಾತನಾಡಿ, ಸಿಂದಗಿ ತಾಲೂಕಿನ ಗೋಲಗೇರಿ ಗಾಂ.ಪಂ. ಅಭಿವೃದ್ಧಿ ಅಧಿಕಾರಿ ತಾಂತ್ರಿಕ ಸಹಾಯಕರು ಕೂಡಿಕೊಂಡು 2023-24 ಸಾಲಿನ ಸರಕಾರಿ ಪ್ರಾಥಮಿಕ ಶಾಲೆಗಳಿಗೆ ಹೈಟೆಕ್ ಶೌಚಾಲಯಗಳು ಕಳಪೆ ಆಗಿದ್ದು ಇ.ಓ. ಮತ್ತು ಎ.ಡಿ ಕಾರಣರಾಗಿದ್ದಾರೆ ಕೂಡಲೆ ಕ್ರಮ ಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಕೆಲಸ ಮಾಡುವ ಸ್ಥಳದಲ್ಲಿ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಬೇಕು. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಂ.ಪಂ ಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳ ಹೈಟೆಕ್ ಶೌಚಾಲಯಗಳ ಕಳಪೆ ಕಾಮಗಾರಿಯಾಗಿದ್ದು ಇದಕ್ಕೆ ಸಂಬಂದಿಸಿದಂತೆ ದೂರ ಕೊಟ್ಟಿದ್ದರು ಇದಕ್ಕೆ ಸಂಬಂದಿಸಿದಮತೆ ದೂರ ಕೊಟ್ಟಿದ್ದರು ಕ್ರಮ ವೈಹಿಸಿರುವುದಿಲ್ಲಾ ಯಾಕೆ? ತಕ್ಷಣ ಇವೆಲ್ಲ ತಪ್ಪುಗಳನ್ನು ತಿದ್ದಿಕೊಂಡು ದುಡಿಯುವ ವರ್ಗಕ್ಕೆ ಕೆಲಸ ನೀಡಬೇಕೆಂದು ಅಗ್ರಹಿಸಿದ್ದರು.  

ಒಂದು ವಾರದಲ್ಲಿ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಹಾಗೂ ಮುಂದೆ ಆಗುವ ಸಮಸ್ಯೆಗೆ ನೇರವಾಗಿ ಸರ್ಕಾರವೇ ಕಾರಣವಾಗುತ್ತದೆ.  

ಇದೇ ಸಂದರ್ಭದಲ್ಲಿ ಬಿ.ಸಿ.ಎಮ್‌. ಹಾಸ್ಟೇಲ್ ನೌಕರರ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ, ಶಾಂತಪ್ಪ ಹೊಸಮನಿ, ಅನ್ನಪೂರ್ಣ, ಬಾಬು ರಾಠೋಡ, ಶ್ರೀಮಂತ ರಾಠೋಡ ಈ ಧರಣಿ ಸತ್ಯಾಗ್ರಹದಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳಾ ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು.