ಹಡಪದ ಅಪ್ಪಣ್ಣ ಸಮಾಜ ಸುಧಾರಕರಾಗಿದ್ದರು: ರಮೇಶ್ ಅಳಗುಂಡಿ

ಹಡಪದ ಅಪ್ಪಣ್ಣ ಸಮಾಜ ಸುಧಾರಕರಾಗಿದ್ದರು: ರಮೇಶ್ ಅಳಗುಂಡಿ  Appanna of Hadapada was a social reformer: Ramesh Alagundi

ಲೋಕದರ್ಶನ ವರದಿ

ಬೆಟಗೇರಿ 29: ಹಡಪದ ಅಪ್ಪಣ್ಣ ಅವರು 12ನೇ ಶತಮಾನದ ವಚನ ಚಳವಳಿ ಹಾಗೂ ಸಾಮಾಜಿಕ ಕ್ರಾಂತಿಯ ಪ್ರಮುಖ ಹರಿಕಾರರಲ್ಲಿ ಒಬ್ಬರಾಗಿದ್ದರು ಎಂದು ಗೋಕಾಕ ತಾಲೂಕಿನ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಮೇಶ್ ಅಳಗುಂಡಿ ಹೇಳಿದರು.  

ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಸವಣ್ಣನವರ ಆಪ್ತ ಅನುಯಾಯಿಯಾಗಿದ್ದ ಹಡಪದ ಅಪ್ಪಣ್ಣ ಅವರು ಅನುಭವ ಮಂಟಪದ ಸಕ್ರಿಯ ಸದಸ್ಯರಾಗಿ ಸಮಾಜದಲ್ಲಿ ಸಮಾನತೆ, ಸೇವೆ ಹಾಗೂ ಶ್ರಮದ ಮಹತ್ವವನ್ನು ಸಾರಿದ್ದರು ಎಂದು ತಿಳಿಸಿದರು.  

ಇದಕ್ಕೂ ಮುನ್ನ ಮುಖ್ಯೋಪಾಧ್ಯಾಯ ರಮೇಶ್ ಅಳಗುಂಡಿ ಅವರು ಶಿವಶರಣ ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.  

ಕಾರ್ಯಕ್ರಮದಲ್ಲಿ ಸದಾನಂದ ತೇರಣಿ, ಈರಣ್ಣ ಪಟಗುಂಡಿ, ರಾಕೇಶ್ ನಡೋಣಿ, ವೈ.ಎಂ. ವಗ್ಗರ, ಶುಭಾ ಬಿ., ಪ್ರಕಾಶ ಕುರಬೆಟ, ಭಾಗ್ಯಶ್ರೀ ನಾಯಕ, ಮಲ್ಲಾರಿ ಪೋಳ, ಗಣಪತಿ ಭಾಗೋಜಿ, ಸೌಮ್ಯಶ್ರೀ ಗಂಗಾ, ಮಂಜುನಾಥ ಸವತಿಕಾಯಿ, ಸಿರಾಜ್ ಅಹ್ಮದ್ ಜಿಡಮಣಿ, ನಾಗರಾಜ ಅರಳಿಮಟ್ಟಿ, ಬಸವರಾಜ ಭೋಸಲೆ, ಭೀಮಶಿ ನರಸಣ್ಣವರ, ದೀಪಾ ದಾಸಂಗಳಿ, ಕಿರಣ ಕಮತ, ಶಾಲೆಯ ಸಹಶಿಕ್ಷಕರು, ಅತಿಥಿ ಶಿಕ್ಷಕರು, ಬಿಸಿಯೂಟ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳು ಉಪಸ್ಥಿತರಿದ್ದರು.