ಲೋಕದರ್ಶನ ವರದಿ
ಬೆಳಗಾವಿ, 26: ವಿಮಾನ ನಿಲ್ದಾಣದ ನೆಪ ಮಾಡಿಕೊಂಡ ಕಲಬುಗರ್ಿ ಜಿಲ್ಲೆಯ ಮಾದಿಹಾಳ ತಾಂಡದ ಬಂಜಾರರ ಆರಾಧ್ಯ ದೈವ ಶ್ರೀ ಸಂತ ಸೇವಾಲಾಲ ಹಾಗೂ ಮರಿಯಮ್ಮ ದೇವಿಯ ಮಂದಿರ ಧ್ವಂಸ ಮಾಡಿದವರನ್ನು ಬಂಧಿಸಲು ಒತ್ತಾಯಿಸಿ ಬೆಳಗಾವಿ ಬಂಜಾರ ಸಮುದಾಯದವರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಂದಿರಗಳನ್ನು ಧ್ವಂಸಕ್ಕೆ ಆದೇಶಿಸಿದ ಅಧಿಕಾರಿಗಳು ಹಾಗೂ ಕುಮ್ಮಕ್ಕು ನೀಡಿದವರ ಬಗ್ಗೆ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಅವರನ್ನು ಕೂಡಲೆ ಬಂಧಿಸಬೇಕು. ಮತ್ತು ಕಠಿಣ ಕ್ರಮ ಜರುಗಿಸಬೇಕು. ಅದೇ ಜಾಗದಲ್ಲಿ ಶ್ರೀ ಸಂತ ಸೇವಾಲಾಲ ಹಾಗೂ ಮರಿಯಮ್ಮ ದೇವಿಯ ಮಂದಿರವನ್ನು ಪುನಃ ನಿಮರ್ಿಸಲು ಕೂಡಲೆ ಆದೇಶ ಹೊರಡಿಸಬೇಕು. ಕಲಬುಗರ್ಿ ವಿಮಾನ ನಿಲ್ದಾನಕ್ಕೆ ಶ್ರೀ ಸೇವಾಲಾಲ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಕಲಬುಗರ್ಿ ವಿಮಾನ ನಿಲ್ದಾಣಕ್ಕಾಗಿ ಬಂಜಾರ ಸಮುದಾಯದ ಜನ 760 ಎಕರೆ ಭೂಮಿ ಮತ್ತು ಮನೆಗಳನ್ನು ಕಳೆದುಕೊಂಡಿದ್ದಾರೆ. ಭೂಮಿ ಕಳೆದುಕೊಂಡವರಿಗೆ ಸರ್ಕಾ ರಿ ನೌಕರಿ ನೀಡಬೇಕು. ಬಂಜಾರ ಸಮುದಾಯದ ಧಾಮರ್ಿಕ ಭಾವನೆಗಳಿಗೆ ದಕ್ಕೆ ಭಾರದಂತೆ ನೊಡಿಕೊಳ್ಳಬೇಕು. ಬೇಡಿಕೆಗಳಿಗೆ ಸಕರ್ಾರ ಶೀಘ್ರವೇ ಸ್ಪಂದಿಸದಿದ್ದರೆ ಕಲಬುರ್ಗಿ ಚಲೋ ಚಳುವಳಿ ನಡೆಸಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವದು ಎಂದರು.
ಗಂಗಾಧರ ಏ. ಲಮಾಣಿ, ಗೋಪಿ ಚಂ. ರಾಠೋಡ, ಬಿ.ಎಲ್. ಪಮ್ಮಾರ, ರಾಮಜಿ ಲಮಾಣಿ, ಶೇಖರ ರಾಠೋಡ, ಸಂತೋಷ ಲಮಾಣಿ, ಅಜರ್ುನ ಲಮಾಣಿ, ಶಂಕರ ಚವ್ಹಾಣ ಮೊದಲಾದವರು ಉಪಸ್ಥಿತರಿದ್ದರು.