ಮಹಾಲಿಂಗಪುರ 11: ಅಕ್ರಮ ನಿವೇಶನಗಳನ್ನು ಸಕ್ರಮಗೊಳಿಸುವತ್ತ ಪ್ರಯತ್ನ ನಡೆಸಿರುವ ಪಟ್ಟಭದ್ರ ಹಿತಾಸಕ್ತಿಗಳ ಕ್ರಮಕ್ಕೆ ವಿರೋಧವಾಗಿ ರಬಕವಿ ಬನಹಟ್ಟಿ ತಾಲೂಕು ತಹಸಿಲ್ದಾರ್ ಗೀರೀಶ್ ಸ್ವಾದಿ ಅವರಿಗೆ ಮಹಾಲಿಂಗಪುರ ಪುರಸಭೆಯ ಕೆಲ ಸದಸ್ಯರು ಮಂಗಳವಾರ ಮನವಿ ಸಲ್ಲಿಸಿದರು.
ಮನವಿಯ ಸಾರಾಂಶದಲ್ಲಿ, ಈ ಕೆಂಗೇರಿಮಡ್ಡಿ ಖಾಲಿ ಜಾಗೆಯ ಪೂರ್ವ ಭಾಗದಲ್ಲಿ ಜನವಸತಿ, ಪಶ್ಚಿಮ ಭಾಗದಲ್ಲಿ ಸ್ವಂತ ಮಾಲ್ಕಿಯ ನಿವೇಶನಗಳಿದ್ದು ಇವುಗಳ ಪಕ್ಕದಲ್ಲಿಯೇ ಪುರಸಭೆಯ ಸರ್ವೆ ನಂ. 29/01 ರಲ್ಲಿ 3 ಎಕರೆ 6 ಗುಂಟೆ ಖಾಲಿ ಜಾಗೆ ಇದೆ. ಈ ಪ್ರದೇಶದಲ್ಲಿ ಸುಮಾರು 20 ರಿಂದ 22 ಅಮಾಯಕ ಜನರಿಂದ ಕೆಲ ಪುರಸಭೆ ಸದಸ್ಯರು ಹಾಗೂ ಮುಖಂಡರು ಲಕ್ಷಾಂತರ ಹಣ ಪಡೆದು ಸದರಿ ಜಾಗೆಯಲ್ಲಿ ಅಕ್ರಮ ನಿವೇಶನಗಳನ್ನು ಸೃಷ್ಟಿಸಿ ಹಂಚಿಕೆ ಮಾಡಿದ್ದಾರೆ.
ಈ ವಿಷಯ ಕುರಿತು ಇತ್ತೀಚೆಗೆ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಗಮನಕ್ಕೂ ತಂದಿರುತ್ತೇವೆ. ಆದಾಗ್ಯೂ ಅಕ್ರಮ ನಿವೇಶನಗಳ ಹಂಚಿಕೆಯನ್ನು ಸಕ್ರಮಗೊಳಿಸುವ ಕುರಿತಾಗಿ ಕೆಲ ಹಿತಾಸಕ್ತಿಗಳು ಜಿಲ್ಲಾಧಿಕಾರಿ ಮತ್ತು ಯೋಜನಾ ನಿರ್ದೇಶಕರನ್ನು ಒತ್ತಾಯಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ಇದಕ್ಕೆ ಯಾವುದೇ ಅಧಿಕಾರಿಗಳಾಗಲಿ, ಪ್ರತಿನಿಧಿಗಳಾಗಲಿ ಸಹಕಾರ ನೀಡದೆ ಕಾನೂನು ರೀತ್ಯ ಕ್ರಮ ಕೈಗೊಂಡು ಅವ್ಯವಹಾರ ನಡೆದಿರುವ ಅಲ್ಲಿನ ಶೆಡ್ ಗಳನ್ನು ತೆರವುಗೊಳಿಸಿ ಕೋಟ್ಯಂತರ ಬೆಲೆ ಬಾಳುವ ಪುರಸಭೆ ಜಾಗೆಯನ್ನು ಮರು ವಶಪಡಿಸಿಕೊಳ್ಳಬೇಕೆಂದು ಮನವಿಯಲ್ಲಿ ಸದಸ್ಯರು ಬಲವಾಗಿ ಆಗ್ರಹಿಸಿದ್ದಾರೆ.
ಇಲ್ಲಿಯ ಅಕ್ರಮ ನಿವಾಸಿಗಳು ಈಗಾಗಲೇ ಕೆಂಗೇರಿಮಡ್ಡಿಯ ಸರ್ಕಾರಿ ಜಾಗೆಗಳಲ್ಲಿ ಮತ್ತು ಇನ್ನೂ ಕೆಲವರು ಪಟ್ಟಣದಲ್ಲಿ ಎರಡಂತಸ್ತಿನ ಸ್ವಂತ ಮನೆಗಳನ್ನು ಸಹ ಹೊಂದಿದ್ದಾರೆ. ಇವರು ಹೇಗೆ ನಿರ್ವಸ್ಥಿಕರೆನುಸುತ್ತಾರೆ. ಇದೊಂದು ಸೋಜಿಗದ ಸಂಗತಿ ಅಲ್ಲವೆ ಎಂದು ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ, ರವಿ ಜವಳಗಿ, ಪ್ರಹ್ಲಾದ್ ಸಣ್ಣಕ್ಕಿ, ಬಸವರಾಜ ಚಮಕೇರಿ, ಲಕ್ಷ್ಮಿ ಮಹಾಲಿಂಗಪ್ಪ. ಮುದ್ದಾಪೂರ, ಸರಸ್ವತಿ ಚೆನ್ನಪ್ಪ. ರಾಮೋಜಿ, ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಸದರಿ ವಿಷಯವನ್ನು ರಾಜ್ಯಪಾಲರು ಮತ್ತು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೂ ಇರಲಿ ಎಂದು ಮನವಿ ಪತ್ರಗಳನ್ನು ರವಾನೆ ಮಾಡಿರುವುದಾಗಿ ಎನ್ನಲಾಗಿದೆ.
ಈ ಅಕ್ರಮದ ಗಂಭೀರ ಆರೋಪ ಪ್ರತ್ಯಾರೋಪಗಳು, ನಡೆದಾಗಲೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ ತಿಮ್ಮಾಪುರ, ತೇರದಾಳ ಮತ ಕ್ಷೇತ್ರದ ಶಾಸಕ ಸಿದ್ದು ಸವದಿ ಅಲ್ಲದೆ ಜಿಲ್ಲಾಧಿಕಾರಿಗಳು, ತಾಲೂಕು ಅಧಿಕಾರಿಗಳು, ಸ್ಥಳೀಯ ಪುರಸಭೆ ಮೌನ ವಹಿಸಿರುವುದು ಜನತೆಯಲ್ಲಿಯ ಅಕ್ರಮದ ಗೊಂದಲ ಮುಂದುವರಿದಿದೆ.
ಎನೇಯಾಗಲಿ ಅಲ್ಲಿ ವಾಸವಿರುವ ನಿಜವಾದ ಮನೆ ಇಲ್ಲದವರಿಗೆ ಬೇರೆಡೆ ಯಾದರೂ ನಿವೇಶನಗಳನ್ನು ನೀಡಿ ಮಾನವೀಯತೆ ಮೆರೆಯಬೇಕು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂರಿಲ್ಲದವರಿಗೆ ಸೂರು, ಹಸಿದವನಿಗೆ ಅನ್ನ ಘೋಷಣೆಗೆ ಮಹತ್ವ ಬರುತ್ತದೆ.